1047ನೇ ದಾಸಿಮಯ್ಯ ಜಯಂತಿ ಉತ್ಸವ ಸಮಿತಿ ಕಾರ್ಯಾಲಯ ಉದ್ಘಾಟನೆ

1047ನೇ ದಾಸಿಮಯ್ಯ ಜಯಂತಿ ಉತ್ಸವ ಸಮಿತಿ ಕಾರ್ಯಾಲಯ ಉದ್ಘಾಟನೆ

1047ನೇ ದಾಸಿಮಯ್ಯ ಜಯಂತಿ ಉತ್ಸವ ಸಮಿತಿ ಕಾರ್ಯಾಲಯ ಉದ್ಘಾಟನೆ 

ಕಲಬುರಗಿ: ದಿ. 23-03-2026 ರಂದು ಜರುಗಲಿರುವ 1047ನೇ ದಾಸಿಮಯ್ಯ ಜಯಂತಿ ಉತ್ಸವದ ಅಂಗವಾಗಿ ಉತ್ಸವ ಸಮಿತಿಯ ಕಾರ್ಯಾಲಯವನ್ನು ಇಂದು ಸಂಜೆ 6.30 ಗಂಟೆಗೆ ನಗರದ SRG ಸಂಕಿರಣ, ಖಾದ್ರಿ ಮಸೀದಿ ಹತ್ತಿರ, ಆಳಂದ ರಸ್ತೆಯಲ್ಲಿ ಉದ್ಘಾಟಿಸಲಾಯಿತು.

ನೇಕಾರ ಸಮುದಾಯದ ಮುಖಂಡರು ಹಾಗೂ ಹಿರಿಯ ಕಾಂಗ್ರೆಸ್ ಧುರೀಣರಾದ ಚಂದ್ರಶೇಖರ್ ಸುತ್ತಾನಪೂರ ಅವರ ಸಮ್ಮುಖದಲ್ಲಿ ಉತ್ಸವ ಸಮಿತಿಯ ಅಧ್ಯಕ್ಷ ಶಾಂತಕುಮಾರ ಯಳಸಂಗಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪ್ರಕಾಶ್ ಯಂಕಂಚಿ, ಕಾರ್ಯದರ್ಶಿ ಕುಶಲ ಯಡವಳ್ಳಿ, ಖಜಾಂಚಿ ಸತೀಶ್ ಕುಮಾರ ಜಮಖಂಡಿ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜದ ಹಿರಿಯರಾದ ಶಿವಪುತ್ರಪ್ಪ ಭಾವಿ, ರೇವಣಸಿದ್ಧಪ್ಪ ಗಡ್ಡದ, ದಾಸಿಮಯ್ಯ ವಡ್ಡನಕೇರಿ, ಶ್ರಾವಣಕುಮಾರ ಮುನ್ನೊಳ್ಳಿ, ರುದ್ರಪ್ಪ ಗಂಜಿ, ಬಸವರಾಜ್ ಕರದಳ್ಳಿ, ವೀರ ಸಂಗಪ್ಪ ಬುಳ್ಳಾ, ಪ್ರಕಾಶ ಮಾಲಿಪಾಟೀಲ, ಗುರುರಾಜ್ ಡಾ. ಚನ್ನಬಸವರಾಜ್, ನೇಕಾರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಪ್ರದೀಪ್ ಸಂಗಾ, ರಾಜಶೇಖರ್ ಘಸನೆ, ಬೇಲಿ ಮಹದೇವಪ್ಪ, ನಾಗಣ್ಣ ಜುಂಜಾ ಹಾಗೂ ಯುವ ನಾಯಕರಾದ ಲಷ್ಮಿಕಾಂತ್ ಜೋಳದ, ಅಶೋಕ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು 

ಕಾರ್ಯಕ್ರಮದ ಉದ್ದೇಶ ಹಾಗೂ ಜಯಂತಿ ಉತ್ಸವದ ಪೂರ್ವ ಸಿದ್ಧತೆಗಳ ಕುರಿತು ಪ್ರಚಾರ ಸಮಿತಿ ಅಧ್ಯಕ್ಷ ನ್ಯಾಯವಾದಿ ವಿನೋದಕುಮಾರ ಜೆನವೇರಿ ಮಾಹಿತಿ ನೀಡಿದರು. 1047ನೇ ದಾಸಿಮಯ್ಯ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಸಮಿತಿ ಸಕಲ ಸಿದ್ಧತೆಗಳನ್ನು ಕೈಗೊಂಡಿದ್ದು, ಸಮಾಜದ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿದರು.