ಸೌಜನ್ಯ ಹಡಪದ ಕ್ರೂರ ಕೊಲೆ ಖಂಡಿಸಿ — ಯಾದಗಿರಿಯಲ್ಲಿ ಹಡಪದ ಸಮಾಜ ಬೃಹತ್ ಹೋರಾಟ

ಸೌಜನ್ಯ ಹಡಪದ ಕ್ರೂರ ಕೊಲೆ ಖಂಡಿಸಿ — ಯಾದಗಿರಿಯಲ್ಲಿ  ಹಡಪದ  ಸಮಾಜ ಬೃಹತ್ ಹೋರಾಟ

ಅಪ್ರಾಪ್ತ ಬಾಲಕಿಯ ಸೌಜನ್ಯ ಹಡಪದ ಕೊಲೆ ಖಂಡಿಸಿ – ಯಾದಗಿರ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಡಪದ ಅಪ್ಪಣ್ಣ ಸಮಾಜದ ಬೃಹತ್ ಹೋರಾಟ

ಯಾದಗಿರ: ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಹಡಪದ (17) ಅವರನ್ನು ಅಪಹರಿಸಿ ಕ್ರೂರವಾಗಿ ಹತ್ಯೆ ಮಾಡಿ ಶವವನ್ನು ಕಾಲುವೆಯಲ್ಲಿ ಎಸೆದ ಘಟನೆ ಜಿಲ್ಲೆಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಈ ನೃಶಂಸ ಕೊಲೆಯನ್ನು ಖಂಡಿಸಿ ಬುಧವಾರ ಯಾದಗಿರ ಜಿಲ್ಲಾಧಿಕಾರಿ ಕಚೇರಿ ಎದುರು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು “ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಿ ಗಲ್ಲಿಗೇರಿಸಬೇಕು” ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಮಾಜದ ನಾಯಕರ ಆರೋಪದ ಪ್ರಕಾರ, ಸೌಜನ್ಯ ಕಾಣೆಯಾದ ಕುರಿತು ಕುಟುಂಬವು ಕೋಡೆಕಲ್ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಕೇಸ್ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಈ ನಿರ್ಲಕ್ಷ್ಯವೇ ದುರ್ಘಟನೆಗೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು. ಕರ್ತವ್ಯ ಲೋಪ ತೋರಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ನಂತರ ಸಮಾಜದ ಪ್ರತಿನಿಧಿಗಳು ಜಿಲ್ಲಾಧಿಕಾರಿಯ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಹೋರಾಟದಲ್ಲಿ ಯಾದಗಿರ ಜಿಲ್ಲಾ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಡಪದ ಕುಳಗೇರಿ ಅವರ ನೇತೃತ್ವದಲ್ಲಿ ನೂರಾರು ಹಡಪದ ಅಪ್ಪಣ್ಣ ಸಮಾಜದ ಸದಸ್ಯರು ಭಾಗವಹಿಸಿದರು.

ಸಮಾಜದ ಪ್ರಮುಖ ನಾಯಕರಾದ ಈರಣ್ಣ ಸಿ. ಹಡಪದ (ಸಣ್ಣೂರ – ಕಲಬುರಗಿ ಜಿಲ್ಲಾ ಅಧ್ಯಕ್ಷರು), ಬಸವರಾಜ ಹಡಪದ (ಸುಗೂರ ಎನ್ – ಕಲಬುರಗಿ ಗೌರವಾಧ್ಯಕ್ಷರು), ಬಸವರಾಜ ಸಿ. ಹಡಪದ (ಹಳ್ಳಿ ಶಹಾಬಾದ್ – ಮಾಜಿ ಸಂಘಟನಾ ಕಾರ್ಯದರ್ಶಿ), ಅಯ್ಯಣ್ಣ ಹಡಪದ (ಇಬ್ರಾಹಿಂಪೂರ), ಹಣಮಂತ್ರಾಯ ಹಡಪದ (ಹುಣಸಗಿ ತಾಲೂಕು ಅಧ್ಯಕ್ಷ), ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ (ಕಲಬುರಗಿ ಸಂಘಟನಾ ಕಾರ್ಯದರ್ಶಿ), ಮಲ್ಲಿಕಾರ್ಜುನ ಹಡಪದ (ಸಾವಳಗಿ – ಕಲಬುರಗಿ ನಗರಾಧ್ಯಕ್ಷ), ತಿಪ್ಪಣ್ಣ ಹಡಪದ (ನರಿಬೋಳ – ಜೇವರ್ಗಿ ತಾಲೂಕು ಅಧ್ಯಕ್ಷ), ಸಿದ್ರಾಮ ಹಡಪದ (ಯಾಗಾಪೂರ – ಶಹಾಬಾದ್ ತಾಲೂಕು ಅಧ್ಯಕ್ಷ), ರಮೇಶ್ ಕೊಲ್ಲೂರು (ಚಿತ್ತಾಪುರ ತಾಲೂಕು ಅಧ್ಯಕ್ಷ), ಶರಣಬಸ್ಸು (ಶಹಾಪೂರ ತಾಲೂಕು ಅಧ್ಯಕ್ಷ) ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಅಲ್ಲದೆ ರೇವಣಸಿದ್ದ ಮಾಲಗತ್ತಿ, ರವಿ ಹಡಪದ ಎಲ್ಲೆರಿ, ಅಂಬ್ರೇಶ ವಡಗೇರಿ, ಮಲ್ಲಿಕಾರ್ಜುನ ಮದ್ರಕಿ, ಮಲ್ಲಿಕಾರ್ಜುನ ದೋರಹನಹಳ್ಳಿ, ಸುಭಾಶಚಂದ್ರ ಹಡಪದ, ದೇವು ನೀರಲಗಿ, ಬಸವರಾಜ ಹಡಪದ ಮುದ್ದನೂರ, ಅಪ್ಪಣ ಮಾಲಗತ್ತಿ, ಭಾಗಣ್ಣ ಹಡಪದ ನಾರಾಯಣಪುರ, ಮಲ್ಲು ಹಡಪದ ಮುದ್ದನೂರ, ನಾಗರಾಜ ಹಡಪದ ಸಾತನೂರ, ಬಸವರಾಜ ಕಡ್ನಳ್ಳಿ, ಈಶ್ವರ ಅರಿಕೇರಿ, ಶರಣು ಹಡಪದ ಕೊಲ್ಲೂರು, ಶೇಕಣ್ಣ ಹಡಪದ ದಂಡಗುಂಡ, ಶಿವಕುಮಾರ ಹಡಪದ ಕೊಳ್ಳಿ ನಾಲವಾರ, ಶಿವಲಿಂಗ (ಶಹಾಬಾದ್), ತೋಟೇಂದ್ರ ಚನ್ನೂರ, ಭಾಗಣ್ಣ ಹಡಪದ ರಾವೂರ ವಡಗೇರಿ, ಶರಣಪ್ಪ ಹಡಪದ ಚಟ್ನಳ್ಳಿ, ಸಂಗಮೇಶ ಹಡಪದ ಮಾರಡಗಿ, ಶ್ರೀಮಂತ ಹಡಪದ ಕಲಬುರಗಿ ಅರನೂರ, ಸಿದ್ದು ಹಡಪದ ನಾಲವಾರ, ಭೀಮು ಹಡಪದ ಶಿರವಾಳ, ಶಂಕರ ಹಡಪದ ಹರವಾಳ ಮುಂತಾದ ನೂರಾರು ಸ್ವಾಭಿಮಾನಿ ಬಂಧುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಮಾಜದವರು “ಸೌಜನ್ಯ ಹಡಪದ ಅವರಿಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸುತ್ತೇವೆ” ಎಂದು ಘೋಷಣೆ ಮಾಡಿದರು.

(ಸುದ್ದಿ: ವಿಶೇಷ ಪ್ರತಿನಿಧಿ — ಯಾದಗಿರ)