ಕೆಯುಡಬ್ಲ್ಯೂಜೆ ಚುನಾವಣೆ: 784 ಸ್ಥಾನಗಳಿಗೆ 1447 ನಾಮಪತ್ರಗಳು
ಕೆಯುಡಬ್ಲ್ಯೂಜೆ ಚುನಾವಣೆ: 784 ಸ್ಥಾನಗಳಿಗೆ 1447 ನಾಮಪತ್ರಗಳು
ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) 2025–2028ನೇ ಅವಧಿಗೆ ರಾಜ್ಯ ಘಟಕ ಮತ್ತು 31 ಜಿಲ್ಲಾ ಘಟಕಗಳ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಒಟ್ಟು 784 ಸ್ಥಾನಗಳಿಗೆ 1447 ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಎನ್. ರವಿಕುಮಾರ (ಟೆಲೆಕ್ಸ್)ತಿಳಿಸಿದ್ದಾರೆ.
ದಿನಾಂಕ 28-10-2025 (ಮಂಗಳವಾರ)ರಂದು ನಾಮಪತ್ರಗಳ ಪರಿಶೀಲನೆ ರಾಜ್ಯ ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ.
ದಿನಾಂಕ 30-10-2025 (ಗುರುವಾರ) ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ.
ದಿನಾಂಕ 09-11-2025 (ಭಾನುವಾರ)ರಂದು ರಾಜ್ಯ ಮತ್ತು ಜಿಲ್ಲಾ ಘಟಕಗಳ ಮತದಾನ ಪ್ರಕ್ರಿಯೆ ಏಕಕಾಲಕ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
– ಕೆಯುಡಬ್ಲ್ಯೂಜೆ ಚುನಾವಣಾ ಅಧಿಕಾರಿಗಳ ಪ್ರಕಟಣೆ
