ಸಂಗೀತಕ್ಕೆ ನೋವು ಮರೆಸುವ ಶಕ್ತಿ ಇದೆ - ನಾಗಮಣಿ
ಸಂಗೀತಕ್ಕೆ ನೋವು ಮರೆಸುವ ಶಕ್ತಿ ಇದೆ - ನಾಗಮಣಿ
ಶಹಾಪುರ : ಮನುಷ್ಯನ ಜೀವನ ಜಂಜಾಟದಿಂದ,ದುಃಖ ಖಿನ್ನತೆ,ನೋವು ಮರೆಸುವ ಶಕ್ತಿ ಸಂಗೀತಕ್ಕಿದೆ ಎಂದು ನಾಗಮಣಿ ಬಿ ಎಂ ಹೇಳಿದರು.
ತಾಲೂಕಿನ ಟೋಕಾಪುರ ಗ್ರಾಮದ ಶ್ರೀ ಗುರು ಪುಟ್ಟರಾಜ ಸಂಗೀತ ಸಾಹಿತ್ಯ ಸಂಸ್ಕೃತಿಕ ಕಲಾ ಸಂಸ್ಥೆ ವತಿಯಿಂದ ಆಯೋಜಿಸಿದ ಜಾನಪದ ಸಂಗೀತ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು,ಇತ್ತೀಚಿಗೆ ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಸಂಗೀತ ಆಲಿಸುವುದರಿಂದ ಪಾರ್ಶ್ವ ವಾಯು ಎಂಬ ಮಹಾ ರೋಗವನ್ನು ಕೂಡ ದೂರ ಮಾಡಬಲ್ಲದು ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಗಳಾದ ಚೆನ್ನಯ್ಯ ಸ್ವಾಮಿ ಹಿರೇಮಠ ಮಾತನಾಡಿ, ಸಂಗೀತಕ್ಕೆ ತಲೆದೂಗದವರೇ ಈ ಪ್ರಪಂಚದಲ್ಲಿ ಇಲ್ಲ ಸಂಗೀತಕ್ಕೆ ತಲೆದೂಗದವರೇ ಈ ಪ್ರಪಂಚದಲ್ಲಿ ಇಲ್ಲ, ಸಂಗೀತ ಆಲಿಸುವುದರಿಂದ ಮನಸ್ಸು ಮುದಗೊಳ್ಳುತ್ತದೆ ಎಂದು ಹೇಳಿದರು.
ಈ ಸಮಾರಂಭದ ವೇದಿಕೆಯ ಮೇಲೆ ನಾಗರಾಜ್ ಗಾಣಿಗ, ಮಲ್ಲು ಪಾಟೀಲ್ ಮಲ್ಲು ಕಂಟ್ರೋಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಾಬರೆಡ್ಡಿ ದೊಡ್ಡಪ್ಪ ರಮೇಶ, ಹನುಮಂತ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಲಾವಿದರಾದ ಜಟ್ಟೆಪ್ಪ ಶಿವಕುಮಾರ್ ಸುರೇಶ್ ಮಲ್ಲಮ್ಮ ಮರಿಲಿಂಗ ಹಾಗೂ ಇನ್ನಿತರ ಕಲಾವಿದರಿಂದ ಹಲವಾರು
ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಸಂಸ್ಥೆಯ ಅಧ್ಯಕ್ಷ ಪಂಡಿತ್ ನಾಗಮೂರ್ತಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಸಕ್ರಪ್ಪ ಹುಂಡೇಕಲ,ನಿರೂಪಿಸಿದರು, ಸುನಿಲಕುಮಾರ ಅನವಾರ ವಂದಿಸಿದರು,
