ಹಿರಿಯ ಜಾನಪದ ಕಲಾವಿದ ನಿoಗೌಡ ಪಾಟೀಲ್ ರವರಿಗೆ ಗೌ. ಡಾಕ್ಟರೇಟ್ ಪುರಸ್ಕಾರ.
ಹಿರಿಯ ಜಾನಪದ ಕಲಾವಿದ ನಿoಗೌಡ ಪಾಟೀಲ್ ರವರಿಗೆ ಗೌ. ಡಾಕ್ಟರೇಟ್ ಪುರಸ್ಕಾರ.
ತಮಿಳುನಾಡು ಹೊಸೂರಿನಲ್ಲಿ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಪೂಜ್ಯ ಡಾ. ಕೃಷ್ಣಮೂರ್ತಿ ಮಹಾಸ್ವಾಮಿಗಳು, ಸಂಸ್ಕೃತಿ ಚಿಂತಕ ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದ ಗಣ್ಯಮಾನ್ಯರ ಸಮಕ್ಷಮದಲ್ಲಿ ಕೊಡ ಮಾಡುವ ಪ್ರತಿಷ್ಠಿತ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆ ಯಮಕನಮರಡಿ ಮಾಸ್ತಿ ಹೊಳೆಯ ಹಿರಿಯ ಜಾನಪದ ಕಲಾವಿದ ಗಾಯಕ ನಿಂಗೌಡ ಪಾಟೀಲ್ರವರು ಭಾಜನರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಣವ ಮೀಡಿಯಾ ಹೌಸ್ ಪ್ರಕಾಶನ ದ ಗುರುರಾಜ ಪೋಶೆಟ್ಟಿಹಳ್ಳಿ ಮಾತನಾಡುತ್ತ ಎಲೇ ಮರೇ ಕಾಯಿಯಂತೆ ಸದ್ದಿದಿಲ್ಲದೆ ಸೇವೆ ಮಾಡುತ್ತಿರುವ ಸಾಧಕರನ್ನು ಗೌರವಿಸುವ ಈ ಕಾರ್ಯ ಅಭಿನಂದನೀಯ. ಸರ್ಕಾರ ಗುರುತಿಸಿ ಉನ್ನತ ಪುರಸ್ಕಾರಗಳು ಲಭಿಸುವಂತಾಗಲಿ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಯಮಕನಮರಡಿಯ ಕರಕುಶಲ ಕಲಾವಿದ ಸೋಮಶೇಖರ ಹೊರಕೇರಿರವರಿಗೆ ನಿತ್ಯೋತ್ಸವ ಕನ್ನಡ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಶ್ರೀಯುತರು 550 ಸಾಮೂಹಿಕ ವಿವಾಹಗಳಿಗೆ ಬಾಸಿಂಗವನ್ನು ಉಚಿತವಾಗಿ ನೀಡಿರುತ್ತಾರೆ.
