“ಆಡ್-ಆನ್ ಕೋರ್ಸ್ ಉದ್ಘಾಟನ - ಟ್ರೆಂಡ್ಸ್ ಇನ್ ಇಂಡಿಯನ್ ಎಕಾನಮಿ”
“ಆಡ್-ಆನ್ ಕೋರ್ಸ್ ಉದ್ಘಾಟನ - ಟ್ರೆಂಡ್ಸ್ ಇನ್ ಇಂಡಿಯನ್ ಎಕಾನಮಿ”
ಕಲಬುರಗಿ, ಅಕ್ಟೋಬರ್ 28: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ. ವೀರಮ್ಮ ಗಂಗಸಿರಿ ಪದವಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ “ಟ್ರೆಂಡ್ಸ್ ಇನ್ ಇಂಡಿಯನ್ ಎಕಾನಮಿ” ಆಡ್-ಆನ್ ಕೋರ್ಸ್ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 28-10-2025ರಂದು ಮಹಾವಿದ್ಯಾಲಯದ ಕೊಠಡಿ ಸಂಖ್ಯೆ–18ರಲ್ಲಿ ನೆರವೇರಿತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಬಸವರಾಜ ಕುನ್ನೂರ್ ನಿವೃತ್ತ ಪ್ರಾಧ್ಯಾಪಕರು ಅಂಬೇಡ್ಕರ್ ಪದವಿ ಮಹಾವಿದ್ಯಾಲಯ, ಕಲಬುರಗಿ ಅವರು ಉಪಸ್ಥಿತರಿದ್ದರು. ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಅವರು ಭಾರತದ ಆರ್ಥಿಕತೆಯ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯರಾದ ಡಾ. ರಾಜೇಂದ್ರ ಬಿ ಕೊಂಡಾ ವಹಿಸಿ, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಆಡ್-ಆನ್ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಹೆಚ್ಚಿನ ಕಲಿಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯ ಪರಿಚಯ ಪ್ರಾಸ್ತಾವಿಕ ಭಾಷಣ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಡಾ. ಶ್ರೀದೇವಿ ಎಸ್. ಅವರು ಮಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಬಿ.ಎ. ತೃತೀಯ ಸೆಮಿಸ್ಟರ್ ವಿದ್ಯಾರ್ಥಿನಿ ಕುಮಾರಿ ಸಿಮರನ್ ನಿರೂಪಣೆ ನೆರವೇರಿಸಿದರು. ಪ್ರಾರ್ಥನಾ ಗೀತೆಯನ್ನು ಕುಮಾರಿ ಅಕ್ಷತಾ ಅವರು ಸುಮಧುರವಾಗಿ ಹಾಡಿದರು. ವಂದನಾರ್ಪಣೆ ಬುಶ್ರ ಮಾಡಿದರು.
ಈ ಕಾರ್ಯಕ್ರಮದಲ್ಲಿ ಡಾ.ರೇಣುಕಾ ಹೆಚ್, ಶಿವಲೀಲಾ ಡಿ, ಕವಿತಾ ಎ ಎಂ, ಗೀತಾ ಪಾಟೀಲ, ಬಸ್ಸಮ್ಮ ಗೊಬ್ಬರ, ಹೆಚ್ ದಾನಮ್ಮ ಕೋರುವಾರ ಅಶ್ವಿನಿ ಮಠ ಕವಿತಾ ಎ ಎಂ,ಗೀತಾ ಪಾಟೀಲ, ದಾನಮ್ಮ ಕೋರುವಾರ, ಅಶ್ವಿನಿ ಮಠ , ಮೋಸಿನ ಫಾತಿಮಾ ಹಾಗೂ ಇತರ ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿನಿಯರು ಉಪಸ್ಥಿತರಿದ್ದು, ಸಮಾರಂಭ ಯಶಸ್ವಿಯಾಗಿ ನೆರವೇರಿತು.ಎಂದು ಕಾಲೇಜಿನ ಮಾಧ್ಯಮ ಸಮಿತಿಯ ಡಾ.ಮಹೇಶ ಗಂವ್ಹಾರ ತಿಳಿಸಿದ್ದಾರೆ
