ಜೇವರ್ಗಿ–ಯಡ್ರಾಮಿ ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿಗಳ ದರ್ಬಾರ್-ಮಹಾಂತಗೌಡ ಪಾಟೀಲ

ಜೇವರ್ಗಿ–ಯಡ್ರಾಮಿ ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿಗಳ ದರ್ಬಾರ್-ಮಹಾಂತಗೌಡ ಪಾಟೀಲ

ಜೇವರ್ಗಿ–ಯಡ್ರಾಮಿ ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿಗಳ ದರ್ಬಾರ್!

ವಾಹನ ಸವಾರರಿಗೆ ಪ್ರಾಣಾಪಾಯ – ತಕ್ಷಣ ಕ್ರಮ ಕೈಗೊಳ್ಳಬೇಕು : ಮಹಂತಗೌಡ ಆರ್. ಪಾಟೀಲ್

ಜೇವರ್ಗಿ ತಾಲ್ಲೂಕಿನಿಂದ ಚಿಗರಹಳ್ಳಿ ಮಾರ್ಗವಾಗಿ ಯಡ್ರಾಮಿ ತಾಲ್ಲೂಕಿನತ್ತ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಈಗ ತಗ್ಗು ಗುಂಡಿಗಳಿಂದ ಕಿತ್ತಾಟಗೊಂಡಿದೆ. ಪ್ರತಿದಿನ ವಾಹನ ಸವಾರರು ಈ ರಸ್ತೆಗಳಲ್ಲಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗುತ್ತಿರುವ ಘಟನೆಗಳು ಹೆಚ್ಚುತ್ತಿವೆ.

ಇದೆ ರಸ್ತೆಯಲ್ಲಿ ತೀರುಗಾಡುವ ರಾಜ್ಯ ಹೆದ್ದಾರಿ ಅಧಿಕಾರಿಗಳು ,ಪಿಡಬ್ಲ್ಯೂಡಿ AEE ಅವರು ತಗ್ಗು ಗುಂಡಿಗಳನ್ನು ಕಂಡರೂ ನಿರ್ಲಕ್ಷ್ಯ ತೋರಿ, ಅವರು ಸಾರ್ವಜನಿಕ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಿಂದ ರೈತರು, ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರು ಪ್ರತಿದಿನ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ವೇಳೆ ಯಡ್ರಾಮಿ ತಾಲ್ಲೂಕಿನ ಇಜೇರಿ ಗ್ರಾಮದಿಂದ ಯಡ್ರಾಮಿ ವರೆಗೆ ನಡೆಯುತ್ತಿರುವ ಡಾಂಬರೀಕರಣ ಕಾಮಗಾರಿಯೂ ಕಳಪೆ ಗುಣಮಟ್ಟದಲ್ಲಿ ಸಾಗುತ್ತಿದೆ ಎಂದು ಆರೋಪಿಸಲಾಗಿದೆ.

ಎಸ್ಟಿಮೆಂಟ್ ಪ್ರಕಾರ ಕೆಲಸ ನಡೆಯದಿದ್ದರೂ ಗುತ್ತಿಗೆದಾರನಿಗೆ ಬಿಲ್ ನೀಡಲಾಗಿದೆ ಎಂಬ ಗಂಭೀರ ಆರೋಪವನ್ನು ರಾಷ್ಟ್ರೀಯ ಅಹಿಂದ ಸಂಘದ ಯಡ್ರಾಮಿ ತಾಲೂಕು ಅಧ್ಯಕ್ಷ ಮಹಂತ್ ಗೌಡ ಆರ್. ಪಾಟೀಲ್ (ಹಂಗರಗಾ ಕೆ) ಅವರು ಮಾಡಿದ್ದಾರೆ.

“ಕಳಪೆ ಕಾಮಗಾರಿಗಳನ್ನು ಮರೆಮಾಚಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಲಾಗುತ್ತಿದೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಅನಿವಾರ್ಯತೆ ಎದುರಾಗುತ್ತದೆ,” ಎಂದುಹೇಳಿದರು 

ವರದಿ : ಜೇಟ್ಟೆಪ್ಪ ಎಸ್. ಪೂಜಾರಿ