ರಾಜ್ಯಮಟ್ಟಕ್ಕೆ ಆಯ್ಕೆ, ಬೆಳಗಿನ ಬಳಗದಿಂದ ಅಭಿನಂದನೆ

ರಾಜ್ಯಮಟ್ಟಕ್ಕೆ ಆಯ್ಕೆ, ಬೆಳಗಿನ ಬಳಗದಿಂದ ಅಭಿನಂದನೆ

ರಾಜ್ಯಮಟ್ಟಕ್ಕೆ ಆಯ್ಕೆ, ಬೆಳಗಿನ ಬಳಗದಿಂದ ಅಭಿನಂದನೆ

ವಾಡಿ: ಪಟ್ಟಣದ ಡಾ ಬಿ ಆರ್ ಅಂಬೇಡ್ಕರ ವಸತಿ ಶಾಲೆ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ನಲ್ಲಿ ರಾಜ್ಯಮಟ್ಟಕ್ಕೆ, ವಾಲಿಬಾಲ ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಬೆಳಗಿನ ಬಳಗದ ವತಿಯಿಂದ ಅಭಿನಂದಿಸಲಾಯಿತು.

ಈ ವೇಳೆ ಬೆಳಗಿನ ಬಳಗದ ಸದಸ್ಯ ಹಾಗೂ ಪತ್ರಕರ್ತರಾದ ಮಡಿವಾಳಪ್ಪ ಹೇರೂರ ಮಾತನಾಡಿ ವಿದ್ಯಾರ್ಥಿಗಳು ವಿವಿಧ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿಜಯ ಸಾಧಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ನಮ್ಮಗೆ ಖುಷಿ ಮತ್ತು ಹೆಮ್ಮೆ ಎನಿಸುತ್ತಿದೆ.

ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢತೆಯಿಂದ ಇರಬೇಕಾದರೆ ಕ್ರೀಡೆ ಮತ್ತು ಶಿಕ್ಷಣ ಅತ್ಯವಶ್ಯಕವಾಗಿದೆ. ನಮ್ಮ ಈ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿಯೂ ಉತ್ತಮ ಪ್ರದರ್ಶನ ನೀಡಿ ನಮ್ಮ ವಾಡಿ ಪಟ್ಟಣಕ್ಕೆ ಕೀರ್ತಿ ತರಲಿ ಎಂದು ಶುಭಕೋರಿದರು.

ಬೆಳಗಿನ ಬಳಗದ ಇನ್ನೋರ್ವ ಸದಸ್ಯ ವೀರಣ್ಣ ಯಾರಿ ಮಾತನಾಡಿ ದೈಹಿಕ ಚಟುವಟಿಕೆಯು ದೇಹಕ್ಕೆ ನೀಡುವ ಶಿಕ್ಷಣವಾಗಿದ್ದು ಇದು ವಿದ್ಯಾರ್ಥಿಗಳಲ್ಲಿ ದೈಹಿಕ, ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಬದಲಾವಣೆಗೆ ಒತ್ತು ನೀಡುತ್ತದೆ.

ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಾಯಂಕಾಲದ ವರೆಗೆ ಪಠ್ಯ ಚಟುವಟಿಕೆಗಳಲ್ಲಿ ನಿರತರಾಗಿರುವುದರಿಂದ ಅವರ ಮನಸ್ಸಿಗೆ ಆರಾಮ ಅನಿವಾರ್ಯವಾಗಿರುತ್ತದೆ. ದೈಹಿಕ ಚಟುವಟಿಕೆ ಹಾಗೂ ಆಟಗಳು ಮಕ್ಕಳ ಆರೋಗ್ಯವನ್ನು ವೃದ್ಧಿಸಿ ಕಾಯಿಲೆಗಳಿಂದ 

ದೂರವಿರಿಸಿ ಸುಂದರ ಜೀವನ ನಡೆಸಲು ಸಹಕರಿಸುತ್ತವೆ, ಆದ್ದರಿಂದ ಪಾಠದ ಜೊತೆಗೆ ಆಟಕ್ಕೆ ಒತ್ತುನೀಡುವುದು ಅವಶ್ಯಕ ಎಂದು ಹೇಳಿದರು.

ಕಲಬುರಗಿ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕರ ವಾಲಿಬಾಲನಲ್ಲಿ ಪ್ರಥಮ ಸ್ಥಾನ ಪಡೆಯುವುದರ ಮೂಲಕ ವಿಭಾಗ ಮಟ್ಟಕ್ಕೆ ಆಯ್ಕೆ,

ದತ್ತು ಮಲ್ಲಿಕಾರ್ಜುನ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಗಣೇಶ ಪ್ರೇಮ ಉದ್ದ ಜಿಗಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆಯುವುದರ ಮೂಲಕ ರಾಜ್ಯಮಟ್ಟಕ್ಕೆ ,ಮೊರಾರ್ಜಿ ದೇಸಾಯಿ ಶಾಲೆಯ ವಿಲ್ಸನ್ ಜಾವಲಿನ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದ

ವಿದ್ಯಾರ್ಥಿಗಳಿಗೆ ಈ ಕ್ರೀಡಾ ಸಾಧನೆಗೆ ಪೂರಕವಾದ ಶಾಲೆ ಪ್ರಾಂಶುಪಾಲರಾದ ಉದಯ ಧರೆಣ್ಣನವರ, ಶಂಕರ್ ರಾಟೋಡ್ ದೈಹಿಕ ಶಿಕ್ಷಕರಾದ ಶ್ರೀನಾಥ್ ಇರಗೊಂಡ, ಶಂಕರಲಿಂಗ್ ಕೋರಿ ಅವರನ್ನು ಸನ್ಮಾನಿಸಿ ಸಿಹಿ ಹಂಚಿ,ವಿದ್ಯಾರ್ಥಿಗಳಿಗೆ ವಾಲಿಬಾಲ ನೀಡಿ ಅಭಿನಂದಿಸಲಾಯಿತು.

ಬೆಳಗಿನ ಬಳಗ ಸದಸ್ಯರಾದ ಜಯದೇವ ಜೋಗಿಕಲಮಠ, ಸಿದ್ದಯ್ಯ ಶಾಸ್ತ್ರಿ ನಂದೂರಮಠ,ಮಲ್ಲಯ್ಯ ಸ್ವಾಮಿ ಮಠಪತಿ,ಶಿವಪ್ಪ ಮುಂಡರಗಿ,ಕಾಶಿನಾಥ ಶೆಟಗಾರ,

ದೇವೇಂದ್ರ ದೊಡ್ಡಮನಿ,ನಾಗರಾಜ ಗೌಡ ಗೌಡಪ್ಪನೂರ,ಆನಂದ ಇಂಗಳಗಿ, ಅರುಣ ಕುಮಾರ ಪಾಟೀಲ ಹಾಗೂ ವಸತಿ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.