ಚಾಂದೋರಿ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ
ಚಾಂದೋರಿ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಆಚರಣೆ
ಕಮಲನಗರ: ತಾಲೂಕಿನ ಚಾಂದೋರಿ ಗ್ರಾಮದಲ್ಲಿ ಇತ್ತೀಚೆಗೆ ಅಖಂಡ ಹರಿನಾಮ ಸಪ್ತಾಹ ಹಮ್ಮಿಕೊಂಡಿದ್ದು,ಈ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಂತ ಜ್ಞಾನೇಶ್ವರ ತುಕಾರಾಮ ಮಹಾರಾಜರು ನೀಡಿರುವ ತತ್ವಗಳಲ್ಲಿ ಜ್ಞಾನ ಭಕ್ತಿ ಮತ್ತು ಮೋಕ್ಷ ಮಾರ್ಗಗಳನ್ನು ಅಳವಡಿಸಿಕೊಂಡು ಜೀವನ ಅತ್ಯಂತ ಸರಳ ಮತ್ತು ಸಾತ್ವಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಭಾರತಿ ಸಂಪ್ರದಾಯ ಮತ್ತು ಜೀವನ ಶೈಲಿ ವಿಶ್ವಕೆ ಮಾದರಿಯಾಗಿದೆ. ಎಂದರು.
ಮಾನವ ಜನ್ಮ ದೊಡ್ಡದು ಅದನ್ನು ವ್ಯರ್ಥ ಹಾಳು ಮಾಡಿಕೊಳ್ಳದೆ ಕುಟುಂಬ ಮತ್ತು ಸಮಾಜಕ್ಕೆ ನಮ್ಮ ಬದುಕು ಅರ್ಪಿಸಿಕೊಳ್ಳಬೇಕು ಎಂದು ಶಾಸಕ ಪ್ರಭು ಚವ್ಹಾಣ ನುಡಿದರು.
ಕೀರ್ತನೆಕಾರ ಕುಮಾರಿ ಕಾಂಚನಾತಾಯಿ ಶೆಳಕೆ ಮಾತನಾಡಿ ಭಕ್ತಿಭಾವದ ಮೂಲಕ ಧಾರ್ಮಿಕ ಶ್ರದ್ಧೆ ಮತ್ತು ಅಧ್ಯಾತ್ಮಿಕ ಚಿಂತೆಗಳ ಮೂಲಕ ಸಮಾಜ ನಿರ್ಮಾಣ ಯುವಕರ ಮುಂದಾಗಬೇಕು. ಅಸಮಾನತೆ ಬೇರುಗಳು ಕಿತ್ತು ಹಾಕಿ ನಾವೆಲ್ಲರೂ ಒಂದೇ ಎನ್ನುವ ಮೂಲಕ ಬದುಕಬೇಕು ಹಾಗೂ ಭಕ್ತಿ ಮಾರ್ಗದಿಂದ ಗುರು-ಹಿರಿಯರ ಬಗ್ಗೆ ಭಕ್ತಿಯನ್ನು ತೋರುವ ಮೂಲಕ ಗೌರವಿಸುವುದನ್ನು ಕಲಿಯಬೇಕು. ಇತ್ತಿತ್ತಲಾಗಿ ಹಿರಿಯರನ್ನು ಗೌರವಿಸದೆ ಬದುಕುವುದು ಮಾನವ ಧರ್ಮಕ್ಕೆ ಕಳಂಕವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿವಾಜಿ ರಾವ್ ಪಾಟೀಲ್ ಮುಂಗನಾಳ ರಾಮಶೆಟ್ಟಿ ಪನ್ನಾಳೆ ಹರಿಭಕ್ತ ಭಜನಾ ಮಂಡಳಿ ಮತ್ತು ಗ್ರಾಮದ ಭಕ್ತರು ಇದ್ದರು.