ಪಂಚಮಸಾಲಿಗಳ ಮೇಲೆ ಸರಕಾರ ದೌರ್ಜನ್ಯ ಖಂಡನೀಯ - ದೇವೇಂದ್ರಪ್ಪ ತೋಟಗೇರ

ಪಂಚಮಸಾಲಿಗಳ ಮೇಲೆ ಸರಕಾರ ದೌರ್ಜನ್ಯ ಖಂಡನೀಯ - ದೇವೇಂದ್ರಪ್ಪ ತೋಟಗೇರ

 ಪಂಚಮಸಾಲಿಗಳ ಮೇಲೆ ಸರಕಾರ ದೌರ್ಜನ್ಯ ಖಂಡನೀಯ - ದೇವೇಂದ್ರಪ್ಪ ತೋಟಗೇರ

ಶಹಪುರ (ಗ್ರಾ) ಕೃಷಿ ಕಾಯಕವನ್ನು ಜೀವಾಳವನ್ನಾಗಿಕೊಂಡು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬೆಳಗಾವಿಯ ಸುವರ್ಣ ಸೌಧದ ಮುಂದೆ 2ಎ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಪಂಚಮಸಾಲಿ ಸಮಾಜದವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರುವುದು ತುಂಬಾ ಖಂಡನೀಯ ಎಂದು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ದೇವೇಂದ್ರಪ್ಪ ತೋಟಗೇರ ತೀವ್ರವಾಗಿ ಖಂಡಿಸಿದ್ದಾರೆ.

ನ್ಯಾಯಯುತವಾಗಿ ಮೀಸಲಾತಿ ಹೋರಾಟ ಕೇಳಿದರೆ ನಮ್ಮ ಸಮಾಜದ ಜನರ ಮೇಲೆ ದುರುದ್ದೇಶ ಪೂರಕವಾಗಿ, ಪೊಲೀಸರು ದೌರ್ಜನ್ಯ,ದಬ್ಬಾಳಿಕೆ ಮಾಡಿದ್ದಲ್ಲದೆ,ಮಾರಣಾಂತಿಕ ಹಲ್ಲೆ ಮಾಡಿದ್ದಾರೆ,ನಮ್ಮ ಹೋರಾಟ ಹತ್ತಿಕ್ಕುವ ಸಂಚು ನಡೆದಿದೆ,ನ್ಯಾಯ ಕೇಳೋದು ಪ್ರತಿಯೊಬ್ಬ ವ್ಯಕ್ತಿಯ ಜನ್ಮಸಿದ್ಧ ಹಕ್ಕು,ಸರ್ಕಾರದ ಮತ್ತು ಪೊಲೀಸರ ಈ ದುರ್ನಡತೆಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಮ್ಮ ಹೋರಾಟದ ತೀವ್ರ ಸ್ವರೂಪ ಪಡೆಯಲು ಕಾರಣವಾಗಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಥ ನಡೆ,ಹಿಂದಿನ ರೈತ ಚಳುವಳಿಗಳನ್ನು ಬಗ್ಗು ಬಡಿದ ರೀತಿ ನೀತಿಗಳನ್ನು ನಮ್ಮೆಲ್ಲರಿಗೂ ನೆನಪಿಸಿಕೊಡುತ್ತಿದೆ. ಬೇಜಾವಾಬ್ದಾರಿಯಿಂದ ನಡೆದುಕೊಂಡ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಕ್ಷಮೆಯಾಚಿಸಬೇಕು ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.