ಕಲ್ಲು ದೇವರಿಗೆ ಕಾಡೋ ಶಕ್ತಿನೂ ಇಲ್ಲ, ಕಾಪಾಡೋ, ಶಕ್ತಿನೂ ಇಲ್ಲ ಡಾ. ಶಿವಗಂಗಾ ರುಮ್ಮಾ
ಕಲ್ಲು ದೇವರಿಗೆ ಕಾಡೋ ಶಕ್ತಿನೂ ಇಲ್ಲ, ಕಾಪಾಡೋ ಶಕ್ತಿನೂ ಇಲ್ಲ : ಡಾ. ಶಿವಗಂಗಾ ರುಮ್ಮಾ
ಕಲಬುರಗಿ : ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ವತಿಯಿಂದ ನಗರದ ಜೈಭವಾನಿ ಕನ್ವೆನ್ನನ್ ಹಾಲ್ ನಲ್ಲಿ ಶನಿವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಮೂರನೇ ಗೋಷ್ಠಿಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲಬುರಗಿ,ಕೈ.ಕೇಂ.ವಿಶ್ವವಿದ್ಯಾಲಯ ಪ್ರಾಧ್ಯಾಪಕಿ ಡಾ.ಶಿವಗಂಗಾ ರುಮ್ಮಾ. ಅವರು ಕಲ್ಲು ದೇವರಿಗೆ ಕಾಡೋ ಶಕ್ತಿನೂ ಇಲ್ಲ, ಕಾಪಾಡೋ ಶಕ್ತಿನೂ ಇಲ್ಲ. ಹಾಗಾಗಿ ಅವರ ಪೂಜೆ ಮಾಡಿ ಉಪಯೋಗವೇನು. ಫಲ ಕಾಣದ ಆ ಪ್ರಯತ್ನವಾದರೂ ಏಕೆ? ಅದಕ್ಕಾಗಿ ಹಣ ಸಮಯ ಶಕ್ತಿಯನ್ನು ಏಕೆ ವ್ಯಯಿಸುವುದು.
ನಮಗೆ ಬದುಕು ಸಂಸ್ಕಾರ ಶಿಕ್ಷಣ ಅನ್ನ ನೀಡಿದ ನಮ್ಮ ಪೂರ್ವಜರು ನಮಗೆ ದೇವರಾಗಬೇಕು. ಹಾಗಾಗಿಯೇ ನಮ್ಮ ಜನಪದರು ತಮ್ಮ ಪೂರ್ವಜರನ್ನು ದೇವರಾಗಿ ಮನೆಯಲ್ಲಿ ಕೂಡಿಸಿಕೊಳ್ಳುತ್ತಾರೆ. ಅವರಲ್ಲಿ ಯಾರು ದೇವರು ಎಂಬ ಬಗ್ಗೆ ಯಾವುದೇ ಗೊಂದಲವಿಲ್ಲ. ಶಿಕ್ಷಿತ ವರ್ಗಗಳಲ್ಲಿಯೇ ಈ ಗೊಂದಲವಿದೆ ಎಂದು ಹೇಳಿದರು.
ಕಲ್ಲು ದೇವರು ದೇವರಲ್ಲ ವಿಷಯ ಕುರಿತು , ದೊಡ್ಡಬಳ್ಳಾಪುರ ,ಕೈ.ರಾ.ವೈ.ಸಂ. ಪರಿಷತ್ತು ಸಂಸ್ಥಾಪಕ ಅಧ್ಯಕ್ಷರಾದ ಡಾ.ಹುಲಿಕಲ್ ನಟರಾಜ್ ಮಾತನಾಡಿದರು.
"ಅನುಭವ ಮಂಟಪ ಅನುವು ಮಾಡಿದಾತ" ಕುರಿತು ನಿವೃತ್ತ ಪ್ರಾಚಾರ್ಯರು ಡಾ. ನೀಲಾಂಬಿಕ ಪೊಲೀಸ್ ಪಾಟೀಲ್ ಮಾತನಾಡಿದರು.
ಶ್ರೀಮತಿ ಮಹಾದೇವಿ ಜನಕಟ್ಟಿ, ಡಾ ಶಾರದಾದೇವಿ ಜಾಧವ್ ಗೌರವ ಉಪಸ್ಥಿತರಿದ್ದರು.
ಡಾ.ಪ್ರೇಮಾ ಅಪಚಂದ ಸ್ವಾಗತಿಸಿದರು,ಸಾಕ್ಷಿ ಶಿವರಾಂಜನ್ ಸತ್ಯಂ ಪೆಟ್ ನಿರೂಪಿಸಿದರು. ಸಂಜಯ್ ಪಾಟೀಲ್ ವಂದಿಸಿದರು.