ಕಲ್ಯಾಣ ಕರ್ನಾಟಕ ನೇಮಕಾತಿಯಲ್ಲಿ ಪಾಲು ನೀಡಲು ನಿರ್ಧಾರ : ಸಿ ಎಂ

ಕಲ್ಯಾಣ ಕರ್ನಾಟಕ ನೇಮಕಾತಿಯಲ್ಲಿ ಪಾಲು ನೀಡಲು ನಿರ್ಧಾರ : ಸಿ ಎಂ

ಕಲ್ಯಾಣ ಕರ್ನಾಟಕ ನೇಮಕಾತಿಯಲ್ಲಿ ಪಾಲು ನೀಡಲು ನಿರ್ಧಾರ : ಸಿ ಎಂ 

ಬೆಂಗಳೂರು : ಸೆಪ್ಟೆಂಬರ್ ,25- ಇಂದು ವಿಧಾನಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನದಡಿ ಅಗತ್ಯ ಪಾಲು ನೀಡುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಸಭೆ ನಡೆಸಿದರು.

ಸಚಿವರಾದ ಈಶ್ವರ್‌ಖಂಡ್ರೆ,ಡಾ.ಪ್ರಿಯಾಂಕ ಖರ್ಗೆ, ಜಿ. ಪರಮೇಶ್ವರ, ಹೆಚ್.ಕೆ. ಪಾಟೀಲ, ಕೆ. ಸುಧಾಕರ್, ಡಾ. ಎಂ.ಸಿ. ಸುಧಾಕರ್, ಎನ್.ಎಸ್. ಬೋಸರಾಜು, ಡಿ.ಸುಧಾಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 ಹಲವಾರು ಹುದ್ದೆಗಳ ನೇಮಕಾತಿ ಚಾಲ್ತಿಯಲ್ಲಿದ್ದು.ಪಿಎಸ್‌ಐ ಹುದ್ದೆ ಸೇರಿದಂತೆ.

ಕಲ್ಯಾಣ ಕರ್ನಾಟಕ ಪಾಲುಗಾರಿಕೆ ಕುರಿತು ಪ್ರಗತಿಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು ನೇಮಕಾತಿ ಪ್ರಕ್ರಿಯೆಗಳು ಚುರುಕುಗೊಳ್ಳಬೇಕು. ಅದೇ ಸಂದರ್ಭದಲ್ಲಿ 371 ಜೆ ಸ್ಥಾನಮಾನದ ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇಮಕಾತಿಯಲ್ಲಿ ಸೂಕ್ತ ಪಾಲು ನೀಡಬೇಕು ಎಂದು ಸೂಚಿಸಿದರು.

ಈ ಹಿಂದೆ ನಡೆದಿರುವ ಪಿಎಸ್‌ಐ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರ್ದಿಷ್ಟ ಸ್ಥಾನಗಳ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಭವನೀಯ ನೇಮಕಾತಿ ಪಟ್ಟಿಯನ್ನು ತಡೆಹಿಡಿಯುವಂತೆ ಪತ್ರ ಕೂಡ ಬರೆದಿದ್ದರು. ಕಲ್ಯಾಣ ಕರ್ನಾಟಕಕ್ಕೆ ನ್ಯಾಯ ಒದಗಿಸಿದಂತಾಗಿದೆ.