ಅಳ್ಳೋಳ್ಳಿ: ದಿ. ನಾಗಯ್ಯಸ್ವಾಮಿ ಅಲ್ಲೂರವರ 54ನೇ ಜನ್ಮದಿನೋತ್ಸವ ಆಚರಣೆ

ಅಳ್ಳೋಳ್ಳಿ: ದಿ. ನಾಗಯ್ಯಸ್ವಾಮಿ ಅಲ್ಲೂರವರ 54ನೇ ಜನ್ಮದಿನೋತ್ಸವ ಆಚರಣೆ

ಅಳ್ಳೋಳ್ಳಿ: ದಿ. ನಾಗಯ್ಯಸ್ವಾಮಿ ಅಲ್ಲೂರವರ 54ನೇ ಜನ್ಮದಿನೋತ್ಸವ ಆಚರಣೆ

ಚಿತ್ತಾಪುರ ತಾಲ್ಲೂಕಿನ ಅಳ್ಳೋಳ್ಳಿ ಗ್ರಾಮದ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ದಿ. ನಾಗಯ್ಯಸ್ವಾಮಿ ಅಲ್ಲೂರವರ 54ನೇ ಜನ್ಮದಿನೋತ್ಸವವನ್ನು ಮನೋಜ್ಞವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷೆ ಸಿದ್ಧಮ್ಮ ನಾಗಯ್ಯಸ್ವಾಮಿ ಸ್ಥಾವರಮಠ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಿವಪ್ರಸಾದ, ಶಿಕ್ಷಣ ಪ್ರೇಮಿ ವೀರಭದ್ರಪ್ಪ ಟೆಂಗಳಿ, ಶಾಲಾ ಮುಖ್ಯಗುರು ಬಸವರಾಜ ಹೊಟ್ಟಿ, ಮುಖಂಡ ಮಹಾದೇವಪ್ಪ ಡೋಣಗಾಂವ, ಶಿಕ್ಷಕರಾದ ಅನುಸೂಯ ಮಡಿವಾಳ, ವಿಜಯಲಕ್ಷ್ಮಿ, ಸ್ವಾತಿ, ಮಂಜುಳಾ, ರೇಖಾ, ಕಾವ್ಯ, ಶಾಂತಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಮೂಲಕ ದಿ. ನಾಗಯ್ಯಸ್ವಾಮಿ ಅಲ್ಲೂರರವರ ಸಾಧನೆಗಳನ್ನು ಸ್ಮರಿಸಿ, ಅವರ ಸೇವೆಗೂ ಗೌರವ ಸಲ್ಲಿಸಲಾಯಿತು.