ವೃತ್ತಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಒತ್ತು – “ಮನೆ ಮನೆಗೆ ಪೋಲಿಸ್” ಅಭಿಯಾನಕ್ಕೆ ಜನರಿಂದ ಮೆಚ್ಚುಗೆ

ವೃತ್ತಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಒತ್ತು – “ಮನೆ ಮನೆಗೆ ಪೋಲಿಸ್” ಅಭಿಯಾನಕ್ಕೆ ಜನರಿಂದ ಮೆಚ್ಚುಗೆ

ವೃತ್ತಗಳಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಒತ್ತು – “ಮನೆ ಮನೆಗೆ ಪೋಲಿಸ್” ಅಭಿಯಾನಕ್ಕೆ ಜನರಿಂದ ಮೆಚ್ಚುಗೆ

ಕಲಬುರಗಿಯಲ್ಲಿ ಇತ್ತೀಚೆಗೆ ಮಹಾತ್ಮ ಬಸವೇಶ್ವರ ಪೋಲಿಸ್ ಠಾಣೆ ವತಿಯಿಂದ “ಮನೆ ಮನೆಗೆ ಪೋಲಿಸ್” ಅಭಿಯಾನ ಕಾರ್ಯಕ್ರಮ ಜರುಗಿದ್ದು, ಈ ಸಂದರ್ಭದಲ್ಲಿ ಶಾಂತಿ ಸಮಿತಿಯ ಸದಸ್ಯ ಶಿವರಾಜ ಅಂಡಗಿ ಮಾತನಾಡುತ್ತಾ, ಖರ್ಗೆ ವೃತ್ತದಿಂದ ಹುಮನಾಬಾದ ವೃತ್ತದವರೆಗೆ ಹಾಗೂ ಪ್ರಮುಖ ಬಜಾರ ಪ್ರದೇಶಗಳಲ್ಲಿ (ಕಿರಾಣಾ, ಸರಾಫ್, ಬಾಂಡೆ) ಹೆಚ್ಚುತ್ತಿರುವ ವಾಹನ ಸಂಚಾರ ನಿಯಂತ್ರಣಕ್ಕೆ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಅವರು ಒತ್ತಾಯಿಸಿದರು. ಸಿಗ್ನಲ್‌ಗಳ ಮೇಲೆ ಮಾತ್ರ ಅವಲಂಬನೆ ಬೇಡವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸೈಬರ್ ಅಪರಾಧಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಟಿವಿ ಸ್ಕ್ರೀನ್‌ಗಳ ಮೂಲಕ ಮಾಹಿತಿ ನೀಡಿ, ಜನಸ್ನೇಹಿ ಕ್ರಮಗಳನ್ನು ಜಾರಿಗೆ ತಂದಿರುವ ಪೊಲೀಸರ ಯೋಜನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಯಿತು ದೂರುದಾರರ ಹೆಸರು ರಹಸ್ಯವಾಗಿಡುವುದು ಮತ್ತು ಅವರಿಗೆ ಪ್ರಶಂಸೆ ಹಾಗೂ ಸನ್ಮಾನ ನೀಡುವುದು ನವೀನ ಮತ್ತು ಉತ್ತಮ ಕ್ರಮವೆಂದು ಗಮನಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತೆ ಜಾಹೀರಾ ನಸೀಮ್, ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಹಿರಿಯ ಅಧಿಕಾರಿಗಳು ಪ್ರವೀಣ ನಾಯಕ, ಶರಣಬಸಪ್ಪ ಸುಬೇದಾರ, ಡಿಸಿ ರಾಜಣ್ಣ, ಮಾಡುಳ್ಳಪ್ಪ, ಇಸ್ಮಾಯಿಲ್, ಶರೀಫ್ ಸೇರಿದಂತೆ ಹಲವರು ಹಾಜರಿದ್ದರು.