ಸಂತ ಸೇವಾಲಾಲರ ತತ್ವಾದರ್ಶನಗಳನ್ನು ಪಾಲಿಸಿ: ಶಾಸಕ ಪ್ರಭು ಚವ್ಹಾಣ

ಸಂತ ಸೇವಾಲಾಲರ ತತ್ವಾದರ್ಶನಗಳನ್ನು ಪಾಲಿಸಿ: ಶಾಸಕ ಪ್ರಭು ಚವ್ಹಾಣ

ಲಷ್ಕರ್ ನಾಯಕ್ ತಾಂಡಾದಲ್ಲಿ ಸೇವಾಲಾಲ್ ಮಹಾರಾಜರ ಮೂರ್ತಿ ಅನಾವರಣ

ಸಂತ ಸೇವಾಲಾಲರ ತತ್ವಾದರ್ಶನಗಳನ್ನು ಪಾಲಿಸಿ: ಶಾಸಕ ಪ್ರಭು ಚವ್ಹಾಣ

ಕಮಲನಗರ ತಾಲ್ಲೂಕಿನ ಮಾಳೆಗಾಂವ ಗ್ರಾಮದ ವ್ಯಾಪ್ತಿಯ ಲಷ್ಕರ್ ನಾಯಕ್ ತಾಂಡಾದಲ್ಲಿ ಬಂಜಾರಾ ಸಮಾಜದ ಕುಲಗುರು, ಸಮಾಜ ಸುಧಾರಕರಾದ ಸಂತ ಶ್ರೀ ಸೇವಾಲಾಲ್ ಮಹಾರಾಜರ ಮೂರ್ತಿಯನ್ನು ಮಾ.5 ರಂದು ಅನಾವರಣಗೊಳಿಸಲಾಯಿತು.

ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರೂ ಆದ ಪೌರಾದೇವಿಯ ಪೂಜ್ಯ ಶ್ರೀ ಬಾಬುಸಿಂಗ್ ಮಹಾರಾಜರ ದಿವ್ಯ ಸಾನ್ನಿಧ್ಯದಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಸಂತ ಸೇವಾಲಾಲ್ ಮಹಾರಾಜರು ಬಂಜಾರ ಸಮಾಜದ ಧರ್ಮಗುರುಗಳು, ಅಜ್ಞಾನ, ಮೂಢನಂಬಿಕೆ, ದುಶ್ಚಟಗಳು ಒಳಗೊಂಡು ನಾನಾ ರೀತಿಯ ಸಮಸ್ಯೆಗಳಿಂದ ಕೂಡಿದ್ದ ಸಮಾಜವನ್ನು ಸರಿದಾರಿಗೆ ತಂದಿದ್ದಾರೆ. ಸಮಾನತೆ, ಸೌಹಾರ್ದತೆ ಮತ್ತು ಸತ್ಯನಿಷ್ಠೆಯ ಸಂದೇಶವನ್ನು ನೀಡಿದ ಮಹಾನ್ ಸಂತರಾಗಿದ್ದಾರೆ. ಅವರ ತತ್ವಾದರ್ಶಗಳು ಇಂದಿನ ಯುವಜನತೆಗೆ ದಾರಿದೀಪವಾಗಿದ್ದು, ಅವುಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.

ಇಂದಿಗೂ ಸಮಾಜದಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಕೆಲವರು ಇಂದಿಗೂ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಲು ಹಿಂದೇಟು ಹಾಕುತ್ತಿರುವುದು ಕಾಣಿಸುತ್ತಿದೆ. ಎಲ್ಲರೂ ತಮ್ಮ ಮಕ್ಕಳಿಗೆ ತಪ್ಪದೇ ಶಾಲೆಗೆ ಕಳುಹಿಸಬೇಕು. ಉತ್ತಮ ಶಿಕ್ಷಣ ಕೊಡಿಸಬೇಕು. ಅವರಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಮಕ್ಕಳ ಉಜ್ವಲ ಭವಿಷ್ಯದ ಹಿತೃಷ್ಟಿಯಿಂದ ಯೋಚಿಸಬೇಕು ಎಂದು ಹೇಳಿದ ಅವರು, ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪ ತೊಡಬೇಕು. ಸಮಾಜದ ಶಿಕ್ಷಣ ಪ್ರಮಾಣ ಮತ್ತಷ್ಟು ಸುಧಾರಿಸಬೇಕು. ಈ ದಿಶೆಯಲ್ಲಿ ಎಲ್ಲರೂ ಪ್ರಮಾಣಿಕವಾಗಿ ಪ್ರಯತ್ನಿಸಬೇಕು ಎಂದರು.

ಸಂತ ಸೇವಾಲಾಲರ ತತ್ವಗಳು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ, ಎಲ್ಲರಿಗೂ ಮಾರ್ಗದರ್ಶನ ನೀಡುವಂತಿವೆ. ಮಹಾರಾಜರ ಮೂರ್ತಿ ಸ್ಥಾಪಿಸಿದರೆ ಮಾತ್ರ ಸಾಲದು. ಅವರ ಅವರ ತತ್ವ ಸಂದೇಶಗಳನ್ನು ಪಾಲಿಸಬೇಕು. ಸಮಾಜದ ಒಳಿತಿಗಾಗಿ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಶಾಸಕರು ಕರೆ ನೀಡಿದರು.

ಈ ಸಂದರ್ಭದಲ್ಲಿ ಪೂಜ್ಯ ಸಂಗ್ರಾಮ್ ಮಹಾರಾಜರು, ಪೂಜ್ಯ ದೇವಿದಾಸ ಮಹಾರಾಜರು, ಗೋವಿಂದ ಮಹಾರಾಜರು, ಮುಖಂಡರಾದ ಶಿವರಾಜ ಅಲ್ಮಾಜೆ, ಬಾಬುರಾವ ತೋರ್ಣಾವಾಡಿ, ಅನೀಲ ಬಿರಾದಾರ, ಉಮಾಕಾಂತ ದೇಶಮುಖ, ಧನಾಜಿ ರಾಠೋಡ, ಪ್ರತೀಕ ಚವ್ಹಾಣ, ಸಚಿನ ರಾಠೋಡ, ಸುಜಿತ ರಾಠೋಡ, ಪ್ರದೀಪ ಪವಾರ, ಸಂಜು ಜಾಧವ, ಲಕ್ಷö್ಮಣ ಜಾಧವ, ವಸಂತ ರಾಠೋಡ ಹುಲ್ಯಾಳ ಸೇರಿದಂತೆ ಗ್ರಾಮಸ್ಥರು, ಸಮಾಜದ ಮುಖಂಡರು ಹಾಗೂ ಗಣ್ಯರು ಭಾಗವಹಿಸಿ ಸಂತ ಸೇವಾಲಾಲ್ ಮಹಾರಾಜರಿಗೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಳಸ ಹೊತ್ತ ಮಹಿಳೆಯರು ಡೊಂಗರಗಾAವ ಕ್ರಾಸ್‌ನಿಂದ ಲಷ್ಕರ್ ನಾಯಕ್ ತಾಂಡಾವರೆಗೆ ಭವ್ಯ ಮೆರವಣಿಗೆ ನಡೆಸಿ ಗಮನ ಸೆಳೆದರು. ಯುವಕರು ಉತ್ಸಾಹದಿಂದ ಬೈಕ್ ರ‍್ಯಾಲಿ ನಡೆಸಿ ಭಕ್ತಿಭಾವ ಪ್ರದರ್ಶಿಸಿದರು.