ದುಡಿಮೆಗೆ ಪ್ರತಿಫಲವಲ್ಲದ ಸಂಪತ್ತನ್ನು ಕಾಲ ಕಸವಾಗಿ ಕಂಡ ಶರಣರು: ಪ್ರೊ.ಎಸ್ ಜಿ. ಸಿದ್ದರಾಮಯ್ಯ
ದುಡಿಮೆಗೆ ಪ್ರತಿಫಲವಿಲ್ಲದ ಸಂಪತ್ತನ್ನು ಕಾಲ ಕಸವಾಗಿ ಕಂಡ ಶರಣರು: ಪ್ರೊ.ಎಸ್ ಜಿ. ಸಿದ್ದರಾಮಯ್ಯ
ಕಲಬುರಗಿ: ಈ ಮಾತನ್ನು ಸತ್ಯಕ್ಕ ನಲ್ಲದೆ ಮೋಳಿಗೆ ಮಹಾದೇವಿ ಕೂಡ ಇನ್ನೊಂದು ಪ್ರಸಂಗದಲ್ಲಿ ಧ್ವನಿಸುತ್ತಾಳೆ. ದುಡಿಮೆಗೆ ಪ್ರತಿಫಲವಲ್ಲದ ಸಂಪತ್ತನ್ನು ಶರಣರು ಕಾಲ ಕಸವಾಗಿ ಕಂಡರು ಎಂಬುದು ಬಹಳ ದೊಡ್ಡ ಚಾರಿತ್ರಿಕ ಕ್ರಾಂತಿಯಾಗಿದೆ ಎಂದು ಹಿರಿಯ ಸಾಹಿತಿ ಪ್ರೊ.ಎಸ್ ಜಿ. ಸಿದ್ದರಾಮಯ್ಯ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆಯಿಂದ ನಗರದ ಜೈ ಭವಾನಿ ಕನ್ವೆನ್ಷನ್ ಹಾಲ್ ನಲ್ಲಿ ರವಿವಾರ ನಡೆದ 12 ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ನಾಲ್ಕನೇ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ಯಕ್ಕನ ವಚನದ ಸಾಲೊಂದನ್ನು ಮುಖ್ಯವಾಗಿಟ್ಟುಕೊಂಡು ಶರಣ ಚಳವಳಿಯ ಒಟ್ಟು ಆಶಯಗಳನ್ನು ಹಿಡಿದಿಡುವ ಪ್ರಯತ್ನವಾಗಿ ನಾನು ಆಕೆಯ 'ಲಂಚ ವಂಚನಗೆ ಕೈಯಾನದ ಭಾಷೆ' ಎಂಬ ನುಡಿಗಟ್ಟನ್ನು ಬಳಸಿಕೊಳ್ಳುತ್ತೇನೆ ಎಂದರು.
ಶರಣ ಚಳವಳಿಯನ್ನು ಕಟ್ಟಿಕೊಳ್ಳಲು ನಮಗೆ ಇನ್ನಿತರ ಯಾವ ಆಕರಗಳು ಬೇಕಿಲ್ಲ. ಅವುಗಳ ಉಪ ಉತ್ಪನ್ನಗಳಾದ ವಚನಗಳೇ ನಮಗೆ ಮುಖ್ಯ ಆಕರಗಳಾಗಬೇಕು. ಅವುಗಳಲ್ಲಿ ಶರಣ ಚಳವಳಿಯ ಒಟ್ಟು ಆಶಯ ಒಳಗೊಂಡಿದೆ. ರಾಜಕಾರಣಕ್ಕೂ ರಾಜಕೀಯ ಪ್ರಜ್ಞೆಗೂ ಬಹಳ ವ್ಯತ್ಯಾಸವಿದೆ. ವ್ಯಕ್ತಿ ರಾಜಕಾರಣ ಮಾಡುತ್ತಿದ್ದಾನೆ ಎಂಬಲ್ಲಿ ನಾವಿದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದು ವಿಷಯ ಮಂಡಿಸಿದರು.
ಕಾಯಕ, ದಾಸೋಹ, ಪ್ರಸಾದ ಇವುಗಳ ಒಟ್ಟಾರೆಯ ಹಿನ್ನೆಲೆಯನ್ನು ಸತ್ಯಕ್ಕನ ಈ ವಚನದಲ್ಲಿ ಕಾಣಬಹುದು. ಆಕೆ ಈ ವಚನದಲ್ಲಿ ಬಳಸುವ ಬಟ್ಟೆ ಎಂಬ ಪದಕ್ಕೆ ಬೀದಿ ಹಾದಿ ಎಂಬ ಅರ್ಥಗಳಿವೆ. ಅಲ್ಲಿ ಬಿದ್ದ ಚಿನ್ನವನ್ನು ಕಸವಾಗಿ ಗುಡಿಸುವೆ, ಅದನ್ನು ನಾನು ಸ್ವೀಕರಿಸದ ಪ್ರತಿರೋಧವನ್ನು ಆಕೆ ವ್ಯಕ್ತಪಡಿಸುತ್ತಾಳೆ ಎಂದು ಪ್ರತಿಪಾದಿಸಿದರು.
ಬೆಂಗಳೂರಿನ ಹಿರಿಯ ಸಾಹಿತಿ ಡಾ.ಎಂ.ಎಸ್.ಆಶಾದೇವಿ ಭಾಷೆ "ಯಾರೆಂಬುದು ಪ್ರಾಣ ಘಾತಕ ' ವಿಷಯ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶರಣ ಸಾಹಿತಿ ಡಾ.ಜಯಶ್ರೀ ದಂಡೆ ಅವರು "ಲಿಂಗಸಹಿತ ನಾನು ನಾನು ಸಹಿತ ಲಿಂಗ " ಅಕ್ಕ ಮಹಾದೇವಿ, ಅವರ ಕುರಿತು ಮಾತನಾಡಿದರು.
ಡಾ.ಶಕುಂತಲಾ ದುರ್ಗಿ ನಿವೃತ್ತ ಪ್ರಾಧ್ಯಾಪಕ ಕಲಬುರಗಿ ,ನಳಿನೀ ಮಹಾಗಾಂವಕರ್, ಅಧ್ಯಕ್ಷ,ಜೆ.ಎಲ್.ಎಂ.ಮ.ಘ.ಕಲಬುರಗಿ,ಡಾ. ವೀರಶೆಟ್ಟಿ ಗಾರಂಪಳ್ಳಿ ಹಿರಿಯ ಸಹಾಯಕ ನಿರ್ದೇಶಕರು, ಪತ್ರಾಗಾರ ಇಲಾಖೆ, ಕಲಬುರಗಿ,
ಶ್ರೀಮತಿ ಲಿಂಗಾರತಿ ಅಲ್ಲಮಪ್ರಭು ಬೀದರ, ಶ್ರೀ ಬಸವರಾಜ ಜನಕಟ್ಟಿ ಕಾರ್ಯದರ್ಶಿ, ಜಿ.ಶ.ಸಾ.ಪ., ಕಲಬುರಗಿ, ಡಾ. ಶಿವಕುಮಾರ ಬಿದರಿ ಕಾರ್ಯದರ್ಶಿ, ಜಿ.ಶ.ಸಾ.ಪ., ಕಲಬುರಗಿ ,ಶ್ರೀಮತಿ ಪ್ರಭಾವತಿ ಮೇತ್ರಿ ಅಧ್ಯಕ್ಷರು, ತಾ.ಕ.ಮ.ವೇ., ಅಫಜಲಪುರ,
ಡಾ. ಚಿನ್ಮಮ್ಮ ಚಂದ್ರಕಾಂತ ಗದ್ದಗಿ ಕಲಬುರಗಿ ಇವರು ಗೌರವ ಪರಿಸ್ಥಿತಿ ವಹಿಸಿದರು
ಭುವನೇಶ್ವರಿ ಎಸ್. ದಟ್ಟಿ ಕಲಬುರಗಿ ನಿರೂಪಿಸಿದರು, ಪ್ರೊ. ಮಂಗಳಾ ಸೋಮನಾಥ ಪಾಟೀಲ ಬೀದರ ಸ್ವಾಗತಿಸಿದರು ,ಡಾ. ನಾಗಪ್ಪ ಟಿ. ಗೋಗಿ ಕಲಬುರಗಿ ವಂದಿಸಿದರು,