ಅಂತಾರಾಷ್ಟ್ರೀಯ ಪ್ರಕೃತ್ತಿ ವಿಕೋಪ ತಡೆ ದಿನಾಚರಣೆಯಲ್ಲಿ ಜಿಲ್ಲಾ ರೆಡ್‌ಕ್ರಾಸ್ ಜೆಆರ್‌ಸಿ ಉಪಸಮಿತಿ ಅಧ್ಯಕ್ಷ ಜಯಪ್ರಕಾಶ ಕಟ್ಟಿಮನಿ ಅಭಿಮತ

ಪರಿಸರದ ಮೇಲಿನ ದಬ್ಬಾಳಿಕೆಯಿಂದ ಅಸಮತೋಲನೆ

ಕಲಬುರಗಿ: ದೇವರು ಪ್ರಕೃತಿಯನ್ನು ಸಮತೋಲನದಲ್ಲಿಯೇ ಸೃಷ್ಠಿಸಿದ್ದಾನೆ. ಆದರೆ ಮಾನವನು ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ಮಾಡಿ, ತನಗೆ ಬೇಕಾದಂತೆ ಸೃಷ್ಠಿಸಲು ಹವಣ ಸುತ್ತಿದ್ದಾನೆ. ಇದರ ಪರಿಣಾಮವಾಗಿ ಪ್ರಕೃತಿ ವಿಕೋಪ, ನೈಸರ್ಗಿಕ ಪ್ರವಾಹ, ಭೂಕಂಪ, ಅತಿವೃಷ್ಠಿ, ಅನಾವೃಷ್ಠಿಯಂತಹ ನೈಸರ್ಗಿಕ ಅವಘಡಗಳಾಗಿ ಪರಿಸರ ಅಸಮತೋಲನೆಯಾಗುತ್ತಿದೆ ಎಂದು ಜಿಲ್ಲಾ ರೆಡ್‌ಕ್ರಾಸ್‌ನ ಜೆಆರ್‌ಸಿ ಉಪಸಮಿತಿಯ ಅಧ್ಯಕ್ಷ ಜಯಪ್ರಕಾಶ ಎಸ್.ಕಟ್ಟಿಮನಿ ಅಭಿಮತಪಟ್ಟರು. 

         ನಗರದ ಆಳಂದ ರಸ್ತೆಯ ಗದಲೇಗಾಂವ ಲೇಔಟ್‌ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಜರುಗಿದ ‘ಅಂತಾರಾಷ್ಟ್ರೀಯ ಪ್ರಕೃತಿ ವಿಕೋಪ ತಡೆ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದರು.

        ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಎಲ್ಲಡೆ ಕಟ್ಟಡಗಳು ಸೇರಿದಂತೆ ಇನ್ನೀತರ ನಿರ್ಮಾಣದ ನೆಪದಲ್ಲಿ ವ್ಯಾಪಕವಾದ ಗಿಡ-ಮರ, ಪ್ರಾಣ -ಪಕ್ಷಿಗಳ ಸಂಕುಲವನ್ನು ನಾಶಪಡಿಸಲಾಗಿದೆ. ಇದರಿಂದ ನಿಸರ್ಗದಲ್ಲಿ ಅಸಮತೋಲನ ಉಂಟಾಗುತ್ತಿದೆ. ಒಂದೆಡೆ ಅತಿವೃಷ್ಠಿ, ಮತ್ತೊಂದೆಡೆ ಅನಾವೃಷ್ಠಿ ಉಂಟಾಗುತ್ತಿದೆ. ಭೂಕಂಪ, ಜ್ವಾಲಾಮುಖಿಯಂತಹ ನೈಸರ್ಗಿಕ ಅವಘಡಗಳು ಉಂಟಾಗುತ್ತಿವೆ. ಪವಿತ್ರ ಸ್ಥಳಗಳ ಪುಣ್ಯಸ್ಥಾನ ಮಾಡುವ ಸಂದರ್ಭದಲ್ಲಿ ಪ್ರವಾಹವನ್ನು ಗಮನಿಸಬೇಕು. ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

       ಕಾರ್ಯಕ್ರಮದಲ್ಲಿ ಪ್ರಮುಖರಾದ ಅಣ್ಣಾರಾಯ ಎಚ್.ಮಂಗಾಣೆ, ಬಸವರಾಜ ಮುನಳ್ಳಿ, ಶರಣು ಎ.ಕಮಠಾಣ, ಅನಿತಾ ಎಸ್.ಕೊಣ್ಣುರ್, ನಿರ್ಮಲಾ ಜೆ.ಕಟ್ಟಿಮನಿ, ಕ್ಷಿತಿಜ್, ದತ್ತು ಪೂಜಾರಿ, ಪಿಂಕಿ ಸೇರಿದಂತೆ ಇನ್ನಿತರರಿದ್ದರು.