ಲೋಕಾಯುಕ್ತ ಬಲೆಗೆ ಕಲಬುರಗಿ ಅಗ್ನಿಶಾಮಕ ಅಧಿಕಾರಿಗಳು
ಕಲಬುರಗಿ: ಲಂಚ ಪಡೆಯುವ ವೇಳೆ ಇಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಕಲಬುರಗಿ ನಗರದ ಅಗ್ನಿಶಾಮಕ ಕಚೇರಿಯಲ್ಲಿ ನಡೆದಿದೆ. ಕಲಬುರಗಿ ನಗರದ ಅಗ್ನಿಶಾಮಕ ಜಿಲ್ಲಾ ಅಧಿಕಾರಿಗಳಾದ ಗುರುರಾಜ ಹಾಗೂ ಸೋಪನ್ನರಾವ್ ಎಂಬ ಅಧಿಕಾರಿಗಳು ಲೋಕಾ ಬಲೆಗೆ ಬಿದ್ದಿದ್ದಾರೆ.
ಪೆಟ್ರೋಲ್ ಪಂಪ್ ಎನ್ ಓಂ.ಸಿ.ಗಾಗಿ ಲಂಚಕ್ಕೆ ಬೇಡಿಕೆಇಟ್ಟು 20 ಸಾವಿರ ಹಣ ಸ್ವೀಕರಿಸುವಾಗ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಎತಂದು ಹರಿದುಬಂದಿದೆ,
ಚಿತಾಪುರ ನಗರದ ರಾಜರಾಮಪ್ಪ ನಾಯಕ ಅವರಿಗೆ ಅಗ್ನಿಶಾಮಕ ದಳದ ಅಧಿಕಾರಿಗಳು1 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಇಂದು ಕಲಬುರಗಿ ನಗರದ ಕರ್ನಾಟಕ ರಾಜ್ಯ ಅಗ್ನಿಶಾಮಕ ಸೇವೆಗಳ ಕಚೇರಿಗೆ ತೆರಳಿದರು ತನಿಖೆ ವೇಳೆ ಸಿಕ್ಕಿಬಿದ್ದರು ಇನ್ನು ಹೆಚ್ಚಿನ ತನಿಖೆ ನಡೆಯುತ್ತಿದೆ .ಲೋಕಾಯುಕ್ತ ಡಿ.ಎಸ್.ಪಿ . ಮಂಜುನಾಥ, ಸಬ್ ಇನ್ಸ್ಪೆಕ್ಟರ್ ದ್ರವತಾರ , ಪೊಲೀಸ್ ಸಿಬ್ಬಂದಿಗಳಾದ ಮಲ್ಲಿನಾಥ,ಮಸುಧ ದಾಳಿ ನಡೆಸಿದರು.