ಯಲ್ಹೇರಿ ಗ್ರಾಮದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಜರಗಿತು

ಯಲ್ಹೇರಿ ಗ್ರಾಮದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಜರಗಿತು

(ಗುರುಮಠಕಲ್ ತಾಲೂಕ ವರದಿಗಾರರು : ಭೀಮರಾಯ ಯಲ್ಹೇರಿ)

 ಯಲ್ಹೇರಿ ಗ್ರಾಮದಲ್ಲಿ ಪೋಷಣ ಅಭಿಯಾನ ಕಾರ್ಯಕ್ರಮ ಜರಗಿತು 

ಯಾದಗಿರ/ಗುರುಮಠಕಲ್ : ತಾಲೂಕಿನ ಯಲ್ಹೇರಿ ಗ್ರಾಮದ ಮಾರಮ್ಮ ದೇವಿಯ ದೇವಸ್ಥಾನದ ಹತ್ತಿರ ಜರುಗಿದ, ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮ ಪಂಚಾಯತಿ ಯಲ್ಹೇರಿ ವತಿಯಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಯಾದ ಶ್ರೀಮತಿ ವನಜಾಕ್ಷಿ ಬೆಂಡಿಗೇರಿ ಅವರು ಶಿಶು ಮತ್ತು ಮಹಿಳೆಯರ ಆರೋಗ್ಯದ ಕುರಿತು ಹಾಗೂ ಪೌಷ್ಠಿಕಾಂಶದ ಕುರಿತು ಗ್ರಾಮದ ಗರ್ಭಿಣಿಯರಿಗೂ ಬಾಣಂತಿಯರಿಗೂ, ಊರಿನ ಹಿರಿಯರಿಗೂ ಪೌಷ್ಟಿಕ ಆಹಾರದ ಬಗ್ಗೆ ಮನವರಿಕೆ ಮಾಡಿದರು. ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಮಕ್ಕಳಿಗೆ ಪೌಷ್ಟಿಕ ಆಹಾರ ಸೇವನೆ ಮಾಡಿಸಲಾಯಿತು. ಹಾಗೂ ಇದೇ ಕಾರ್ಯಕ್ರಮದಲ್ಲಿ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶ್ರೀ ಬಸವರಾಜ ಕಣೆಕಲ್, ಮೇಲ್ವಿಚಾರಕರಾದ ಪಾರ್ವತಿ ಹೊಸಮನಿ, ಭೂಷಣ ಅಭಿಯಾನದ ಸಂಯೋಜಕರಾದ ವಿಶ್ವನಾಥ್, ವೈದ್ಯಧಿಕಾರಿಗಳಾದ ಡಾಕ್ಟರ್ ಜ್ಞಾನೇಶ್ವರ್, ಮುಂತಾದವರು ಭಾಗವಹಿಸಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ನಿರ್ಮಲ ಅಲ್ಲೂರ್ ಅಂಗನವಾಡಿ ಕಾರ್ಯಕರ್ತರು ಗೋಪಾಲಪುರ್ ಇವರು ಈ ಕಾರ್ಯಕ್ರಮವನ್ನು ನಿರೂಪಿಸಿದರು.