ಚಂದ್ರಮ್ಮ ಶಾಬಾದಿ ನಿಧನ

ಚಂದ್ರಮ್ಮ ಶಾಬಾದಿ ನಿಧನ
ಕಲಬುರಗಿ: ನಗರದ ನಿವಾಸಿ ಚಂದ್ರಮ್ಮ ಭೋಗಲಿಂಗಪ್ಪ ಶಾಬಾದಿ (93) ಭಾನುವಾರ ರಾತ್ರಿ ನಿಧನರಾದರು.
ಮೃತರಿಗೆ ಲಿಂಗಾಯತ ಸಮಾಜದ ಮುಖಂಡ ರವೀಂದ್ರ ಶಾಬಾದಿ ಸೇರಿದಂತೆ ನಾಲ್ವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.
ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 3ಕ್ಕೆ ಚಿಂಚೋಳಿ ತಾಲ್ಲೂಕಿನ ಪಟಪಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರ ಕಣ್ಣುಗಳನ್ನು ಕಲಬುರಗಿಯ ಎಂಆರ್‌ಎಂಸಿ ಮೆಡಿಕಲ್ ಕಾಲೇಜಿಗೆ ದಾನ ಮಾಡಲಾಗಿದೆ.