ಶಹಾಬಾದ ಉಚಿತ ಆರೋಗ್ಯ, ಕಣ್ಣು ತಪಾಸಣೆ, ರಕ್ತದಾನ ಶಿಬಿರ. ಜ. ೧೨ ರಂದು. ನಮೋಶಿ.
ಶಹಾಬಾದ ಉಚಿತ ಆರೋಗ್ಯ, ಕಣ್ಣು ತಪಾಸಣೆ,
ರಕ್ತದಾನ ಶಿಬಿರ. ಜ. ೧೨ ರಂದು. ನಮೋಶಿ.
ನಾಗರಾಜ್ ದಂಡಾವತಿ ವರದಿ ಶಹಾಬಾದ ನಗರದಲ್ಲಿ ಜನೇವರಿ ೧೨ ರಂದು ಜಿಲ್ಲೆಯ ಹೆಸರಾಂತ ಸಂಸ್ಥೆಯಾದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ, ದಿ. ಸಂತೋಷಕುಮಾರ ಇಂಗಿನಶೆಟ್ಟಿ ಅಭಿಮಾನಿ ಬಳಗ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಹಾಬಾದ್ ತಾಲೂಕ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ, ಕಣ್ಣೀನ ತಪಾಸಣೆ, ಹಾಗೂ ಉಚಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷರಾದ ಶಶೀಲ ಜಿ.ನಮೋಶಿ, ರಾಜಾ ಭೀಮಳ್ಳಿ, ಉದಯ ಚಿಂಚೋಳಿ ಜಂಟಿಯಾಗಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಶಹಾಬಾದ ನಗರದ ಶ್ರೀಶರಣಬಸವೇಶ್ವರ ಜ್ಞಾನ ವಿಕಾಶ ಪೀಠ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಸಾಮಾನ್ಯ ರೋಗ, ನೇತ್ರ,ಕಿವಿ, ಮತ್ತು ಗಂಟಲು ತಜ್ಞರು, ಎಲುಬು ಮತ್ತು ಮೂಳೆ ತಜ್ಞರು, ಚರ್ಮರೋಗ ತಜ್ಞರು, ಪ್ರಸೂತಿ ಹಾಗೂ ಸ್ರೀರೋಗ ತಜ್ಞರು, ಸಾಮಾನ್ಯ ಶಸ್ತ್ರ ಚಿಕಿತ್ಸಾ ತಜ್ಞರು, ಮಕ್ಕಳು ತಜ್ಞರು, ಭಾಗವಹಿಸಿ ಉಚಿತ ತಪಾಸಣೆ, ಸಲಹೆ ಚಿಕಿತ್ಸೆ, ಹಾಗೂ ಅವಶ್ಯಕ ಔಷಧಗಳನ್ನು ಉಚಿತವಾಗಿ ಒದಗಿಸಲಿದ್ದಾರೆ.
ಮಧುಮೇಹ ಕಾಯಿಲೆಗೆ ಸಂಬಧಿಸಿದ ರಕ್ತ ಪರೀಕ್ಷೆ ಇಸಿಜಿ ಯನ್ನು ಉಚಿತವಾಗಿ ಮಾಡಲಾಗುವದು, ಹೆಚ್ಚಿನ ಚಿಕಿತ್ಸೆಗಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಭರ್ತಿಯಾಗುವ ರೋಗಿಗಳಿಗೆ ಉಚಿತ ಕಣ್ಣೀನ ಪೊರೆ ಶಸ್ತç ಚಿಕಿತ್ಸೆ, ಇನ್ನೀತರ ಶಸ್ತç ಚಿಕಿತ್ಸೆಗಳನ್ನು ಸಾಮಾನ್ಯ ಕಾಯಿಲೆಗಳನ್ನು ಉಚಿತವಾಗಿ ಮತ್ತು ಆರೋಗ್ಯ ಶಿಬಿರದ ರೋಗಿಗಳಿಗಾಗಿ ವಿಶೇಷ ರಿಯಾಯತಿ ದರದಲ್ಲಿ ಆರೋಗ್ಯ ಸೇವೆಯನ್ನು ಬಸವೇಶ್ವರಯಲ್ಲಿ ಒದಗಿಸಲಾಗುವದು ಎಂದು ಮಾಹಿತಿ ನೀಡಿದರು, ಇದೇ ಸಂದರ್ಭದಲ್ಲಿ ಉಚಿತ ರಕ್ತದಾನ ಶಿಬರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿ, ಶಹಾಬಾದ ನಗರ ಸುತ್ತಲಿನ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಂಚಾಲಕ ಡಾ.ಕಿರಣ ದೇಶಮುಖ, ಮಹಾದೇವಪ್ಪ ರಾಂಪುರೆ ವ್ಯದ್ಯಕೀಯ ಕಾಲೇಜಿನ ಡೀನ್ ಡಾ.ಶರಣಗೌಡ ಪಾಟೀಲ, ಉಪ ಡೀನ್ ಡಾ.ವಿಜಯಕುಮಾರ ಕಪ್ಪಕೆರೆ, ಬಸವೇಶ್ವರ ಆಸ್ಪತ್ರೆ ಅಧೀಕ್ಷಕರಾದ ಡಾ.ಮಲ್ಲಿಕಾರ್ಜುನ ತೆಗನೂರ, ಶಿಬಿರ ಸಂಯೋಜಕ ಅಣವೀರ ಇಂಗಿನಶೆಟ್ಟಿ, ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಕೆ.ರಮೇಶ ಭಟ್ಟ, ಪ್ರಧಾನ ಕಾರ್ಯದರ್ಶಿ ಲೋಹಿತ ಕಟ್ಟಿ ಉಪಸ್ಥಿತರಿದ್ದರು.
