ಇನ್ನೊಮ್ಮೆ ಹುಟ್ಟಿ ಬಾ ಬಾಬಾಸಾಹೇಬ

ಇನ್ನೊಮ್ಮೆ ಹುಟ್ಟಿ ಬಾ ಬಾಬಾಸಾಹೇಬ್
ಗಂಡು- ಹೆಣ್ಣಿನ ನಡುವೆ ಲಿಂಗಭೇದ
ಮನುಷ್ಯ-ಮನುಷ್ಯರ ನಡುವೆ ಜಾತಿಭೇದ
ಜಾತಿ-ಜಾತಿಗಳ ನಡುವೆ ಮತಭೇದ
ಹೀಗೆ ಛಿದ್ರ-ಛಿದ್ರವಾಗಿ ಒಡೆದು ಹೋಗುತ್ತಿರುವಾಗ,
ಸಮಾನತೆಯನ್ನು ಮಂಡಿಸಲು ಇನ್ನೊಮ್ಮೆ ಹುಟ್ಟಿ
ಬಾ ಬಾಬಾಸಾಹೇಬ.!
ಮನುಷ್ಯರ ನಡುವೆ ಪ್ರೀತಿ- ವಿಶ್ವಾಸಗಳ
ಬದಲಾಗಿ, ದ್ವೇಷ- ಅಸೂಯೆಗಳು
ತಾಂಡವವಾಡುತ್ತಿರುವಾಗ ಮಾನವೀಯ
ಮೌಲ್ಯಗಳನ್ನು ಮೂಡಿಸಲು ಇನ್ನೊಮ್ಮೆ ಹುಟ್ಟಿ
ಬಾ ಬಾಬಾಸಾಹೇಬ.!
ನಿತ್ಯವೂ ಶೋಷಣೆ, ಭ್ರಷ್ಟಾಚಾರ
ಅತ್ಯಾಚಾರ, ಅನಾಚಾರ,ಸುಲಿಗೆ
ದರೋಡೆಗಳು ಹೆಚ್ಚುತ್ತಿರುವಾಗ,
ಅಂತವರನ್ನು ಶಿಕ್ಷಿಸುವುದಕ್ಕಾಗಿ
ಇನ್ನೊಮ್ಮೆ ಹುಟ್ಟಿ
ಬಾ ಬಾಬಾಸಾಹೇಬ.!
ಕಾನೂನುಗಳೆಲ್ಲ ದಿನನಿತ್ಯ
ಕೈತಪ್ಪಿ ಹೋಗುತ್ತಿರುವಾಗ
ನೀನೇಕೆ ಸುಮ್ಮನಿರುವೆ,
ಅವರನ್ನು ಶಿಕ್ಷಿಸಲು ಇನ್ನೊಮ್ಮೆ
ಹುಟ್ಟಿ ಬಾ ಬಾಬಾಸಾಹೇಬ!
ನಿನ್ನ ಹೆಸರಿನ ಮೇಲೆ ದಿನನಿತ್ಯ ಲೂಟಿ
ಯಾರನ್ನು ಯಾವರೀತಿ ನಂಬುತಿಯಾ
ನೀನಿಲ್ಲದೇ ಜಗವಿಲ್ಲ ಇನ್ನೊಮ್ಮೆ
ಹುಟ್ಟಿ ಬಾ ಬಾಬಾಸಾಹೇಬ!
ಡಾ. ನಾಗಪ್ಪ ಟಿ ಗೋಗಿ