ಕನ್ನಡ ನಾಮಫಲಕ ಅಳವಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮನವಿ
ಕನ್ನಡ ನಾಮಫಲಕ ಅಳವಡಿಸಲು ಕರ್ನಾಟಕ ರಕ್ಷಣಾ ವೇದಿಕೆ ಮನವಿ
ಆಳಂದ: ಕರ್ನಾಟಕ ರಾಜ್ಯದಲ್ಲಿ ಅಂಗಡಿ ಮೇಲಿರುವ ನಾಮಫಲಕಗಳಲ್ಲಿ ಶೇ60 ರಷ್ಟು ಕನ್ನಡದಲ್ಲಿ ಬರೆಯಲು ಆದೇಶಿಸಿದ್ದು ಈ ನಿಟ್ಟಿನಲ್ಲಿ ಸ್ವಯಂ ಪ್ರೇರಿತರಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಆಳಂದ ತಹಶೀಲ್ದಾರ್ ಅಣ್ಣಾರಾವ ಪಾಟೀಲ್ ಅವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಆಳಂದ ತಾಲೂಕ ಅಧ್ಯಕ್ಷ ಸಚೀನ .ಜಿ . ಲೋಕಾಣಿ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಲಾಯಕಅಲಿ ಬೆಳವಮಗಿ, ಮಲ್ಲು ಬಿರಾದಾರ, ಅರುಣ ಕೆರಮಗಿ, ರೋಹಿತ ಕೊರಳ್ಳಿ ಬಬ್ಲು . ಬಿಳಿರಾಮ ರಾಠೋಡ, ಸಾಗರ ಕಡಗಂಚಿ . ಸಿದ್ದು ಬಿರಾದಾರ, ವಿಲಾಸ ಕರಹರಿ. ಗಣೇಶ ನರೋಣಾ ಮುಂತಾದವರು ಉಪಸ್ಥಿತರಿದ್ದರು.
ವರದಿ ಅವಿನಾಶ S ದೇವನೂರ
