ಕಲಬುರಗಿಯನ್ನು ಭೂ ಕೈಲಾಸ ಮಾಡಿದ ಮಹಾದಾಸೋಹಿ ಶ್ರೀ ಶರಣಬಸವೇಶ್ವರರು : ಪೂಜ್ಯ ಶ್ರೀ ಡಾ ಸಾರಂಗಧರ ಶ್ರೀಗಳು

ಕಲಬುರಗಿಯನ್ನು ಭೂ ಕೈಲಾಸ ಮಾಡಿದ  ಮಹಾದಾಸೋಹಿ ಶ್ರೀ ಶರಣಬಸವೇಶ್ವರರು : ಪೂಜ್ಯ ಶ್ರೀ ಡಾ ಸಾರಂಗಧರ ಶ್ರೀಗಳು

ಕಲಬುರಗಿಯನ್ನು ಭೂ ಕೈಲಾಸ ಮಾಡಿದ ಮಹಾದಾಸೋಹಿ ಶ್ರೀ ಶರಣಬಸವೇಶ್ವರರು : ಪೂಜ್ಯ ಶ್ರೀ ಡಾ ಸಾರಂಗಧರ ಶ್ರೀಗಳು 

ಕಲಬುರಗಿ : ಆಗಸ್ಟ್ ೦೫, ಮಹಾದಾಸೋಹಿ ಶ್ರೀ ಶರಣಬಸವೇಶ್ವರರು ಕಲಬುರಗಿಯನ್ನು ಭೂ ಕೈಲಾಸ ಮಾಡಿದ್ದರು ಎಂದು ಶ್ರೀಶೈಲಂ ಸಾರಂಗಮಠದ ಜಗದ್ಗುರು ಪೂಜ್ಯ ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಹೇಳಿದರು.

 ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ರವಿವಾರ ಶ್ರಾವಣ ಮಾಸದ ಕಾಯಕ್ರಮಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು, ಶ್ರಾವಣ ಮಾಸ ಎಂದರೆ ಶ್ರವಣ, ಮನನ, ಎಂದರ್ಥ. ಶರಣರು ಕಾಯಕ ಮಾಡುತ್ತಾ ದಾಸೋಹ ಗೈದರು. ನಿರಂತರವಾಗಿ ಬಹಳ ವರ್ಷಗಳಿಂದ ಶ್ರಾವಣ ಮಾಸದ ಕಾರ್ಯಕ್ರಮಗಳು ನಡೆಸಿಕೊಂಡು ಬರುತ್ತಿರುವ ಏಕೈಕ ಸಂಸ್ಥೆ ಎಂದರೆ ಅದು ಶ್ರೀ ಶರಣಬಸವೇಶ್ವರ ಸಂಸ್ಥಾನ. ಈ ನಿಟ್ಟಿನಲ್ಲಿ ಜ್ಞಾನ ಭಂಡಾರಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಯವರ ಕೊಡುಗೆ ಶ್ಲಾಘನೀಯವಾದದ್ದು ಎಂದು ಸಾರಂಗಧರ ಶ್ರೀಗಳು ಬಣ್ಣಿಸಿದರು. 

ನಂತರ ಬೆಳಗುಂಪಾ ಬೃಹನ್ಮಠದ ಪೂಜ್ಯ ಶ್ರೀ ಅಭಿನವ ಪರ್ವತೇಶ್ವರ ಸ್ವಾಮಿಜಿಗಳು ಮಾತನಾಡಿ, ಗುರು ಲಿಂಗ ಜಂಗಮ ಆರಾಧನೆ ವಿಷಯ ಕುರಿತು ಮಾತನಾಡಿದರು. ಶ್ರೀ ಶರಣಬಸವೇಶ್ವರ ಸಂಸ್ಥಾನದ ೯ ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪಾಜಿ ಆಶಿರ್ವಚನ ನೀಡಿದರು. 

ಚೌದಾಪುರಿ ಹಿರೇಮಠದ ಶ್ರೀ ಷ.ಬ್ರ, ಡಾ,ರಾಜಶೇಖರ ಶಿವಾಚಾರ್ಯರು ಮಾತನಾಡಿದರು.

ಸಮಾರಂಭದಲ್ಲಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ೮ ನೇ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆದ ಜ್ಞಾನ ಭಂಡಾರಿ ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. 

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನರಾದ ಪೂಜ್ಯ ಮಾತೋಶ್ರೀ ಡಾ,ದಾಕ್ಷಾಯಣಿ ಎಸ್.‌ ಅಪ್ಪ , ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಸಂಸ್ಥಾನದ ಡಾ.ಅಲ್ಲಮಪ್ರಭು ದೇಶಮುಖ, ಶರಣಬಸವ ವಿವಿಯ ಕುಲಪತಿ ಡಾ.ಅನೀಲಕುಮಾರ ಬಿಡವೆ, ಡೀನ್ ಡಾ.ಲಕ್ಷ್ಮೀ ಪಾಟೀಲ ಮಾಕಾ ,ಕುಲಸಚಿವ ಡಾ, ಎಸ. ಎಸ.‌ಹೊನ್ನಳ್ಳಿ, ಶರಣಬಸವ ವಿವಿ ಯ ಪದಾಧಿಕಾರಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು,ಪ್ರಾಧ್ಯಾಪಕರು, ಮಹಾವಿದ್ಯಾಲಯಗಳ ಪ್ರಾಚಾರ್ಯರುಗಳು ಉಪಸ್ಥಿತರಿದ್ದರು. 

 ಸುಪ್ರೀಯಾ ನಾಗಶೆಟ್ಟಿ ನಿರೂಪಿಸಿದರು, ಡಾ.ಶಿವರಾಜ ಶಾಸ್ತ್ರಿ ಹೇರೂರ ವಂದಿಸಿದರು. ಕು. ಶಿವಾನಿ ಎಸ್.‌ ಅಪ್ಪ, ಕು.ಕೋಮಲ ಎಸ್.‌ ಅಪ್ಪ, ಹಾಗೂ ಕು.ಮಹೇಶ್ವರಿ ಎಸ್.‌ ಅಪ್ಪ ಅವರು ವಿಶೇಷ ಪ್ರಾರ್ಥನೆ ಗೈದರು. ಶಿವಲಿಂಗ ಶಾಸ್ತ್ರಿ ಗರೂರ ಅವರು ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪ್ರವಚನ ನಡೆಸಿಕೊಟ್ಟರು.