" ಕಲಬುರಗಿ ಲೋಕಸಭಾ ಸದಸ್ಯ ಆನ್ಲೈನ್ ಎಂಪಿ " ಡಾ. ಉಮೇಶ್ ಜಾಧವ್ ಲೇವಡಿ

" ಕಲಬುರಗಿ ಲೋಕಸಭಾ ಸದಸ್ಯ ಆನ್ಲೈನ್ ಎಂಪಿ " ಡಾ. ಉಮೇಶ್ ಜಾಧವ್ ಲೇವಡಿ

" ಕಲಬುರಗಿ ಲೋಕಸಭಾ ಸದಸ್ಯ ಆನ್ಲೈನ್ ಎಂಪಿ " ಡಾ. ಉಮೇಶ್ ಜಾಧವ್ ಲೇವಡಿ

ಮತದಾರರಿಗೆ ಮೋಸ ಮಾಡಿದ ಲೋಕಸಭಾ ಸದಸ್ಯರ ವಿರುದ್ಧ ಸಿಡಿದ ಆಕ್ರೋಶ

ಕಲಬುರಗಿ : ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿಯವರು ಕಳೆದ ಎರಡುವರೆ ವರ್ಷಗಳಲ್ಲಿ ಒಂದೇ ಒಂದು ಸಭೆ ನಡೆಸದೆ ಮೊನ್ನೆ ದಿಶಾ ಸಭೆಯನ್ನು ಆನ್ಲೈನ್ ಮೂಲಕ ನಡೆಸಿ "ಕಲಬುರಗಿಯ ಆನ್ಲೈನ್ ಎಂಪಿ" ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಂಸದರಾದ ಡಾ. ಉಮೇಶ್ ಜಾಧವ್ ಲೇವಡಿ ಮಾಡಿದ್ದಾರೆ.

   ಕಲಬುರಗಿಯ ಪತ್ರಿಕಾ ಭವನದಲ್ಲಿ ಮಾರ್ಚ್ 5 ರಂದು ನಡೆಸಿದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಗಾಗಿ ನಡೆಸುವ ದಿಶಾ ಸಭೆಯನ್ನು ತರಾತುರಿಯಲ್ಲಿ ಫೆಬ್ರವರಿ 28ರಂದು ಕರೆದು ಸ್ವತಹ ಲೋಕಸಭಾ ಸದಸ್ಯರು ಗೈರು ಹಾಜರಾಗಿ ವೀಡಿಯೋ ಕಾನ್ಫರೆನ್ಸ್ ಆನ್ಲೈನ್ ಮೂಲಕ ಕೇವಲ ಆರು ನಿಮಿಷ ಬೆಂಗಳೂರಿನಿಂದ ಪಾಲ್ಗೊಂಡು ಕಲಬುರಗಿ ಲೋಕಸಭಾ ಕ್ಷೇತ್ರದ ಮತದಾರರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ದಿಶಾ ಸಭೆಯನ್ನು ಆನ್ಲೈನ್ ಮೂಲಕ ಮಾಡಿದ್ದು ಭಾರತದ ಇತಿಹಾಸದಲ್ಲಿ ಇದು ಪ್ರಥಮ ಎಂದು ಆರೋಪಿಸಿದರು. ಪ್ರಸ್ತುತ "ರಾಧಾಕೃಷ್ಣ ದೊಡ್ಡಮನಿಯವರು ಆನ್ಲೈನ್ ಎಂಪಿ" ಎಂಬ ಬಿರುದಿಗೆ ಪಾತ್ರರಾಗಿದ್ದಾರೆ. ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕೈಕೊಳ್ಳಬೇಕಾದ ಲೋಕಸಭಾ ಸದಸ್ಯರು ನಾಪತ್ತೆಯಾಗಿದ್ದಾರೆ ಮತ್ತು ಯಾವ ಮತದಾರನ ಕೈಗೂ ಸಿಗದ ಪರಿಸ್ಥಿತಿ ಎದುರಾಗಿದೆ. ತಾನು ಎಂಪಿ ಆಗಿದ್ದಾಗ ನೂರು ಸುಳ್ಳುಗಳನ್ನು ಹೇಳಿ ಮತದಾರರಿಗೆ ತಪ್ಪು ಮಾಹಿತಿ ನೀಡಿ ಆಯ್ಕೆಯಾದ ರಾಧಾಕೃಷ್ಣ ಅವರು ಎಲ್ಲಿದ್ದಾರೆ? ಎಂಬುದನ್ನು ಈಗ ಹುಡುಕಬೇಕಾಗಿದೆ. ಎಂಪಿ ,ಎಂ ಎಲ್ ಎ, ಸಚಿವ ಸ್ಥಾನ ಎಲ್ಲವೂ ಖರ್ಗೆ ಮನೆತನದಲ್ಲೇ ಇರಬೇಕು ಎಂಬ ಸ್ವಾರ್ಥ ರಾಜಕಾರಣದಿಂದ ಕಲಬುರಗಿಯ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ದಲಿತರ ಉದ್ಧಾರಕ್ಕಿಂತ ಖರ್ಗೆ ಮನೆತನದ ಉದ್ಧಾರವೇ ಮುಖ್ಯವಾಗಿರುವುದರಿಂದ ಅವರೆಲ್ಲರೂ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಕಟುವಾಗಿ ಆರೋಪಿಸಿದರು. ಕಲಬುರಗಿ ವಿಮಾನ ನಿಲ್ದಾಣ ಬಂದ್ ಆದರೂ ಲೋಕಸಭಾ ಸದಸ್ಯರು ಒಂದು ಪತ್ರವನ್ನು ಕೇಂದ್ರಕ್ಕೆ ಬರೆದು ಮೌನವಾಗಿರುವುದು ವಿಷಾದ ಸಂಗತಿ ಎಂದರು. ಕರೋನಾ ಸಂದರ್ಭದಲ್ಲಿ ಕೂಡ ವಿಮಾನವನ್ನು ಹಾರಾಟ ನಡೆಸಿ ಜನರಿಗೆ ಪ್ರಯೋಜನವಾಗುವಂತೆ ಮಾಡಲಾಗಿತ್ತು. ಆದರೆ ಈಗ ಶ್ರೀಮಂತರ ವಿಮಾನ ಮಾತ್ರ ಇಳಿಯುವ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ. ನೂರಾರು ಸುಳ್ಳುಗಳನ್ನು ಹೇಳುತ್ತಾ ಟೀಕಿಸುವ ರಾಧಾಕೃಷ್ಣ ದೊಡ್ಡಮನಿಯವರು ಪ್ರತಿ ಮೂರು ತಿಂಗಳಿಗೊಮ್ಮೆ ನಡೆಸುವ ಬ್ಯಾಂಕರ್ಸ್ ಸಭೆಯನ್ನು ನಡೆಸದೆ ಅಭಿವೃದ್ಧಿ ಯೋಜನೆಗಳ ಬಗ್ಗೆ ತೀವ್ರ ನಿರಾಸಕ್ತಿ ಹೊಂದಿದ್ದಾರೆ. ಪ್ರಸ್ತುತ ಲೋಕಸಭಾ ಸದಸ್ಯರ ವಿರುದ್ಧ ತೀವ್ರ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಡಾ. ಉಮೇಶ್ ಜಾಧವ್ ದೂರಿದರು.

  ಪತ್ರಿಕಾಗೋಷ್ಠಿಯಲ್ಲಿ ಶಶಿಲ್ ಜಿ ನಮೋಶಿ, ರಾಜಕುಮಾರ್ ಪಾಟೀಲ್ ತೆಲ್ಕೂರ, ಬಸವರಾಜ ಮತ್ತಿಮುಡು , ಅಶೋಕ್ ಬಗಲಿ, ಶರಣಪ್ಪ ತಳವಾರ, ಶಿವರಾಜ್ ಪಾಟೀಲ್ ರದ್ದೇವಾಡಗಿ ಅವಣ್ಣ ಮ್ಯಾಕೇರಿ, ಮಹೇಂದ್ರ ಪೂಜಾರಿ ಚಂದ್ರಶೇಖರ ಪರಸರೆಡ್ಡಿ, ನರಸಪ್ಪಗೌಡ, ಬಾಬುರಾವ್ ಹಾಗರಗಿ