ಜಿ.ಎಸ್.ಅಪ್ಪಾಗೋಳ ಇವರ ವಿರುದ್ಧ ಸೂಕ್ತ ಕ್ರಮಕೈಕೊಂಡು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಪೃಥ್ವಿರಾಜ ರಾಂಪೂರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ

ಜಿ.ಎಸ್.ಅಪ್ಪಾಗೋಳ ಇವರ ವಿರುದ್ಧ ಸೂಕ್ತ ಕ್ರಮಕೈಕೊಂಡು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಪೃಥ್ವಿರಾಜ ರಾಂಪೂರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ

ಜಿ.ಎಸ್.ಅಪ್ಪಾಗೋಳ ಇವರ ವಿರುದ್ಧ ಸೂಕ್ತ ಕ್ರಮಕೈಕೊಂಡು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಪೃಥ್ವಿರಾಜ ರಾಂಪೂರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ

ಕಲಬುರಗಿ: ಎಸ್.ಎಸ್.ಎಲ್.ಸಿ. ಪಾವಿತ್ರ‍್ಯತೆ ಉಲ್ಲಂಘಿಸಿರುವ ಸರಕಾರಿ ಪ್ರೌಢಶಾಲೆ ವಜ್ಜಲ್, ತಾ. ಹುಣಸಿಗಿಯ ಮುಖ್ಯೋಪಧ್ಯಾಯರಾದ ಜಿ.ಎಸ್.ಅಪ್ಪಾಗೋಳ ಇವರ ವಿರುದ್ಧ ಸೂಕ್ರ ಕ್ರಮಕೈಕೊಂಡು ಸೇವೆಯಿಂದ ಅಮಾನತ್ತು ಮಾಡಬೇಕೆಂದು ಕರುನಾಡ ವಿಜಯಸೇನೆಯ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್. ರಾಂಪೂರ ನೇತೃತ್ವದಲ್ಲಿ ಶಿಕ್ಷಣ ಇಲಾಖೆಯ ಅಪರ ಆಯುಕ್ತರಿಗೆ ಮನವಿ ಸಲ್ಲಿಸಿದರು. 

 ಜಿ.ಎಸ್.ಅಪ್ಪಾಗೋಳ ಇವರು ಮುಖ್ಯ ಗುರುಗಳಾಗಿ ಗ್ರಾಮ ವಜ್ಜಲ್ ತಾ. ಹುಣಸಿಗಿ ಜಿ. ಯಾದಗೀರಿಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸದರಿಯವರು ತಮ್ಮ ಮಗನ ಎಸ್.ಎಸ್.ಎಲ್.ಸಿ. ಪಾಸು ಮಾಡಲು ಕಳ್ಳತನದಿಂದ ಹಾಗೂ ವಾಮಮಾರ್ಗದಿಂದ ಸದರಿ ಪರಿಕ್ಷಾ ಅಧೀಕ್ಷಕರಾದ ಶ್ರೀ ಶಿವರಾಜ ಬಿರಾದಾರ ಇವರಿಗೆ ಕರೆ ಮಾಡಿ ಮೊದಲನೇ ಆಡಿಯೋದಲ್ಲಿ ಈ ಸಲ ಏನಾದರೂ ಮಾಡಿ ಪಾಸ್ ಮಾಡೋಣ ಎಂದು ಮತ್ತು ಎರಡನೇ ಆಡಿಯೋದಲ್ಲಿ ಮುಂದಿನ ಪೇಪರಕ್ಕೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ನನ್ನ ಮಗನ ಬದಲಿಗೆ ಓದುವ ಬೇರೆ ವಿದ್ಯಾರ್ಥಿಯನ್ನು ಕೂಡಿಸೋಣ ಎಂದು ಮೂರನೇ ಆಡಿಯೋದಲ್ಲಿ ನಿಮ್ಮ ದಯದಿಂದ ಪಾಸಾಗಲಿ ಸರ್. ಅಲ್ಲಿ ಗಣ ತದವರು ಇದ್ದಾರೆ ಎಂದು ತಿಳಿಸಿರುತ್ತಾರೆ.

ಸ್ವತಃ ಸರಕಾರಿ ಪ್ರೌಢಶಾಲೆ, ವಜ್ಜಲ ಗ್ರಾಮದ ಮುಖ್ಯ ಗುರುಗಳಾಗಿರುವ ಶ್ರೀ ಜಿ.ಎಸ್.ಅಪ್ಪಾಗೋಳ ಅವರು ಒಬ್ಬ ಸಮಾಜಕ್ಕೆ ಮಾದರಿ ಗುರುಗಳಾಗುವ ಬದಲು ವಾಮಮಾರ್ಗ ಹಾಗೂ ಕಳ್ಳಾಟದಿಂದ ಇವರು ಈ . ರೀತಿಯಾಗಿ ಎಸ್.ಎಸ್.ಎಲ್.ಸಿ. ಪಾವಿತ್ರ‍್ಯತೆಯನ್ನು ಹಾಳು ಮಾಡಿದ್ದಾರೆ. ಇವರನ್ನು ಹೀಗೆ ಮುಂದುವರಿಸಿದಲ್ಲಿ ಸಮಾಜಕ್ಕೆ ಹಾಗೂ ಶೈಕ್ಷಣ ಕ ಕ್ಷೇತ್ರಕ್ಕೆ ತುಂಬಾ ಅನ್ಯಾಯ ಹಾಗೂ ಪ್ರಾಮಾಣ ಕವಾಗಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಾಂತಾಗುತ್ತದೆ.

ಆದ್ದರಿಂದ ದಯಾಳುಗಳಾದ ತಾವುಗಳು ನನ್ನ ದೂರು ಅರ್ಜಿಯನ್ನು ಅತ್ಯಂತ ಗಂಭೀರ ಪ್ರಕರಣವೆಂದು ಪರಿಗಣ ಸಿ, ಒಬ್ಬ ಆದರ್ಶ ಶಿಕ್ಷಕನಾಗಿ ಮಕ್ಕಳಿಗೆ, ಪೋಷಕರಿಗೆ ಹಾಗೂ ನಾಗರೀಕ ಸಮಾಜಕ್ಕೆ ಮಾದರಿ ಹಾಗೂ ಮಾರ್ಗದರ್ಶಕರಾಗಬೇಕಿರುವ ಗುರುಗಳು, ತನ್ನ ಮಗ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 2ಬಾರಿ ಅನುತ್ತಿರ್ಣರಾಗಿದ್ದಾರೆಂದು ವಾಮಮಾರ್ಗದಿಂದ ಹಾಗೂ ಕಳ್ಳತನದಿಂದ ತನ್ನ ಮಗನನ್ನು ಪಾಸು ಮಾಡಲು ಸರಕಾರಿ ನಿಯಮಗಳನ್ನು ಉಲ್ಲಂಘಿಸಿ, ಅನ್ವಯ ಮಾರ್ಗ ಅನುಸರಿಸಿರುವ ಶ್ರೀ ಜಿ.ಎಸ್.ಅಪ್ಪಾಗೋಳ, ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ವಜ್ಜಲ್, ತಾ? ಹುಣಸಗಿ ಜಿ|| ಯಾದಗೀರ್ ಇವರನ್ನು ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೆಂದು ತಮ್ಮಲ್ಲಿ ವಿನಂತಿ. ಒಂದು ವೇಳೆ ನಮ್ಮ ದೂರು ಅರ್ಜಿಯನ್ನು ಪರಿಗಣ ಸದಿದ್ದರೆ, ತಮ್ಮ ಕಚೇರಿಯ ಎದರು ನಮ್ಮ ಸಂಘಟನೆಯ ನೂರಾರು ಕಾರ್ಯಕತರ್ಯರು ಸತ್ಯಾಗ್ರಹ, ಮುಷ್ಕರ ಮಾಡಬೇಕಾಗುತ್ತದೆ. ಮುಂದಿನ ಆಗು ಹೋಗುಗಳಿಗೆ ತಾವೇ ನೇರ ಜವಾಬ್ದಾರರಾಗಿತ್ತೀರಿ ಎಂದು ಮನವಿಯಲ್ಲಿ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಪೃಥ್ವಿರಾಜ ಎಸ್ ರಾಂಪುರ, ತಾಲೂಕ ಅಧ್ಯಕ್ಷ ಕಲ್ಯಾಣ ಎಸ್ ತಳವಾರ್ , ಚಿಂಚೋಳಿ ತಾಲೂಕ ಅಧ್ಯಕ್ಷ ಝರಣಪ್ಪ ಎಸ್ ತಳವಾರ, ಜೀಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಅರ್ಜುನ್ ಮೈತ್ರೆ , ಜೀಲ್ಲಾ ಸಹ ಕಾರ್ಯದರ್ಶಿ ಸತೀಶ್ ಮೊಲೆ, ಕಾರ್ಯದರ್ಶಿ ಪ್ರಶಾಂತ್ ಸಣ್ಣೂರ್, ಜಿಲ್ಲಾ ಚಾಲಕ ಘಟಕ ಉಪಾಧ್ಯಕ್ಷ ಸೈಬಣ್ಣ ಪರಸನಹಳ್ಳಿ, ನಗರ ಉಪಾಧ್ಯಕ್ಷ ಶ್ರೀನಿವಾಸ್, ರಾಹುಲ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.