ಜಿಲ್ಲಾ ಮಟ್ಟದ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಕುರಿತು ಶಾಹಾಬಾದನಲ್ಲಿ ಸಭೆ ಹಾದಿಮನಿ

ಜಿಲ್ಲಾ ಮಟ್ಟದ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಕುರಿತು ಶಾಹಾಬಾದನಲ್ಲಿ ಸಭೆ ಹಾದಿಮನಿ

|ಜಿಲ್ಲಾ ಮಟ್ಟದ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ| 

ಅಭೂತ ಪೂರ್ವವಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯ :.. 

ಶಹಾಬಾದ :..ಶರಣರ ನಾಡಿನಲ್ಲಿ ನಡೆಯಲಿರುವ ದಲಿತ ಚಳವಳಿ ಸಾಹಿತ್ಯ ಸಮ್ಮೇಳನ ಅಭೂತಪೂರ್ವವಾಗಿ ನಡೆಸಲು ಎಲ್ಲರ ಸಹಕಾರ ಅಗತ್ಯ ಮತ್ತು ಅದರ ಜೊತೆಗೆ ದಲಿತ ಹೋರಾಟದ ಅಸ್ಮಿತೆ ಎತ್ತಿ ಹಿಡಿಯಬೇಕು ಎಂದು ಕರಾದಸಂಸ ಜಿಲ್ಲಾ ಸಂಚಾಲಕ ಸುರೇಶ ಹಾದಿಮನಿ ಹೇಳಿದರು.  

ಅವರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲ್ಲೂಕ ಘಟಕದ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ದಲಿತ ಚಳುವಳಿ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತ ವತಿಯಿಂದ ಆ. 17 ಮತ್ತು18ರಂದು ಆಯೋಜಿಸಿರುವ ಜಿಲ್ಲಾ ಮಟ್ಟದ ಪ್ರಥಮ ದಲಿತ ಚಳುವಳಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಡಿ. ಜಿ. ಸಾಗರ ಅವರನ್ನು ಆಯ್ಕೆ ಮಾಡಲಾಗಿದ್ದು ಸಮ್ಮೇಳನದ ಯಶಸ್ಸಿಗೆ ದಲಿತ ಸಂಘಟನೆಗಳು ಶ್ರಮಿಸಬೇಕು ಎಂದರು. 

ನಗರ ಸಭೆ ಮಾಜಿ ಸದಸ್ಯ ರಾಮಕುಮಾರ ಸಿಂಗೆ ಮಾತನಾಡಿ, ದಲಿತ ಹೋರಾಟದ ಅಸ್ಮಿತೆಯನ್ನು ಎತ್ತಿ ಹಿಡಿಯಲು ಇಂಥ ಸಮ್ಮೇಳನ ಹಮ್ಮಿಕೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ನಿಜಕ್ಕೂ ಅಭಿನಂದನಾರ್ಹ, ಕಸಾಪ ಜಿಲ್ಲಾಧ್ಯಕ್ಷರ ಕ್ರಿಯಾಶೀಲತೆಗೆ ನಾವೆಲ್ಲರೂ ಬೆಂಬಲಿಸ ಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕ ಸಂಚಾಲಕ ಮಹಾದೇವ ತರನಳ್ಳಿ, ಕಲಬುರಗಿಯಲ್ಲಿ ಎರಡು ದಿನಗಳ ಕಾಲ ನಡೆಯುವ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ.ಡಿ.ಜಿ ಸಾಗರ ಅವರ ವರ್ಣರಂಜಿತ ಭವ್ಯ ಮೆರವಣಿಗೆಯನ್ನು ಡಾ. ಬಿಆರ್‌.ಅಂಬೇಡ್ಕರ ವೃತದಿಂದ ವಿಶ್ವೇಶ್ವರಯ್ಯ ಭವನದ ವರೆಗೆ ಬಸವೇಶ್ವರ ರ ಮತ್ತು ಅಂಬೇಡ್ಕರ್ ರ ಪ್ರತಿಮೆ ಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಯು ವೇದಿಕೆ ತಲುಪಲಿದೆ, ನಾಡಿನ ಹಿರಿಯ ಸಾಹಿತಿಗಳು, ಕವಿಗಳು, ರಂಗಕರ್ಮಿಕಗಳು, ಹೋರಾಟಗಾರರು ಮತ್ತು ದಲಿತ ಹಾಗೂ ಕಸಾಪ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸೇರಿದಂತೆ ನಾನಾ ಕ್ಷೇತ್ರದ ಪ್ರಮುಖರು ಭಾಗವಹಿಸಲಿದ್ದಾರೆ ನಾವೆಲ್ಲ ಸೇರಿ ಸಮ್ಮೇಳನದ ಯಶಸ್ಸಿಗೆ ಶ್ರಮಿಸೋಣ ಎಂದರು.

ಪೂರ್ವ ಭಾವಿ ಸಭೆಯಲ್ಲಿ ತಿಪ್ಪಣ್ಣ ಧನ್ನೇಕರ, ಮಹಾದೇವ ಮೇತ್ರೆ, ಜೈ ಭೀಮ ರಸ್ತಾಪೂರ, ರಾಕೇಶ ಜಾಯಿ, ರಮೇಶ ಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ವರದಿ.ನಾಗರಾಜ ದಂಡವತಿ