ಆರ್‌ಎಸ್‌ಎಸ್ ಭಾರತೀಯ ಅಸ್ತಿತ್ವದ ಸಂಕೇತ : ಶರಣಪ್ಪ ರೆಡ್ಡಿ

ರಾಷ್ಟ್ರೀಯ ಸ್ವಯಂ ಸೇವಾ ಸಂಘ ಎನ್ನುವುದು ಅದು ಒಂದು ಸಂಘಟನೆ ಅಲ್ಲ ಪ್ರತಿಯೊಬ್ಬ ಭಾರತೀಯ ಹಿಂದುಗಳ ಅಸ್ಮಿತೆಯಾಗಿದೆ. ಶರಣಪ್ಪ ರೆಡ್ಡಿ ಲಕಣಪುರ್ ಅಭಿಮತ...
ಅವರೊಂದು ಸಂಘ ಕಟ್ಕೊಂಡ್ರು ಅಂತ ಇವರೊಂದು ಸಂಘ ಕಟ್ಕೊಂಡ್ರಂತೆ, ಅವರೊಂದು ಧ್ವಜ ಇಟ್ಕೊಂಡಿದ್ಕೆ ಇವರೊಂದು ಧ್ವಜ ಇಟ್ಕೊಂಡ್ರಂತೆ, ಅವರೊಂದ ಪಥ ಸಂಚಲನ ಮಾಡಿದ್ಕೆ ಇವರೊಂದು ಪಥ ಸಂಚಲನ ಮಾಡಿದ್ರಂತೆ, ಆದ್ರೆ ಅವರು ಭಾರತ್ ಮಾತಾ ಕೀ ಜೈ ಅಂದ್ರೆ ಇವರಿಗೆ ಅದನ್ನ ಕೂಗೋಕೆ ಕಷ್ಟ ಆಗುತ್ತೆ, ಅವರಲ್ಲಿ ಒಂದು ಶಿಸ್ತು ಇದೆ, ಆದ್ರೆ ಇವರಲ್ಲಿ ಅಶಿಸ್ತು ಯಾವಾಗಲೂ ಇರುತ್ತೆ...
ಒಂದು ಸಂಘವನ್ನ ಕಟ್ಟೋದು ಸುಲಭ, ಆದ್ರೆ ಅದನ್ನ ಯಾಕೆ ಕಟ್ಟಿದ್ವಿ? ಅದನ್ನ ಕಟ್ಟಿದ ಉದ್ದೇಶ ಏನು? ಆ ಉದ್ದೇಶದಿಂದ ಸಮಾಜಕ್ಕೆ ಆಗುವ ಒಳಿತು ಏನು? ಆ ಉದ್ದೇಶವನ್ನ ಭವಿಷ್ಯದ ಪೀಳಿಗೆಗೆ ತಲುಪಿಸೋದು ಹೇಗೆ? ಇದೆಲ್ಲದರ ಬಗ್ಗೆ ಕ್ಲಾರಿಟಿ ಇಲ್ಲ ಅಂದ್ಮೇಲೆ ಅಂತದ್ದೊಂದು ಸಂಘ ಇದ್ದರಷ್ಟು ಬಿಟ್ಟರೆಷ್ಟು? ಬಹುಶಃ ರಾಷ್ಟ್ರೀಯ ಸ್ವಯಂಸೇವಕ ಸಂಘ ಬಿಟ್ಟರೆ ಭಾರತದ ಇನ್ಯಾವ ಸಂಘಟನೆಗಳಿಗೂ ನಿರ್ಧಿಷ್ಟವಾದ ಉದ್ದೇಶ ಇದ್ದಂತಿಲ್ಲ, ಅಕಸ್ಮಾತ್ ಇದ್ದರೂ ಅದನ್ನ ಮುಂದುವರೆಸಿಕೊಂಡು ಹೋಗೋ ದೃಢ ಸಂಕಲ್ಪ ಇಲ್ಲವೇ ಇಲ್ಲ, ಉಳಿದ ಸಂಘಟನೆಗಳು ಅದರಲ್ಲೂ ಸಂಘವನ್ನ ವಿರೋಧಿಸುವ ಸಂಘಟನೆಗಳಿಗೆ ಸಂಘದ ವಿರುದ್ಧ ಬೆಂಕಿ ಉಗುಳೋದು ಬಿಟ್ಟರೆ ಅವುಗಳಿಗೆ ಒಂದು ನಿರ್ಧಿಷ್ಟವಾದ ಉದ್ದೇಶವಂತೂ ಇಲ್ಲವೇ ಇಲ್ಲ...
ಸಂಘದಂತೆ ಪಥ ಸಂಚಲನ ಮಾಡೋದು, ಸಂಘದಂತೆ ಒಂದು ಧ್ವಜ ಹಾರಿಸೋದು ಸಾಧನೆ ಅಲ್ಲ, ಸಂಘದ ಕಾರ್ಯಕರ್ತರಂತೆ ನಿಸ್ವಾರ್ಥ ಮನಸ್ಥಿತಿ ಹೊಂದಿರಬೇಕು, ಸಂಸಾರದ ಜೊತೆ ದೇಶದ ಸೇವೆಗೂ ಸಮಯ ಮೀಸಲಿಡಬೇಕು, ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಧರ್ಮದ ಮೇಲೆ ಅಭಿಮಾನ ಇರ್ಬೇಕು, ತಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡ್ಬೇಕು, ಸ್ವಧರ್ಮದ ಆಚರಣೆಗಳ ಮುಖಾಂತರ ತಮ್ಮ ಸಂಸ್ಕೃತಿಯ ಭವ್ಯತೆಯನ್ನ ವಿಶ್ವಕ್ಕೆ ಸಾರಬೇಕು, ಇದ್ಯಾವುದೂ ಇಲ್ಲದೆ ಬರೀಯ ಪಥ ಸಂಚಲನ ಬರೀಯ ಧ್ವಜ ಹಾರಾಟಕ್ಕೆ ಯಾವುದೇ ಮಹತ್ವ ಇರೋದಿಲ್ಲ...
ಸಂಘದ ಕಾರ್ಯಕರ್ತರು ಸಂಸಾರದ ಸಮಸ್ಯೆಗಳಿಗಿಂತ ಸಮಾಜದ ಸಮಸ್ಯೆಗಳಿಗೆ ಬೇಗ ಸ್ಪಂದಿಸುತ್ತಾರೆ, ಹೊತ್ತಿಲ್ಲದ ಹೊತ್ತಲ್ಲಿ ಸಮಾಜದ ಸಮಸ್ಯೆಗಳಿಗೆ ಹೆಗಲು ಕೊಡೋದಕ್ಕೆ ಮುಂದೆ ಬರ್ತಾರೆ, ಅದು ದೇಶದ ಯಾವುದೇ ಮೂಲೆಯಲ್ಲಿ ಆದರೂ ಸರಿ, ಭೂಕಂಪವಾಗಲಿ, ಪ್ರಳಯವಾಗಲಿ, ಅಥವಾ ಇನ್ಯಾವುದೇ ಪ್ರಾಕೃತಿಕ ವಿಕೋಪ ಆಗಿರಲಿ, ತಮ್ಮ ತಂದೆ ತಾಯಿ ಹೆಂಡತಿ ಮಕ್ಕಳನ್ನು ಮರೆತು ತಮ್ಮ ಜೀವ ಪಣಕ್ಕಿಟ್ಟು ವಿಕೋಪದಲ್ಲಿ ಸಿಲುಕಿದವರ ರಕ್ಷಣೆ ಮಾಡ್ತಾರೆ, ರಕ್ಷಣಾ ಕಾರ್ಯ ಮಾಡುವಾಗ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಸಿಖ್ ಬೌದ್ದ ಜೈನ ಅಂತ ಬೇಧ ಭಾವ ಮಾಡೋದಿಲ್ಲ, ಅಲ್ಲಿರುವವರು ತಮ್ಮಂತ ಮನುಷ್ಯರು ಅನ್ನೋದನ್ನೇ ಮನಸಲ್ಲಿ ಇಟ್ಕೊಂಡು ರಕ್ಷಣೆ ಮಾಡ್ತಾರೆ, ಅದು ಒಂದು ಸಂಘದ ಕಾರ್ಯಕರ್ತರಿಗೆ ಇರುವ ಬದ್ದತೆ, ಭಾರತವನ್ನ ತಾಯಿ ಸ್ಥಾನದಲ್ಲಿ ಇಟ್ಟಿರೊ ಸಂಘದವರಿಗೆ ಭಾರತದಲ್ಲಿ ಇರುವವರೆಲ್ಲ ಭಾರತಾಂಬೆಯ ಮಕ್ಕಳು ಅನ್ನೊ ಭಾವ ಸಂಘಕ್ಕೆ ಸೇರಿದಾಗಲೇ ಕಲಿಸಲಾಗುತ್ತೆ....
ಸಂಘದ ಕಾರ್ಯಕರ್ತರಿಗೆ ದೇಶವನ್ನ ಪ್ರೀತಿಸೋದು ಗೊತ್ತು, ಸ್ಮಶಾನದಲ್ಲಿ ಊಟ ಮಾಡೋದು ಗೊತ್ತಿಲ್ಲ..
ಸಂಘದ ಕಾರ್ಯಕರ್ತರಿಗೆ ಧರ್ಮದ ಬಗ್ಗೆ ಕಾಳಜಿ ಇದೆಯೇ ಹೊರತು ಜಾತಿಯ ಬಗ್ಗೆ ಅಲ್ಲ...
ರಾಷ್ಟ್ರವನ್ನ ಪ್ರೀತಿಸೋರಿಗೆ ರಾಷ್ಟ್ರ ಧ್ವಜದ ಬಗ್ಗೆ ಗೌರವ ಇದ್ದೇ ಇರುತ್ತೆ, ಅದನ್ನ ಬೇರೆಯವರಿಂದ ಕಲಿತುಕೊಳ್ಳುವ ಅವಶ್ಯಕತೆ ಸಂಘಕ್ಕಿಲ್ಲ....
ಸಂಘಕ್ಕೆ ಭಾರತ ಮುಖ್ಯವೇ ಹೊರತು ಒಬ್ಬ ನಿರ್ದಿಷ್ಟ ವ್ಯಕ್ತಿ ಮುಖ್ಯವಲ್ಲ...
ಸಂಘಕ್ಕೆ ಸಂಸ್ಕೃತಿಯ ಅರಿವಿದೆ, ಅದಕ್ಕೆ ಉಳಿದ ಸಂಘಟನೆಗಳು ಅದರ ಪಾದದ ಧೂಳಿಗೂ ಸಮವಾಗೋಕೆ ಸಾಧ್ಯವಿಲ್ಲ...
ಸಂಘ ದೇಶಕ್ಕೆ ಅಪ್ರತಿಮ ನಾಯಕರನ್ನ ಕೊಟ್ಟಿದೆ, ಉಳಿದ ಸಂಘಟನೆಗಳ ಥರ ದೇಶದ್ರೋಹಿಗಳನ್ನ ಕೊಟ್ಟಿಲ್ಲ...
ಅಧಿಕಾರದ ಅಹಂಕಾರದಲ್ಲಿ ಈ ಹಿಂದೆ ಸಂಘವನ್ನ ಅನೇಕರು ನಿಷೇಧಿಸಿದ್ದರೂ ಸಂಘ ಮತ್ತೆ ಮತ್ತೆ ಪುಟಿದೆದ್ದು ನಿಂತಿದೆ, ಹೆಸರು ಬದಲಾಯಿಸಿಕೊಂಡು ಬರೋಕೆ ಅದೇನು ಭಯೋತ್ಪಾದಕ ಸಂಘಟನೆಯಲ್ಲ, ಅದು ಹುಟ್ಟಿದಾಗ ಯಾವ ಹೆಸರಿತ್ತೊ ಇವತ್ತಿಗೂ ಅದೇ ಹೆಸರಿನಲ್ಲಿ ಮುಂದುವರೆಯುತ್ತಿದೆ, ಅಬ್ಬಬ್ಬಾ ಅಂದ್ರೆ ಮತ್ತಷ್ಟು ದಿನ ನಿಷೇಧ ಮಾಡ್ಬೋದು, ಆದ್ರೆ ಸಂಘ ಮತ್ತೆ ಎದ್ದು ನಿಲ್ಲುತ್ತೆ ಅನ್ನೊ ಭರವಸೆ ನಿಷೇಧ ಮಾಡುವ ಅವಿವೇಕಿಗಳಿಗೂ ಇರುತ್ತೆ, ಅದರ ಉದ್ದೇಶಗಳು ಧ್ಯೇಯಗಳು ಕಾರ್ಯಕರ್ತರ ಹೃದಯದಲ್ಲಿ ಇರುವಾಗ ಅದನ್ನ ಯಾವ ಕಾನೂನಿನ ಅಡಿಯಲ್ಲಿ ನಿಷೇಧ ಮಾಡೋಕ್ಕಾಗುತ್ತೆ?
ಅದೆಷ್ಟೇ ಸಂಘಟನೆಗಳು ಅದೆಷ್ಟು ಸಲನಾದ್ರು ಪಥ ಸಂಚಲನ ಮಾಡ್ಲಿ, ಅವ್ಯಾವು ಸಂಘದಷ್ಟು ಮಹತ್ವ ಪಡೆದುಕೊಳ್ಳಲಾರವು, ಕೆಂಪು, ಹಳದಿ, ನೀಲಿ, ಹಸಿರು, ಕಪ್ಪು ಇನ್ಯಾವುದೇ ಬಣ್ಣದ ಧ್ವಜ ಹಾರಿಸಲಿ, ಅವು ಯಾವತ್ತೂ ಭಗವಾಧ್ವಜದ ಸಮೀಪಕ್ಕೂ ಬರಲಾರವು, ಯಾಕಂದ್ರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಅನ್ನೋದು ಕೇವಲ ಒಂದು ಸಂಘಟನೆಯಲ್ಲ, ಅದು ಭಾರತೀಯರ ಅದರಲ್ಲೂ ಹಿಂದೂಗಳ ಅಸ್ಮಿತೆ ಪ್ರತಿಯೊಬ್ಬ ಭಾರತೀಯ ಹಿಂದೂಗಳು ಅರಿತುಕೊಂಡು ಮುನ್ನುಗ್ಗಬೇಕಿದೆ
ಎಂದು ಸಾಮಾಜಿಕ ಕಾರ್ಯಕರ್ತ ಶರಣಪ್ಪ ರೆಡ್ಡಿ ಲಕಣಪುರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ವರದಿ ಜಟ್ಟಪ್ಪ ಎಸ್ ಪೂಜಾರಿ