ಕಲ್ಯಾಣದೆಡೆಗೆ
ಕಲ್ಯಾಣದೆಡೆಗೆ
ಲೇಖಕಿ ಡಾ. ಶಿವಲೀಲಾ ಇವರ ಲೇಖನಗಳ ಸಂಕಲನ ಕಲ್ಯಾಣದೆಡೆಗೆ ಕೃತಿಯು ಓದುಗರನ್ನು ಕಲ್ಯಾಣದೆಡೆಗೆ ಕರೆದುಕೊಂಡು ಹೋಗಿ ಕಲ್ಯಾಣದ ಸಮಗ್ರ ಚಿತ್ರಣ, ಶಾಸನಗಳ ಪರಿಚಯ, ಶರಣರು ನಡೆದು ಬಂದ ದಾರಿ, ಜಾನಪದ ಕಲೆ, ಶರಣರ ಬದುಕು ಬವಣೆ, ಕಲ್ಯಾಣ ಕರ್ನಾಟಕ ವಿಮೋಚನಾ ಚಳವಳಿ, ಬೀದರ ಜಿಲ್ಲೆಯ ಕೋಟೆಗಳ ಕುರಿತು, ಮತ್ತು ರಜಾಕಾರರ ಉಪಟಳ , ಗ್ರಾಮಗಳ ವಿಶೇಷತೆ ಸಮಗ್ರವಾಗಿ ಚಿತ್ರಿಸಿದ್ದಾರೆ.
ಲೇಖಕರು ಹದಿನಾಲ್ಕು ಲೇಖನಗಳ ಒಳಗೊಂಡಿರುವ ಲೇಖನಗಳು
ಶರಣರ ಕಾಲದ ಮಹಿಳೆಯರ ಸ್ಥಾನಮಾನ.,ಲಿಂಗವೆಂಬುದು ಪರಶಿವ ಶಕ್ತಿಯ ನಿಜವಾಸ,
ಶರಣರ ಕಾಲದಲ್ಲಿ ಜನಪದ ಕಲೆಗಳು,ಶಿವಪಥವನರಿವೊಡೆ ಗುರು ಪಥವೇ ಮೊದಲು.,ಅನುಭವ ಮಂಟಪದಲ್ಲಿ ಸ್ತ್ರೀ ಸಮಾನತೆ,
ಇಂದಿನ ಬದುಕಿಗೆ ಶರಣರ ಮೌಲ್ಯಗಳು.,ಕಲ್ಯಾಣ ಕರ್ನಾಟಕದ ಜಾತ್ರೋತ್ಸವ ಹಾಗು ಪ್ರದರ್ಶನ ಕಲೆಗಳು,ಬೀದರ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆ,ಬಸವಕಲ್ಯಾಣ ತಾಲೂಕಿನ ಶಿಲಾಶಾಸನಗಳ ಒಂದು ಇಣುಕುನೋಟ.,ಮೊರಖಂಡಿಯ ಸಾಂಸ್ಕೃತಿಕ ಸಮೀಕ್ಷೆ,ಜನತೆಯ ಅಂತರಂಗದ ವಾಣಿ ಜನಪದ, ಹೈದ್ರಾಬಾದ್ ಕರ್ನಾಟಕ ವಿಮೋಚನೆ ಮತ್ತು ಜಾನಪದ ಸಾಹಿತ್ಯ.,ಹೈದ್ರಾಬಾದ್ ವಿಮೋಚನೆಯಲ್ಲಿ ಮುಚಳಂಬ ನರ ಮೇಧ: ಹಿಸಾಮೊದಿನ್ ನ ವಧೆ.,
ಶರಣರ ಕಾಲದಲ್ಲಿ ಮಹಿಳೆಯರ ಸ್ಥಾನಮಾನ,
ಮಲೆ ಮೂಡಿ ಬಂದರೆ ಹೆಣ್ಣೆoಬರು
ಗಡ್ಡ ಮೀಸೆ ಬಂದೊಡೆ ಗಂಡೇoಬರು
ನಡುವೆ ಸುಳಿದಾದುವಾತ್ಮನು ಗಂಡು ಅಲ್ಲ ಹೆಣ್ಣು ಅಲ್ಲ ಕಾಣ ರಮಾನಾಥ""
ವೆಂದು ತಿಳಿದ ಶರಣರು ಹೆಣ್ಣು ಮತ್ತು ಗಂಡಿನ ನಡುವಣದ ಭೇದವನ್ನು ಖಂಡಿಸಿರುವುದು ಲೇಖಕರು ತಮ್ಮ ಲೇಖನದಲ್ಲಿ ಉಲ್ಲೇಕಿಸಿದ್ದಾರೆ.
ಇಂದಿನ ಸಮಾಜದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಪುರುಷ ಳರಿಗೆ ಪೈಪೋಟಿ ಒಡ್ದು ತ್ತಿರುವುದು ಬಸವಾದಿ ಶರಣರು ಹೆಣ್ಣುಮಕ್ಕಳಿಗೆ ಸಮಾನ ಹಕ್ಕು ಕಲ್ಪಿಸಿದ್ದು ಸಕಾರಣವೆಂದು ಲೇಕಖರು ತಮ್ಮ ಬರಹದ ಮೂಲಕ ಪ್ರತಿಪಾದಿಸಿದ್ದಾರೆ.
ಲಿಂಗವೆಂಬುದು ಪರಶಿವ ಶಕ್ತಿಯ ನಿಜವಾಸ
ಜಗದಗಲ ಮಿಗಿಲಗಲ
ಮಿಗೆಯಗಲ ನಿಮ್ಮಗಲ
ಪಾತಾಳದಿಂದತ್ತತ್ತ ನಿಮ್ಮ ಶ್ರೀ ಚರಣ ಅಗೋಚರ ಅಪ್ರತಿಮ ಲಿಂಗವೇ ಎನ್ನ ಕರ ಸ್ಥಲಕೆ ಬಂದು ಚುಳುಕಾದಿರಯ್ಯ ಕೂಡಲ ಸಂಗಮದೇವಯ್ಯ.
ವೆಂದು ವಿಶ್ವದ ಆಕಾರ ಲಿಂಗದ ಅಕಾರವಾಗಿ ರೂಪು ಗೊಂಡಿದೆಯಂದು ಶಿವನ ಕುರುಹು ಲಿಂಗವೆಂದು ಲೇಖನದ ಮೂಲಕ ಲೇಖಕರು ಓದುಗರಿಗೆ ತಿಳಿಸಿರುವರು.
ಲಿಂಗವೆಂಬುದು ಪರಶಿವ ಶಕ್ತಿಯ ನಿಜವಾಸ ಲಿಂಗವೆಂಬುದು ಪರಶಿವನ ಪರ ಜ್ನ್ಯಾನದ ಜ್ಯೋತಿ ಅನ್ನುವುದು ಹೇಳಿದ್ದಾರೆ.
ಶರಣರ ಕಾಯಕದಲ್ಲಿ ಜಾನಪದ ಕಲೆಗಳು
ಬಸವಾದಿ ಶರಣರು ಕಾಯಕವನ್ನು ನಂಬಿದವರು,
ಕಾಯಕವನ್ನು ದೇವರೆಂದು ಆರಾಧಿಸಿದವರು. ಹೀಗಾಗಿ ಕಾಯಕ ತತ್ವವನ್ನು ಶರಣತತ್ವವನ್ನಾಗಿಸಿದವರು.
""ಕಾಯಕದಲ್ಲಿ ನಿರತನಾದೊಡೆ ಗುರು ದರ್ಶನವಾದರೂ ಮರೆಯಬೇಕು ""
ಜಂಗಮ ಮುಂದಿದ್ದಡು ಹಂಗು ಹರಿಯಬೇಕು
ಕಾಯಕವೇ ಕೈಲಾಸವಾದ ಕಾರಣ
ಅಮರೇಶ್ವರ ಲಿಂಗವಾಯಿತ್ತಾದಡು ಕಾಯಕದೊಳಗು""
ಆಯ್ದಕ್ಕಿ ಮಾರಮ್ಮ ನವರ ವಚನದ ಭಾವದಂತೆ
ಶರಣರು ಅಂದು ಕಾಯಕ ಜೊತೆ ಜೊತೆಗೆ ಜಾನಪದದ ಹಾಡಿನ ಸೊಗಡನ್ನು ಜನರಲ್ಲಿ ಪಸರಿಸುತ್ತ ಬೇಸರವನ್ನು ಮರೆತು ಕಾಯಕದಲ್ಲಿ ನೀರತರಾಗಿರುವದನ್ನು ಈ ಲೇಖನದಲ್ಲಿ ಉಲ್ಲೆಖಿಸಿದ್ದಾರೆ.
ಅನುಭವಮಂಟಪದಲ್ಲಿ_ಸ್ತ್ರೀಸಮಾನತೆ
ಹನ್ನೆರಡನೇ ಶತಮಾನದಲ್ಲಿ ಮಹಾ ಮಾನವತಾವಾದಿ ಬಸವಣ್ಣನವರು ತಮ್ಮ ವಿಚಾರ ಗಳ ಮೂಲಕ
""ಹೆಣ್ಣು ಮಾಯೇ ಅನ್ನುವ ಸಮಾಜಕ್ಕೆ ಹೆಣ್ಣು ಮಾಯೇಯಲ್ಲ ನಮ್ಮ ಮನದ ಮುಂದಣ ಆಸೆಯೇ ಮಾಯೇ ಯಂದು ಈ ಸಮಾಜಕ್ಕೆ ತಮ್ಮ ಮಾತಿನ ಮೂಲಕ ಚಾಟಿ ಬೀಸಿದ್ದಾರೆ . ಅನುಭವ ಮಂಟಪವನ್ನು ರಚಿಸಿ ಅಲ್ಲಿ ಹೆಣ್ಣಿಗೆ ಪುರುಷರಂತೆ ಸಮಾನವಾದ ಸ್ಥಾನಮಾನ ಕಲ್ಪಿಸಿರುವುದನ್ನು ಲೇಖಕರು ತಿಳಿಸಿರುವರು..
ಇಂದಿನ ಬದುಕಿಗೆ ಶರಣರ ಮೌಲ್ಯಗಳು
ಸತ್ಯ ಅಹಿಂಸೆ ನಿಸ್ವಾರ್ಥ ಪ್ರೀತಿ ತ್ಯಾಗ ಸ್ನೇಹ ಪ್ರಾಮಾಣಿಕತೆ ಇಂತಹ ಜೀವನ ಮೌಲ್ಯಗಳನ್ನು ಶರಣರಲ್ಲಿ ಕಾಣಬಹುದಾದ ಸಂಧರ್ಭ ಸನ್ನಿವೇಶಗಳನ್ನು ಇಂದಿನ ಪ್ರಸ್ತುತ ಬದುಕಿಗೆ ಬಹುಮುಖ್ಯವಾದುದನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುವದೆಂದು ಲೇಖಕರು ಪ್ರತಿಪಾದಿಸಿರುವರು.
ಕಲ್ಯಾಣ ಕರ್ನಾಟಕದ ಜಾತ್ರೋತ್ಸವ ಹಾಗು ಪ್ರದರ್ಶನ ಕಲೆಗಳು
ಜಾತ್ರೇಗೆ ಹೋಗಲಾಕ ಜರದ ರುಮಾಲ ಬೇಕ
ಮ್ಯಾಲ ಬಂಗಾರದ ಕೊಡಿ ಬೇಕ: ಶರಣಪ್ಪನ ತೇರು ಎಳೆದು ಬರಬೇಕೋ ಅನ್ನುವ ಜಾನಪದದೊಂದಿಗೆ ಲೇಖಕರು ಕಲ್ಯಾಣ ಕರ್ನಾಟಕದ ಜಾತ್ರೆ ಮತ್ತು ಇಲ್ಲಿನ ಕಲೆ ಪರಂಪರೆ ಬಗ್ಗೆ ತಿಳಿಸಿದ್ದಾರೆ.
ಹೀಗೆ ಒಟ್ಟು ಹದಿನಾಲ್ಕು ಲೇಖನಗಳು ಒಳಗೊಂಡ ಈ ಪುಸ್ತಕ ಓದುಗರಿಗೆ ಸಮಗ್ರ ಕಲ್ಯಾಣ ಕರ್ನಾಟಕದ ಚಿತ್ರಣದ ಹೂರಣ ಇಲ್ಲಿ ಉಣಬಡಿಸಲಾಗಿದೆ.
ಹೀಗೆ ಕಲ್ಯಾಣದೆಡೆಗೆ ಕೃತಿಗಳಿಗೆ ಲೇಖಕರು ಮಾರ್ಮಿಕವಾಗಿ ಚಿತ್ರಿಸಿ ಓದುಗರ ಕೈಗೆ ನೀಡಿದ್ದಾರೆ.ಕೃತಿ :-ಕಲ್ಯಾಣದೆಡೆಗೆ
ಲೇಖಕರು :-ಡಾ. ಶಿವಲೀಲಾ (ಇತಿಹಾಸ ಪ್ರಾಧ್ಯಪ್ರಕರು )
ಪ್ರಕಾಶಕರು :-ಎಚ್ ಎಸ್ ಆರ್ ಎ ಪ್ರಕಾಶನ.ಬೆಂಗಳೂರು
ಬೆಲೆ :-120ರೂಪಾಯಿ.
ಓಂಕಾರ ಪಾಟೀಲ
(ಕಾರ್ಯದರ್ಶಿ :-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ )