ಒಲವನರಿಸಿ (ಗಜಲ್ ಸಂಕಲನ)

ಒಲವನರಿಸಿ (ಗಜಲ್ ಸಂಕಲನ)

ಒಲವನರಿಸಿ (ಗಜಲ್ ಸಂಕಲನ)

ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಡಾ. ವಿಜಯಕುಮಾರ ಪರುತೆಯವರು “ಒಲವನರಿಸಿ” ಎಂಬ ಮೊದಲ ಗಜಲ್ ಸಂಕಲನದ ಮೂಲಕ ಓದುಗರ ಮುಂದೆ ನಿಂತಿದ್ದಾರೆ. ಸರಳ, ಸಜ್ಜನಿಕೆ ಹಾಗೂ ಅಹಂಕಾರವಿಲ್ಲದ ವ್ಯಕ್ತಿತ್ವವು ಅವರ ಬದುಕಿನ ಪ್ರತಿಬಿಂಬವಷ್ಟೇ ಅಲ್ಲ, ಅವರ ಕಾವ್ಯದ ಮೂಲ ಸ್ವರೂಪವೂ ಆಗಿದೆ.

ಈ ಸಂಕಲನವು 69 ಗಜಲ್‌ಗಳನ್ನು ಒಳಗೊಂಡಿದ್ದು, ಪ್ರತಿ ಗಜಲ್ ಐದು ಷೇರ್‌ಗಳಿಂದ ಮಾತ್ರ ಸಜ್ಜಿತವಾಗಿದೆ. ಅಚ್ಚರಿಯ ಸಂಗತಿ ಎಂದರೆ—ಎಲ್ಲವೂ ಸಮರೂಪದ ಶಿಸ್ತಿನಿಂದ ಬಂದಿವೆ. ಬದುಕಿನ ಸಣ್ಣ–ದೊಡ್ಡ ಅನುಭವಗಳು, ದಾಂಪತ್ಯ, ಬಡತನ, ಬಾಳಿನ ವ್ಯಂಗ್ಯ–ವಾಸ್ತವಗಳು, ನಗು–ಅಳುವಿನ ನೈಸರ್ಗಿಕ ತತ್ತ್ವಗಳು ಇವೆಲ್ಲವೂ ಈ ಗಜಲ್‌ಗಳ ಅಸ್ತಿತ್ವವನ್ನು ಸಮೃದ್ಧಗೊಳಿಸುತ್ತವೆ.

ಪರುತೆಯವರ ಗಜಲ್‌ಗಳು ಪ್ಯೂರ್ ವೆಜಿಟೇರಿಯನ್ ಗಜಲ್‌ಗಳೆಂದು ಹೇಳಬಹುದು. ಅಂದರೆ, ಯಾವುದೇ ಕೃತಕ ಮೆರುಗು ಇಲ್ಲದೆ, ನೇರವಾಗಿ ಹೃದಯಕ್ಕೆ ತಲುಪುವ ಶುದ್ಧ ಭಾವನೆಗಳ ಸಾತ್ವಿಕತೆ ಇವುಗಳಲ್ಲಿ ಕಂಡು ಬರುತ್ತದೆ.

ಪರುತೆಯವರು ತಮ್ಮ ಸಾಹಿತ್ಯಯಾತ್ರೆಯಲ್ಲಿ ವಚನಧಾರೆ, ನುಡಿಸಂಪದ, ನುಡಿಕಿರಣ, ಬೆಳಕಿನೆಡೆಗೆ, ಮಕರಂದ, ಇಂಚರ ಮುಂತಾದ ಹಲವು ಪ್ರಕಾರಗಳಲ್ಲಿ ಬರಹ ನೀಡಿ, 27 ಕೃತಿಗಳನ್ನು ಸಾಹಿತ್ಯ ಖಜಾನೆಗೆ ಸೇರಿಸಿದ್ದಾರೆ. ರುಬಾಯಿ, ತಾಂಕಾ, ಹಾಯ್ಕು, ಸುನೀತ, ದ್ವಿಪದಿಯಂತಹ ಪ್ರಕಾರಗಳ ಅರಿವಿನೊಂದಿಗೆ ಗಜಲ್‌ಗಳತ್ತ ತಿರುಗಿರುವುದು ಅವರ ಕಾವ್ಯ ವೈವಿಧ್ಯದ ನಿದರ್ಶನವಾಗಿದೆ.

  ಗಜಲ್‌ ಸಂಕಲನದ ವೈಶಿಷ್ಟ್ಯ:

* ಗಜಲ್‌ಗಳು ಬದುಕಿನ ವಾಸ್ತವಿಕತೆಯನ್ನು ನೇರವಾಗಿ ಪ್ರತಿಬಿಂಬಿಸುತ್ತವೆ.

* ಸರಳ, ಹಿತಭಾಷಿತ, ನಿಸರ್ಗಸ್ಪರ್ಶಿ ಕಾವ್ಯಭಾವಗಳು.

* ಸಾಂಸ್ಕೃತಿಕ ಮೌಲ್ಯಗಳು, ಕುಟುಂಬದ ಆದರ್ಶಗಳು ಹಾಗೂ ನಿಸರ್ಗದ ಹತ್ತಿರ ಬದುಕುವ ಆಕಾಂಕ್ಷೆ.

* ಹಿಂದಿ ಪ್ರಾಧ್ಯಾಪಕರಾಗಿರುವ ಕಾರಣ, ಕೆಲವೊಂದು ಗಜಲ್‌ಗಳಲ್ಲಿ ಹಿಂದಿ ಕಾವ್ಯದ ತೆಳು ಸ್ಪರ್ಶವಿದೆ.

ಪುಸ್ತಕ ಕುರಿತು ಮಾಹಿತಿ:

* ಸಂಕಲನದ ಹೆಸರು: "ಒಲವನರಿಸಿ"

* ಲೇಖಕ: ಡಾ. ವಿಜಯಕುಮಾರ ಪರುತೆ

* ಪ್ರಕಟಣೆ: 2025

* ಪುಟಗಳು: 91

* ಬೆಲೆ: ₹100

* ಮುನ್ನುಡಿ: ಸಾಹಿತಿ ಕಾಶಿನಾಥ್ ಅಂಬಲಗಿ 

* ಬೆನ್ನುಡಿ: ಮಂಡಲಗಿರಿ ಪ್ರಸನ್ನ

* ಗಜಲ್ ಕುರಿತ ಲೇಖನ: ಮಲ್ಲಿನಾಥ್ ತಳವಾರ

* ಅರ್ಪಣೆ: ರಾಜಕಾರಣಿ ಲಿಂ ವೈಜನಾಥ ಪಾಟೀಲ್

* ಮುಖಪುಟ ವಿನ್ಯಾಸ: ರಾಮು ಕ್ರಿಯಾ, ಬೆಂಗಳೂರು

* ಅಕ್ಷರ ಜೋಡಣೆ: ಭಾರತಿ ಮೀಡಿಯಾ ಸೊಲ್ಯೂಷನ್, ಕಲಬುರಗಿ

* ಪ್ರಕಾಶನ: ವಿಜಯಪ್ರಕಾಶನ, ಗುರು ಕೃಪಾ ನಿಲಯ, ಭಾಗ್ಯನಗರ, ಕಲಬುರಗಿ 

* ಮುದ್ರಣ: ವಿಶ್ವಾಸ್ ಪ್ರಿಂಟರ್ಸ್, ಬೆಂಗಳೂರು

-ಒಟ್ಟಿನಲ್ಲಿ "ಒಲವ ನರಿಸಿ" ಸಂಕಲನವು ಓದುಗರಿಗೆ ತಾಜಾತನ, ಸರಳತೆ ಮತ್ತು ಹೃದಯಸ್ಪರ್ಶಿ ಅನುಭವಗಳನ್ನು ನೀಡುವ ಗಜಲ್ ಸಂಕಲನವಾಗಿದೆ. ಬಾಳಿನ ಹಾದಿಗಳಲ್ಲಿ ಹಸಿರು ನೆರಳನ್ನು ಕೊಡುವ ಈ ಕೃತಿಯು ಕನ್ನಡ ಸಾಹಿತ್ಯ ಲೋಕದಲ್ಲಿ ಗಜಲ್‌ಗಳಿಗೆ ಹೊಸ ಅಸ್ತಿತ್ವ ನೀಡುತ್ತದೆ ಎಂದು ನಿಶ್ಚಯವಾಗಿ ಹೇಳಬಹುದು.

-ಶರಣಗೌಡ ಪಾಟೀಲ ಪಾಳಾ