ಡಾ. ಪ್ರಣವಾನಂದ ಶ್ರೀ ~ ಉಗಾಂಡಾ ಕೇಂದ್ರ ಸಚಿವ ರೋನಾಲ್ಡ್ ನಸ್ಬುಗಾ ಜೊತೆ ಒಪ್ಪಂದ

ಡಾ. ಪ್ರಣವಾನಂದ ಶ್ರೀ ~ ಉಗಾಂಡಾ ಕೇಂದ್ರ ಸಚಿವ ರೋನಾಲ್ಡ್ ನಸ್ಬುಗಾ ಜೊತೆ ಒಪ್ಪಂದ
ಡಾ. ಪ್ರಣವಾನಂದ ಶ್ರೀ ~ ಉಗಾಂಡಾ ಕೇಂದ್ರ ಸಚಿವ ರೋನಾಲ್ಡ್ ನಸ್ಬುಗಾ ಜೊತೆ ಒಪ್ಪಂದ

ಡಾ. ಪ್ರಣವಾನಂದ ಶ್ರೀ ~ ಉಗಾಂಡಾ ಕೇಂದ್ರ ಸಚಿವ ರೋನಾಲ್ಡ್ ನಸ್ಬುಗಾ ಜೊತೆ ಒಪ್ಪಂದ

ನಾರಾಯಣ ಗುರು ಶಕ್ತಿಪೀಠ ~ ಉಗಾಂಡಾ ಸರಕಾರದ ಜೊತೆ ಸೇವಾ ಕಾರ್ಯ ವಿಸ್ತರಣೆಗೆ ಒಪ್ಪಿಗೆ

ಕಲಬುರಗಿ : ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪೂಜ್ಯ ಡಾಕ್ಟರ್ ಪ್ರಣವಾನಂದ ಸ್ವಾಮೀಜಿ ಅವರು ವಿದೇಶಗಳಲ್ಲಿ ಸೇವ ಕಾರ್ಯ ಕೈಗೊಳ್ಳಲು ಆರಂಭಿಸಿದ ಸೋಲ್ ವೇವ್ ಚಾರಿಟೇಬಲ್ ಟ್ರಸ್ಟ್ ಮತ್ತು ಆಫ್ರಿಕಾ ದೇಶದ ಉಗಾಂಡಾ ಸರಕಾರದ ಕೇಂದ್ರ ಸಚಿವ ರೋನಾಲ್ಡ್ ನಸ್ಬುಗಾ ಜೊತೆ ಸೇವಾ ಕಾರ್ಯ ಒಪ್ಪಂದಕ್ಕೆ ಸಹಿ ಹಾಕಲಾಯಿತು. 

   ಉಗಾಂಡಾ ದೇಶದ ಪ್ರವಾಸದಲ್ಲಿರುವ ಡಾ. ಪ್ರಣವಾನಂದ ಶ್ರೀಗಳು ಆ ದೇಶದ ವಿವಿಧ ಸೇವಾ ಸಂಸ್ಥೆಗಳ ಜೊತೆ ಸೋಲ್ ವೇವ್ ಚಾರಿಟೇಬಲ್ ಸಂಸ್ಥೆಯು ಜೊತೆಯಾಗಿ ಶಿಕ್ಷಣ ಆರೋಗ್ಯ ಬಡಮಕ್ಕಳ ಕೌಶಲ್ಯ ತರಬೇತಿಗಳ ಕುರಿತಾದ ವಿಸ್ತೃತವಾದ ಕಾರ್ಯಕ್ರಮಗಳಿಗೆ ಇತ್ತೀಚೆಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಉಗಾಂಡಾ ಸರಕಾರದ ಕೇಂದ್ರ ಸಚಿವರಾದ ರೋನಾಲ್ಡ್ ನಸ್ಬುಗಾ ಜೊತೆ ಒಪ್ಪಂದ ಮಾಡಿಕೊಳ್ಳಲಾಯಿತು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಉಸ್ತುವಾರಿ ಪ್ರಸಾದ್ ಬಹರೇನ್ ಒಪ್ಪಂದದ ವೇಳೆ ಹಾಜರಿದ್ದರು. 

   ಆಫ್ರಿಕಾದ ವಿವಿಧ ರಾಜ್ಯಗಳಲ್ಲಿ ಸೋಲ್ ವೇವ್ ಸಂಸ್ಥೆ ಕೈಗೊಳ್ಳುವ ಸೇವ ಕಾರ್ಯಗಳಿಗೆ ಪೂರ್ಣ ರೀತಿಯಲ್ಲಿ ಸರಕಾರದಿಂದ ಸಹಕಾರ ನೀಡಲಾಗುವುದು ಬಡ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರಕಾರವು ಎಲ್ಲಾ ಹಂತದ ನೆರವು ವಿಸ್ತರಿಸಲಿದೆ ಎಂದು ರೋನಾಲ್ಡ್ ನಸ್ಬುಗಾ ಒಪ್ಪಂದದ ನಂತರ ತಿಳಿಸಿದರು. ಬಳಿಕ ಡಾ. ಪ್ರಣವಾನಂದ ಶ್ರೀಗಳು ಉಗಾಂಡಾ ಪಾರ್ಲಿಮೆಂಟಿಗೆ ಭೇಟಿ ನೀಡಿ ಕೇಂದ್ರ ಸಚಿವರ ಜೊತೆ ವಿಸ್ತೃತವಾದ ಚರ್ಚೆ ನಡೆಸಿದರು. ಉಗಾಂಡಾದಲ್ಲಿರುವ ಕನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಪ್ರಸ್ತಾಪದ ಬಗ್ಗೆ ಮಾತುಕತೆ ನಡೆಸಿದರು. ಸೋಲ್ ವೇವ್ ಮತ್ತು ಇತರ ಎನ್ ಜಿ ಓ ಸಂಸ್ಥೆಗಳ ಪಾಲುದಾರಿಕೆಯ ಕುರಿತಾಗಿ ಸಚಿವರ ಜೊತೆ ಎನ್‌ಜಿಓ ನಿರ್ದೇಶಕರುಗಳು ವಿವರವಾದ ಮಾತುಕತೆ ನಡೆಸಿ ಕೈಗೊಳ್ಳುವ ಯೋಜನೆಗಳ ಬಗ್ಗೆ ಚರ್ಚಿಸಿದರು.