ಜಯನಗರ ಶಿವಮಂದಿರದಲ್ಲಿ ಅದ್ಧೂರಿಯಾಗಿ ದೀಪೋತ್ಸವ ಆಚರಣೆ.

ಜಯನಗರ ಶಿವಮಂದಿರದಲ್ಲಿ ಅದ್ಧೂರಿಯಾಗಿ ದೀಪೋತ್ಸವ ಆಚರಣೆ.

ಜಯನಗರ ಶಿವಮಂದಿರದಲ್ಲಿ ಅದ್ಧೂರಿಯಾಗಿ ದೀಪೋತ್ಸವ ಆಚರಣೆ.

ಕಲಬುರಗಿ: ಜಯನಗರ ಶಿವಮಂದಿರದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ಮಹಿಳಾ ಘಟಕದ ವತಿಯಿಂದ 1000 ಕ್ಕೂ ಹೆಚ್ಚು ದೀಪಗಳನ್ನು ಹಚ್ಚುವ ಮೂಲಕ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.

‌ಮಹಿಳಾ ಘಟಕದ ಸದಸ್ಯರು ಹಾಗೂ ವಿವಿಧ ಬಡಾವಣೆಗಳಿಂದ ಅನೇಕ ಮಹಿಳೆಯರು ಶಿವ ಮಂದಿರದಲ್ಲಿ ಸಾಲು ಸಾಲಾಗಿ ಪಣತಿ ಹಚ್ಚಿ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪೂರ ಮಾತನಾಡಿ ದೀಪಾವಳಿ ಹಬ್ಬವು ಹಿಂದೂ ಧರ್ಮದ ದೊಡ್ಡ ಹಬ್ಬವಾಗಿದೆ.ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ದೀಪಾವಳಿ ಕಳೆದು ಇದೀಗ ಕಾರ್ತಿಕ ಮಾಸ ಪ್ರಾರಂಭವಾಗಿದೆ.ಜನರ ಜೀವನದಲ್ಲಿ ಹೊಸ ಕಿರಣ ಮೂಡಲಿ.ಅದೇ ರೀತಿ ಅಜ್ಞಾನ ಅಳಿದು ಜ್ಞಾನ ಹೆಚ್ಚಿಸಲಿ.ಪ್ರತಿ ವರ್ಷದಂತೆ ಶಿವಮಂದಿರದಲ್ಲಿ ಹಣತೆ ಹಚ್ಚುವ ಮೂಲಕ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದರು.

ಟ್ರಸ್ಟ್ ಹಿರಿಯ ಸದಸ್ಯರಾದ ಎಂ.ಡಿ.ಮಠಪತಿ, ಉಪಾಧ್ಯಕ್ಷ ವೀರೇಶ ದಂಡೋತಿ,ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ,ಮಹಿಳಾ ಕಾರ್ಯದರ್ಶಿ ಅನುರಾಧಾ ಕುಮಾರಸ್ವಾಮಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಸ್ವಾಗತಿಸಿದರು.

ಸಂಘಟನಾ ಕಾರ್ಯದರ್ಶಿ ಬಂಡಪ್ಪ ಕೇಸೂರ, ಸಹ ಕಾರ್ಯದರ್ಶಿ ಸಿದ್ಧಲಿಂಗ ಗುಬ್ಬಿ,ಹಿರಿಯ ಸದಸ್ಯರಾದ ಬಸವರಾಜ ಅನ್ವರಕರ,ಬಸವರಾಜ ಪುರ್ಮಾ, ಮನೋಹರ ಬಡಶೇಷಿ, ವೀರಪ್ಪ ಹುಡುಗಿ,ಮಲ್ಲಯ್ಯ ಸ್ವಾಮಿ ಗಂಗಾಧರಮಠ,ಮಲ್ಲಯ್ಯ ಸ್ವಾಮಿ ಬೀದಿಮನಿ, ವಿನೋದ ಪಾಟೀಲ, ಗುಡಿಯ ಅರ್ಚಕ ವೀರಯ್ಯ ಹಿರೇಮಠ,ಮಹಿಳಾ ಘಟಕದ ಪದಾಧಿಕಾರಿಗಳಾದ ಅನಿತಾ ನವಣಿ,ಸುರೇಖಾ ಬಾಲಕೊಂದೆ, ಲತಾ ತುಪ್ಪದ,ವಿಜಯಾ ದಂಡೋತಿ, ಪಾರ್ವತಿ ರಠಕಲ್, ಗೀತಾ ಸಿರಗಾಪೂರ, ಸುಜಾತಾ ಭೀಮಳ್ಳಿ, ಗೀತಾ ಹುಡುಗಿ, ವಿಜಯಾ ಚೌವ್ಹಾಣ್,ನಿಲೋಚನಾ ಬಿಡಪ್ಪ, ಗಂಗಾ ಅನ್ವರಕರ, ಪಾರ್ವತಿ ಶೆಟ್ಟಿ,ಸೇರಿದಂತೆ ಅನೇಕರು ಭಾಗವಹಿಸಿದ್ದರು