ದಾರಿದ್ರ್ಯ ರಹಿತ ಸಮಾಜ – ನಮ್ಮೆಲ್ಲರ ಕನಸು : ಡಾ. ಜ್ಯೋತಿ ಕೆ.ಎಸ್

ದಾರಿದ್ರ್ಯ ರಹಿತ ಸಮಾಜ – ನಮ್ಮೆಲ್ಲರ ಕನಸು : ಡಾ. ಜ್ಯೋತಿ ಕೆ.ಎಸ್

ದಾರಿದ್ರ್ಯ ರಹಿತ ಸಮಾಜ – ನಮ್ಮೆಲ್ಲರ ಕನಸು : ಡಾ. ಜ್ಯೋತಿ ಕೆ.ಎಸ್

ಕಲಬುರಗಿ: ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಅಂತರರಾಷ್ಟ್ರೀಯ ದಾರಿದ್ರ್ಯ ನಿರ್ಮೂಲನ ದಿನಾಚರಣೆ ಶುಕ್ರವಾರ (17 ಅಕ್ಟೋಬರ್ 2025) ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೇವರ್ಗಿ ಕಾಲೋನಿಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಂಯೋಜಕರಾದ ಡಾ. ಜ್ಯೋತಿ ಕೆ.ಎಸ್ ಮಾತನಾಡಿ, “ದಾರಿದ್ರ್ಯ ನಿವಾರಣೆ ಸರ್ಕಾರದಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜವಾಬ್ದಾರಿಯಾಗಿದೆ. ಎಲ್ಲರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯ” ಎಂದು ಹೇಳಿದರು.

ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಬಿ. ಕೊಂಡಾ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ದಾರಿದ್ರ್ಯ ನಿರ್ಮೂಲನೆ ವಿಷಯದ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.

ವಿಭಾಗದ ಮುಖ್ಯಸ್ಥೆ ಡಾ. ಶ್ರೀದೇವಿ ಸಿದ್ದಣ್ಣ ಅವರು ಅತಿಥಿ ಪರಿಚಯ ಹಾಗೂ ಪ್ರಸ್ತಾವನೆ ಮಾಡಿದರು. ಕು. ಹಾದಿಯಾ ನಿರೂಪಿಸಿದರು, ಕು. ವೈಷ್ಣವಿ ಸ್ವಾಗತಗೀತೆ ಹಾಡಿದರು , ಸಿಮ್ರನ್ ಸ್ವಾಗತಿಸಿದರು, ಕು. ದಿವ್ಯ ವಂದನಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಶಿವಲೀಲಾ ಧೋತ್ರ, ಡಾ. ಮಹೇಶ ಗಂವಾರ, ಡಾ. ಜ್ಯೋತಿ ಪ್ರಕಾಶ್ ದೇಶಮುಖ್, ಕವಿತಾ ಎ.ಎಂ., ಗೀತಾ ಪಾಟೀಲ್, ಬಸ್ಸಮ್ಮ ಗೊಬ್ಬರ ಸೇರಿದಂತೆ ಅರ್ಥಶಾಸ್ತ್ರ ವಿಭಾಗದ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮಾಧ್ಯಮ ಸಮಿತಿಯ ಡಾ. ಮಹೇಶ ಗಂವಾರ ಮಾಹಿತಿ ನೀಡಿದರು.