ತಾ.ಪಂ. ಲಕ್ಷಾಂತರ ರೂಪಾಯಿ ಅವ್ಯವಹಾರ ದಲಿತ ಸೇನೆಯಿಂದ ಸಚಿವರಿಗೆ ಮನವಿ ಸಲ್ಲಿಕೆ
ತಾ.ಪಂ. ಲಕ್ಷಾಂತರ ರೂಪಾಯಿ ಅವ್ಯವಹಾರ ದಲಿತ ಸೇನೆಯಿಂದ ಸಚಿವರಿಗೆ ಮನವಿ ಸಲ್ಲಿಕೆ
ಚಿಂಚೋಳಿ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ 1,76,00,000 ರೂ. ಅವ್ಯವಹಾರದ ಗಂಭೀರ ಆರೋಪ
ತನಿಖೆ ಕೈಗೊಂಡು ಕಾನೂನು ಕ್ರಮ ಜರುಗಿಸಲು ದಲಿತ ಸೇನೆ ಆಗ್ರಹ
ಚಿಂಚೋಳಿ ತಾಲೂಕ ಪಂಚಾಯತ ಯೋಜನೆಗಳ ಅನಿರ್ಭಂದಿತ ಅನುದಾನದ ಕಾಮಗಾರಿಗಳ ಅವ್ಯವಹಾರ ಕುರಿತು ತನಿಖೆ ನಡೆಸಿ, ತಪ್ಪಿತಸ್ಥ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇಲಾಖೆಯ ಇತರೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಸೇವೆಯಿಂದ ವಜಾ ಮಾಡಬೇಕೆಂದು ಆರೋಪಿಸಿ, ತಾಲೂಕ ದಲಿತ ಸೇನೆ ತಹಸೀಲ್ದಾರರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವರಿಗೆ ಹಾಗೂ ಜಿಲ್ಲಾ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ತಹಸೀಲ್ ಕಾರ್ಯಾಲಯದ ಮುಂದೆ ಪ್ರತಿಭಟನೆ ಕೈಗೊಂಡು ಮನವಿ ಸಲ್ಲಿಸಿ ಮಾತನಾಡಿದವರು,
2023-24ನೇ ಸಾಲಿನ ಕೇಂದ್ರ ಮತ್ತು ರಾಜ್ಯ ಸರಕಾರದ ಶಿಕ್ಷಣ ಇಲಾಖೆ ಅಭಿವೃದ್ಧಿಗೆ ಮತ್ತು ರಿಪೇರಿ ಕೆಲಸಕ್ಕೆ 81,55,444 ರೂ, ಆರೋಗ್ಯ ಇಲಾಖೆಗೆ ಸಂಬಂಧಿಸಿದ 22,87,666 ರೂ, ಇತರೆ ವಲಯ ಅಭಿವೃದ್ಧಿಗೆ ಮತ್ತು ಅಂಗವಿಕಲ ಕಲ್ಯಾಣಕ್ಕಾಗಿ ಹಣವನ್ನು ಮಿಸಲಿಟ್ಟ ಗ್ರಾಮಗಳ ಅಭಿವೃದ್ಧಿಗೆ ಕೊಟ್ಯಾಂತರ ರೂಪಾಯಿ ಅನುದಾನದ ಕ್ರೀಯಾಯೋಜನಯಲ್ಲಿ ಒಟ್ಟು ತಾಲೂಕಿನ ವ್ಯಾಪ್ತಿಯಲ್ಲಿ ಬರುವ 111 ಕಾಮಾಗಾರಿಗಳು ಪೂರ್ಣಗೊಳಿಸದೆ ತಾಲೂಕ ಪಂಚಾಯತ ಅನುದಾನ 1,76,00,000 ರೂ ಹಣವನ್ನು ತಾಲೂಕ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಕಾಮಗಾರಿಗಳ ಜೆಇ ಮತ್ತು ಎಇಇ ಹಾಗೂ ಗುತ್ತಿಗೆದಾರರು ಸೇರಿಕೊಂಡು ಕೈಗೊಂಡ ಕಾಮಗಾರಿಗಳ ಕೆಲಸಗಳು ಪೂರ್ಣಗೊಳಿಸಲಾರದೆ ಕೊಟ್ಟಾಂತರ ರೂಪಾಯಿಗಳನ್ನು ನುಂಗಿ ಅವ್ಯವಹಾರ ನಡೆಸಿದ್ದಾರೆ ಎಂದು ದಲಿತ ಸೇನೆ ಗಂಭೀರ ಆರೋಪ ಮಾಡಿದೆ. ಅನಿರ್ಭಂದಿತ ಯೋಜನೆಯ ಕಾಮಾಗಾರಿಗಳ ತನಿಖೆ ಕೈಗೊಂಡು ಅವ್ಯವಹಾರ ನಡೆಸಿರುವ ತಾ.ಪಂ ಅಧಿಕಾರಿಗಳ ಮತ್ತು ಜೆಇ, ಎಇಇಗಳ ವಿರುದ್ಧ ಕಾನೂನು ಕ್ರಮಕೈಗೊಂಡು ಅವ್ಯವಹಾರದ ಹಣ ಮರಳಿ ಸರಕಾರಿ ಖಜಾನೆಗೆ ಪಡೆಯಬೇಕೆಂದು ದಲಿತ ಸೇನೆ ಅಧ್ಯಕ್ಷ ಆರ್.ಎಸ್.ಹೂವಿನಭಾವಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರ ಪ್ರೀಯಾಂಕ್ ಖರ್ಗೆಯವರಿಗೆ ಹಾಗೂ ಕಲಬುರಗಿ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರತ್ಯೇಕ್ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆ ಹೋರಾಟಗಾರ ಕಾಶಿನಾಥ ಶಿಂಧೆ, ಚೇತನ ನಿರಾಳಕರ್, ಶ್ರೀಕಾಂತ ರುಸ್ತಂಪೂರ, ರಮೇಶ ಕುಡ್ಡಳ್ಳಿ, ಮಾರುತಿ ತೇಗಲತಿಪ್ಪಿ, ವೀರಶೆಟ್ಟಿ, ಖತಲಪ್ಪ, ದೇವೀಂದ್ರಪ್ಪ ಕಟ್ಟಿಮನಿ, ನಾಗರಾಜ ಬೇವಿನಕರ್, ರಾಜಕುಮಾರ ದೊಟಿಕೊಳ ಅವರು ಸೇರಿ ಸಮಿತಿಯ ಹಲವು ಕಾರ್ಯಕರ್ತರು ಇದ್ದರು.