ಯುವಕರು ಹಳ್ಳಿ ಕಡೆ ಮುಖ ಮಾಡಿ ನೆಮ್ಮದಿ ಜೀವನ ಸಾಗಿಸಲಿ: ಶಂಭುಲಿಂಗ ಶ್ರೀಗಳು

ಯುವಕರು ಹಳ್ಳಿ ಕಡೆ ಮುಖ ಮಾಡಿ ನೆಮ್ಮದಿ ಜೀವನ ಸಾಗಿಸಲಿ: ಶಂಭುಲಿಂಗ ಶ್ರೀಗಳು

ಯುವಕರು ಹಳ್ಳಿ ಕಡೆ ಮುಖ ಮಾಡಿ ನೆಮ್ಮದಿ ಜೀವನ ಸಾಗಿಸಲಿ: ಶಂಭುಲಿಂಗ ಶ್ರೀಗಳು

ಕಮಲನಗರ :ತಾಲೂಕಿನ ರಂಡ್ಯಾಳ ಗ್ರಾಮದ ಆರಾಧ್ಯ ದೇವರಾದ ಸದ್ಗುರು ಶ್ರೀ ಚನ್ನಮಲ್ಲೇಶ್ವರ ದೇವರ 44ನೇ ಜಾತ್ರಾ ಉತ್ಸವ ನಿಮಿತ್ಯ ನಡೆದ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿ ಜನನಿ ಮತ್ತು ಜನ್ಮ ಭೂಮಿ ನಾವು ಯಾವತ್ತು ಮರೆಯಬಾರದು ಅವಾಗ ಮಾತ್ರ ನಾವುಗಳು ಹುಟ್ಟಿ ಬದುಕಿ ಬಂದಿದ್ದಕ್ಕೆ ಸಾರ್ಧಕತೆ ಬರುತ್ತದೆ ಎಂದು ಹಾವಗಿಸ್ವಾಮಿ ಮಠ ಅಧ್ಯಕ್ಷರಾದ ಡಾ|ಶಂಭುಲಿಂಗ ಶ್ರೀ ಗಳು ನುಡಿದರು, 

ಇದೇ ಸಂಧರ್ಭದಲ್ಲಿ ಹಣೆಗಾoವ ಶ್ರೀ ಗಳು ಆಶೀರ್ವಚನ ನೀಡಿ ದೇಶ 20ಪ್ರತಿಷತ ಅಕ್ಷರಸ್ಥ ವಿದ್ದಾಗ ಒಂದು ವೃಧಆಶ್ರಮಗಳು ಇರಲಿಲ್ಲ ಆದರೆ ಇಂದು ದೇಶದಲ್ಲಿ 90ಪ್ರತಿ ಷತ ಅಕ್ಷರಸ್ಥ ಆದರು ಹಳ್ಳಿ ಹಳ್ಳಿ ಗಳಲ್ಲಿ ವೃಧಆಶ್ರಮಗಳು ಬೆಳದು ನಿಲ್ಲುತಿವೆ ನಾವು ಪಡೆದ ಶಿಕ್ಷಣ ಇದೆ ನಾ? ಏಂದು ಕಳವಳ ವ್ಯಕ್ತಪಡಿಸಿದರು.

 ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಕೌಳಾಸ ಶ್ರೀಗಳು ಮಾತನಾಡಿ ಹರ ಗುರು ಚರವಾಗಿರುವ ಸದ್ಗುರು ಚನ್ನಮಲ್ಲೇಶ್ವರ ಮಹಿಮೆ ಅಪಾರವಾಗಿದ್ದು ಈ ಭಾಗದ ವಿಭೂತಿ ಪುರುಷರಾಗಿ ಹೋಗಿದ್ದಾರೆ. ಈ ಮಠಯು ಪಂಚಪಿಠದಲ್ಲಿ ಮೊದಲನೇ ಪೀಠ ಹೊಂದಿರುವ ರಂಭಾಪುರಿ ಪೀಠ ಅಧಿನದಲಿ ಬರುತ್ತದೆ. ಮೂಲ ಮಠ ಹಾವಗಿ ಸ್ವಾಮಿ ಮಠದ 108 ಶಾಖಾ ಮಠಗಳಲಿ ಚನ್ನಮಲ್ಲೇಶ್ವರ ಮಠ ಒಂದು, ಮಠ ಅಧ್ಯಕ್ಷತೆ ವಹಿಸಿಕೊಂಡ ನಂತರ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ನಶಿಸಿಹೋಗುತಿರುವ ಭಕ್ತರ ಶಂಖ್ಯೆ ಮತ್ತೆ ಒಂದು ಮಾಡುತ್ತಿರುವರು ಶoಭುಲಿಗ ಶ್ರೀ ಗಳ ಕಾರ್ಯ ಸ್ಲಾಘನಿಯವಾಗಿದೆ. ಈ ಭಾಗದಲ್ಲಿ ನಡೆದಾಡಿದ ಶ್ರೀ ಬಸವಲಿಂಗಪ್ಪದೇಶಿ ಕೇಂದ್ರ ನಂತರ ಅತಿ ಹೆಚ್ಚು ಭಕ್ತರ ಉದ್ಧಾರ ಮಾಡುತ್ತಿರುವರು ಯಾರಾದರು ಇದ್ದರೆ ಅವರು ಶoಭುಲಿಂಗ ಶ್ರೀ ಗಳು ಉದಾಹರಣೆ ಎಂದರೆ ತಪ್ಪಾಗಲಾರದು, ಶ್ರಾವಣ ಮಾಸ ದಲ್ಲಿ ಪುಣೆಯಲ್ಲಿ ತಮ್ಮ 32 ಮೌನ ಅನುಷ್ಠಾನ ಕೈಗೊಂಡು ಅಲ್ಲಿನ ಭಕ್ತರಿಗೆ ಲಿಂಗದಿಕ್ಷೆ ನೀಡಿರುವದು ತಾವುಗಳು ನೆನಪಿಸಿಕೊಳ್ಳಬಹುದು ಎಂದು ಕೌಳಾಸ ಶ್ರೀ ಗಳು ನುಡಿದರು.

 ಈ ಸಂಧರ್ಭದಲ್ಲಿ ಮಹಾರಾಷ್ಟ್ರದ ದೇವನಿ ಶ್ರೀಗಳು ಪ್ರವೀಣ ಹೋಂಡಾಳೆ, ರಂಡ್ಯಾಳ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಡೋಣಗಾoವ( ಎಂ), ಹಕ್ಯಾಳ, ಖತಗಾoವ, ಮುರ್ಕಿ, ಮದನೂರು, ಕೊಟಗ್ಯಾಳದಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.