ಮಾಜಿ ಸಚಿವರಿಗೆ ಹನಿ ಟ್ರ್ಯಾಪ್ ಮಾಡಲು ಹೋಗಿ ಪೊಲೀಸ್ ಬಲೆಗೆ ಬಿದ್ದ ಮಂಜುಳಾ ಪಾಟೀಲ್ ( ಟಿಕ್ ಟ್ಯಾಕ ಮಂಜುಳಾ ವೈನಿ)
ಮಾಜಿ ಸಚಿವರಿಗೆ ಹನಿ ಟ್ರ್ಯಾಪ್ ಮಾಡಲು ಹೋಗಿ ಪೊಲೀಸ್ ಬಲೆಗೆ ಬಿದ್ದ ಮಂಜುಳಾ ಪಾಟೀಲ್ ( ಟಿಕ್ ಟ್ಯಾಕ ಮಂಜುಳಾ ವೈನಿ)
ಕಲಬುರಗಿ : ನಲಪಾಡ್ ಬ್ರಿಗೇಡ್ ಕಲಬುರಗಿ ಅಧ್ಯಕ್ಷೆ ಹಾಗೂ ಕಾಂಗ್ರೆಸ್ ಪಕ್ಷದ ಕಲಬುರಗಿ ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಅವರ ಪತಿ ಶಿವರಾಜ ಪಾಟೀಲ ಸೇರಿ ಮಾಜಿ ಸಚಿವರಿಗೆ ಹನಿಟ್ರ್ಯಾಪ್ ಮಾಡಿ ₹ 20 ಲಕ್ಷ ಬೇಡಿಕೆ ಇಟ್ಟು ಈಗ ಪೋಲಿಸ್ ಬಲೆಗೆ ಬಿದ್ದ ಕಂಬಿ ಎಣಿಸುವಂತಾಗಿದೆ.
ರಾಜ್ಯದ ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿ 20 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ವಾಟ್ಸಾಪ್ ಮೂಲಕ ಸೆಕ್ಸ್ ಚಾಟ್, ವಿಡಿಯೋ ಕರೆ ಮಾಡಿ ಖಾಸಗಿ ದೃಶ್ಯಗಳನ್ನು ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ಮಂಜುಳಾ ಪಾಟೀಲ್ ದಂಪತಿಗಳ ಬಂಧನವಾಗಿದೆ.
ರಾಜ್ಯದ ಮಾಜಿ ಸಚಿವರೊಬ್ಬರಿಗೆ ಹನಿಟ್ರ್ಯಾಪ್ ಮಾಡಿ, ಸಂಬಂಧಿತ ವಿಡಿಯೋವನ್ನು ಇಟ್ಟುಕೊಂಡು ಬರೋಬ್ಬರಿ 20 ಲಕ್ಷ ರೂ. ನೀಡುವಂತೆ ಡಿಮ್ಯಾಂಡ್ ಮಾಡಿದ್ದ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಕರ್ನಾಟಕ ರಾಜ್ಯದ ಕಲಬುರಗಿ ಸೇರಿದಂತೆ ವಿವಿಧೆಡೆ ರಾಜಕೀಯ ನಾಯಕರು, ಸ್ವಾಮೀಜಿಗಳು, ಉದ್ಯಮಿಗಳಿಗೆ ಹನಿಟ್ರ್ಯಾಪ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುವ ಪ್ರಕರಣಗಳು ದಿನೆ ದಿನೆ ಹೆಚ್ಚುತ್ತಿವೆ.
ಇತ್ತೀಚೆಗೆ ಕಲಬುರಗಿಯಲ್ಲಿ ಈ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಪೊಲೀಸರು ಹೆಡೆಮುರಿಕಟ್ಟಿ ಜೈಲಿಗಟ್ಟಿದ್ದರು. ಮಂಜುಳಾ ಪಾಟೀಲ್ ದಂಪತಿಗಳು ಕುತಂತ್ರದಿಂದ ಮಾಜಿ ಸಚಿವರಿಗೆ ಹನಿಟ್ರ್ಯಾಪ್ ಮಾಡಿ, ಬರೋಬ್ಬರಿ 20 ಲಕ್ಷ ರೂ. ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರ ದೂರಿನ ಅನ್ವಯ ಹನಿಟ್ರ್ಯಾಪ್ ಮಾಡಿದ ಆರೋಪದಲ್ಲಿ ಕಲಬುರಗಿ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರಂಭದಲ್ಲಿ ತಾನು ಕಾಂಗ್ರೆಸ್ ನಾಯಕ ನಲಪಾಡ್ ಬ್ರಿಗೇಡ್ ಅಧ್ಯಕ್ಷೆ ಮಂಜುಳಾ ಪಾಟೀಲ್ ಎಂದು ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಅವರ ಮೊಬೈಲ್ ಸಂಖ್ಯೆ ಪಡೆದು ವಾಟ್ಸಾಪ್‌ನಲ್ಲಿ ತನ್ನ ಪರಿಚಯ ಮಾಡಿಕೊಂಡಿದ್ದಾಳೆ. ನಂತರ, ವಾಟ್ಸಾಪ್‌ನಲ್ಲಿ ಹಾಯ್, ಬಾಯ್.. ಚಾಟ್ ಮಾಡಿದ್ದಾಳೆ. ನಂತರ, ಸಲುಗೆಯಿಂದ ಚಾಟಿಂಗ್ ಮಾಡುತ್ತಾ, ತೀರಾ ಆಪ್ತತೆಯನ್ನು ಬೆಳೆಸಿಕೊಂಡು ಸೆಕ್ಸ್ ಚಾಟ್ ಆರಂಭಿಸಿದ್ದಾಳೆ. ಇದಾದ ನಂತರ ಇಬ್ಬರ ನಡುವೆ ವಾಟ್ಸಾಪ್ ವಿಡಿಯೋ ಕರೆ ಮೂಲಕ ಖಾಸಗಿಯಾಗಿ ಕಾಣಿಸಿಕೊಂಡಿದ್ದಾರೆ.
ಅದರಲ್ಲಿ ಖಾಸಗಿಯಾಗಿ ಕಾಣಿಸಿಕೊಂಡ ಮಾಜಿ ಸಚಿವರ ದೃಶ್ಯಗಳನ್ನು ವಿಡಿಯೋ, ಫೋಟೋಗಳನ್ನು ಸಂಗ್ರಹ ಮಾಡಿಕೊಂಡು, ನಂತರ ಈ ವಿಡಿಯೋವನ್ನು ಮಾಜಿ ಸಚಿವರಿಗೆ ಕಳುಹಿಸಿ ಹಣಕ್ಕಾಗಿ ಪೀಡಿಸಿದ್ದಾಳೆ.
ಮುಂದುವರೆದು ನನಗೆ ನೀವು 20 ಲಕ್ಷ ರೂ. ಹಣವನ್ನು ಕೊಡದಿದ್ದರೆ ನಿಮ್ಮ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವೈರಲ್ ಮಾಡುವುದಾಗಿ ಹೇಳಿದ್ದಾಳೆ. ಆಗ ಮಾಜಿ ಸಚಿವರಿಗೆ ತನ್ನ ಮಾನ ಮರ್ಯಾದೆ ಹರಾಜಾಗುತ್ತದೆ ಎಂಬ ಭಯದಿಂದ ಈ ವಿಚಾರವನ್ನು ತನ್ನ ಪುತ್ರನ ರಿತೇಶ್ ಗುತ್ತೇದಾರ್ ಬಳಿ ಹೇಳಿದ್ದಾರೆ. ಆಗ ಇದಕ್ಕೆಲ್ಲಾ ಹೆದರಬೇಡಿ ಎಂದು ತಂದೆಗೆ ಅಭಯ ನೀಡಿದ ಪುತ್ರ ಸಂಬಂಧಪಟ್ಟ ಮಹಿಳೆಯ ವಿರುದ್ಧ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಜೊತೆಗೆ ಹಣ ಕೊಡುವುದಾಗಿ ಮಹಿಳೆಯನ್ನು ಬೆಂಗಳೂರಿಗೆ ಕರೆಸಿ, ಆಕೆ ಹಣ ಪಡೆಯಲು ಬಂದಾಗ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾಜಿ ಸಚಿವ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಆರೋಪಿಗಳನ್ನು ಬೆಂಗಳೂರಿನ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ವಿಚಾರಣೆ ನಡೆಸಿದ್ದ ನ್ಯಾಯಾಲಯ ಆರೋಪಿಗಳನ್ನು 8 ದಿನ ಸಿಸಿಬಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಆರೋಪಿತೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶಿವರಾಜ್ ಪಾಟೀಲ್ ರನ್ನು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇಂತಹ ಪ್ರಕರಣಗಳು ನಡೆದರೆ ನೇರವಾಗಿ ಪೋಲಿಸ್ ಠಾಣೆಗೆ ದೂರು ನೀಡಬೇಕೇಂದು ಪೋಲಿಸ್ ಇಲಾಖೆ ತಿಳಿಸಿದೆ.
ಒಂದು ರೂ. ಕಡಿಮೆ ಇದ್ರೂ ತೆಗೆದುಕೊಳ್ಳಲ್ಲ ಎಂದ ಮಂಜುಳಾ
ಹನಿಟ್ಯಾಪ್ ಮುಖಾಂತರ ಸಚಿವರ ಮಗನ ಮೂಲಕ ಹಣ ವಸೂಲಿಗೆ ದಂಪತಿಗಳಿಬ್ಬರು ಮುಂದಾಗಿದ್ದಾರೆ . ಈ ವೇಳೆ ಮಾಜಿ ಸಚಿವರ ಮಗ ಹಣದ ಚೌಕಾಸಿಗೆ ಮಾಡಲು ಪ್ರಯತ್ನಿಸಿ ದರು. ಆ ವೇಳೆ ಮಂಜುಳಾ ಪಾಟೀಲ್ ಹೇಳುತ್ತಾರೆ ನಿಮ್ಮ ತಂದೆ ಮಾಡಿರುವ ಘನಂದಾರಿ ಕೆಲಸಕ್ಕೆ ಒಂದು ರೂ. ಕೂಡ ಕಡಿಮೆ ಮಾಡುವುದಿಲ್ಲ. ಹಣ ನೀಡದಿದ್ದರೆ . ವಿಡಿಯೋ ಮತ್ತು ಚಾಟಿಂಗ್ ವೈರಲ್ ಮಾಡುತ್ತೇನೆ ಎಂದು ಹೆದರಿಸಿದ್ದಾಳೆ ಎಂದು ಮೂಲಗಳು ತಿಳಿಸಿವೆ.