ದೋರನಳ್ಳಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

ದೋರನಳ್ಳಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

ದೋರನಳ್ಳಿಯಲ್ಲಿ ವಾತ್ಸಲ್ಯ ಮನೆ ಹಸ್ತಾಂತರ

ಶಹಾಪುರ : ವಸತಿ ರಹಿತರಿಗೆ,ನಿರ್ಗತಿಕರಿಗೆ,ಗುಡಿಸಲು ಹೊಂದಿದ ಬಡ ಕುಟುಂಬಗಳಿಗೆ ಸೂರು ಕಲ್ಪಿಸುವುದೆ ಈ ವಾತ್ಸಲ್ಯ ಮನೆ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮಧ್ಯಪಾನ ಸಯಂಮ ಮಂಡಳಿಯ ಅಧ್ಯಕ್ಷರಾದ ಶರಣಪ್ಪ ಸಲದಾಪುರ ಹೇಳಿದರು.

ಶಹಾಪುರ ತಾಲೂಕಿನ ದೋರನಳ್ಳಿ ಗ್ರಾಮದ ಶಂಕ್ರಮ್ಮ ಎಂಬ ಬಡ ಹಾಗೂ ನಿರ್ಗತಿಕ ಮಹಿಳಾ ಫಲಾನುಭವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ವಾತ್ಸಲ್ಯ ಮನೆಯನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರ ಮಾಡಬೇಕಾದ ಕೆಲಸಗಳು ಈ ಧರ್ಮಸ್ಥಳ ಟ್ರಸ್ಟ್ ಮಾಡುತ್ತಿದೆ ಇದರ ಕಾರ್ಯ ಶ್ಲಾಘನೀಯವಾದದ್ದು ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ನಿರ್ದೇಶಕರಾದ ವಸಂತಗೌಡ ಬಿ. ಮಾತನಾಡಿ ವಾತ್ಸಲ್ಯ ಯೋಜನೆ ಅಡಿಯಲ್ಲಿ ನಿರ್ಗತಿಕ ಬಡವರಿಗೆ ಕರ್ನಾಟಕ ರಾಜ್ಯಾದ್ಯಂತ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ ಬಿ.ಸಿ.ಟ್ರಸ್ಟ್ ವತಿಯಿಂದ 784 ವಾತ್ಸಲ್ಯ ಮನೆಗಳು ನಿರ್ಮಿಸಿ ಫಲಾನುಭವಿಗಳಿಗೆ ಹಸ್ತರಿತಹಿಸಲಾಗಿದೆ,ಜೊತೆಗೆ ಅವರಿಗೆ ಪೌಷ್ಟಿಕ ಆಹಾರದ ಜೊತೆಗೆ ಪ್ರತಿ ತಿಂಗಳು 1000 ರೂ. ಮಾಶಾಸನ ಕೂಡ ನೀಡಲಾಗುತ್ತದೆ ಇದು ಡಾ.ವೀರೇಂದ್ರ ಹೆಗ್ಗಡೆ ಹಾಗೂ ಮಾತೋಶ್ರೀ ಡಾ: ಹೇಮಾವತಿ ಹೆಗ್ಗಡೆ ಅಮ್ಮನವರ ಕನಸಿನ ಕಲ್ಪನೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಯೋಜನಾಧಿಕಾರಿ ಶಶಿಕಿರಣ್, ಅಲೆಮಾರಿ ಸಮಾಜದ ಮುಖಂಡರಾದ ಎ.ವಾಯ್. ಪದ್ಮಾಕರ,ಸಿಬ್ಬಂದಿಗಳಾದ ಬೀಸಯ್ಯ,ಜೆವಿಕೆ ಅಧಿಕಾರಿ ರೇಣುಕಾ ಪತ್ರಕರ್ತ ಬಸವರಾಜ ಶಿಣ್ಣೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.