ಕಿನ್ನರಿ ಬೊಮ್ಮಯ್ಯ:ಕೆಲವು ಒಳನೋಟಗಳು

ಕಿನ್ನರಿ ಬೊಮ್ಮಯ್ಯ:ಕೆಲವು ಒಳನೋಟಗಳು

ಕಿನ್ನರಿ ಬೊಮ್ಮಯ್ಯ:ಕೆಲವು ಒಳನೋಟಗಳು

ಕಿನ್ನರಿ ಬ್ರಹ್ಮಯ್ಯ ಶರಣರು ನೆಲೆಸಿದ ಪುಣ್ಯದ ತಾಣದವರೇ ಆದ ಡಾ. ಚಿದಾನಂದ ಚಿಕ್ಕಮಠ ಅವರು ತುಂಬ ಆಸಕ್ತಿವಹಿಸಿ ಕಿನ್ನರಿ ಬ್ರಹ್ಮಯ್ಯನವರನ್ನು ಕುರಿತು ಕೆಲವು ಸಂಶೋಧನಾ ಬರಹಗಳನ್ನು ಬರೆದು ಪ್ರಕಟಿಸಿರುವರು. ಆ ಎಲ್ಲಾ ಬರಹಗಳನ್ನು ಒಳಗೊಂಡ "ಕಿನ್ನರಿ ಬ್ರಹ್ಮಯ್ಯ: ಕೆಲವು ಒಳನೋಟಗಳು" ಕೃತಿಯು ವಚನಸಾಹಿತ್ಯ-ಶರಣಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯಾಗಿದೆ. ವೃಷಭೇಂದ್ರ ವಿಜಯ'ದಲ್ಲಿ ವರ್ಣನೆಗೊಂಡ ಕಿನ್ನರಯ್ಯನ ಕಥೆಯನ್ನು ಸಂಗ್ರಹಿಸಿ ವಿಶ್ಲೇಷಣೆಗೆ ಒಳಪಡಿಸಿದುದು ತುಂಬ ಮಹತ್ವದ್ದಾಗಿದೆ. ಕಿನ್ನರಿ ಬ್ರಹ್ಮಯ್ಯನ ಚರಿತ್ರೆಯ ಮೇಲೆ ಹೊಸಬೆಳಕು ಬೀರುವ ರೀತಿಯಲ್ಲಿ ಅವರ ಚರಿತ್ರೆಯನ್ನು ನಿರೂಪಿಸಿದುದು ಕನ್ನಡದಲ್ಲಿ ವಿರಳಾತಿವಿರಳದ ಬರಹವಾಗಿದೆ. ಕಿನ್ನರಯ್ಯ ವೀರವ್ರತಾಚಾರಿಯಾಗಿದ್ದನೆ ಎಂಬುದರ ಬಗ್ಗೆ ಚಿಂತನೆ ನಡೆಸುತ್ತ ಸಂಶೋಧನೆ ನಡೆಸಿದ್ದು ಡಾ. ಚಿದಾನಂದ ಅವರ ಆಳವಾದ ಅಧ್ಯಯನಕ್ಕೆ ನಿದರ್ಶನವೆನ್ನಿಸಿದೆ. ಕಿನ್ನರಿ ಬ್ರಹ್ಮಯ್ಯನ ಜನ್ಮಸ್ಥಳ, ಆತನ ಜನನ ಕಾಲ, ಆತನ ಗುರುವಿನ ವಿಚಾರ, ಆತನ ವಿರಕ್ತಜೀವನ, ಆತನ ಲಿಂಗಧಾರಣ ವಿಚಾರ, ಆತನ ಮತಧರ್ಮ, ಆತನ ಐಕ್ಯ - ಈ ಮುಂತಾದ ವಿಷಯಗಳನ್ನು ಕುರಿತಂತೆ ಬರೆದ ಬರಹಗಳು ಸಂಶೋಧನಾತ್ಮಕವೂ, ವಚನಸಾಹಿತ್ಯದಲ್ಲಿ ವಿನೂತನವಾದುವೂ ಆಗಿವೆ. ಕಿನ್ನರಿ ಬ್ರಹ್ಮಯ್ಯನಂಥ ಅಲಕ್ಷಿತ ಶರಣನೊಬ್ಬನ Opt-out ಕುರಿತಾದ ಇಲ್ಲಿನ ಬರಹಗಳು ತುಂಬ ಪ್ರಯೋಜನಕಾರಿಯಾಗಿದ್ದು ಇದೊಂದು ಉತ್ತಮ ಆಕಾರ ಗ್ರಂಥವಾಗಿದೆ.

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನದಿಂದ 2022 ರಲ್ಲಿ ಪ್ರಕಟವಾದ ಈ ಕೃತಿಯಲ್ಲಿ 72 ಪುಟಗಳಿದ್ದು 120 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿ