ಐಟಿಐ ಶಹಾಬಾದ : ವಿವಿಧ ವೃತ್ತಿಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳ ಆಹ್ವಾನ :..

ಐಟಿಐ ಶಹಾಬಾದ : ವಿವಿಧ ವೃತ್ತಿಗಳಿಗೆ ಪ್ರವೇಶಕ್ಕಾಗಿ ಅರ್ಜಿಗಳ ಆಹ್ವಾನ :..
ಶಹಾಬಾದ : - ಸರ್ಕಾರಿ ಕೈಗಾರಿಕಾ ತರಬೇತಿ ಶಹಾಬಾದ (ತರನಳ್ಳಿ) ಸಂಸ್ಥೆಯಲ್ಲಿ 2025-26 ಸಾಲಿಗೆ ಐಟಿಐ (ಎನ್.ಸಿ.ವಿ.ಟಿ. ಸಂಯೋಜನೆ ಪಡೆದ) ಈ ಕೆಳಕಂಡ ವೃತ್ತಿಗಳಿಗೆ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ. ಪಾಸಾದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಶಹಾಬಾದ (ತರನಳ್ಳಿ) ಸರ್ಕಾರಿ ಕೈಗಾರಿಕ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಎರಡು ವರ್ಷದ ಫಿಟ್ಟರ್, ಎಲೆಕ್ನಿಶಿಯನ್, ಸಿ.ಎನ್.ಸಿ. ಮಶಿನಿಂಗ್ ಟೆಕ್ನಿಶಿಯನ್ ಹಾಗೂ ವರ್ಚುಯಲ್ ಅನಾಲೈಸಿಸ್ ಆಂಡ್ ಡಿಸೈನರ್ ವೃತ್ತಿಗಳಿಗೆ ಹಾಗೂ ಒಂದು ವರ್ಷದ ಇಂಡಸ್ಟ್ರಿಯಲ್ ರೋಬೋಟೇಕ್ ಆಂಡ್ ಡಿಜಿಟಲ್ ಮ್ಯಾನುಫ್ಯಾಕ್ಟರಿಂಗ್ ಟೆಕ್ನಿಶಿಯನ್, ಮ್ಯಾನುಫ್ಯಾಕ್ಟರಿಂಗ್ ಪ್ರೋಸೆಸ್ ಕಂಟ್ರೋಲ್ ಆಂಡ್ ಅಟೋಮೇಶನ್ ಹಾಗೂ ಇಂಜನಿಯರಿಂಗ್ ಡಿಸೈನ್ ಟೆಕ್ನಿಶಿಯನ್ ವೃತ್ತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಸರಕಾರಿ ವೆಬ್‌ಸೈಟ್‌ನಲ್ಲಿ ಅಥವಾ ಆನ್‌ಲೈನ್/ಸೈಬರ್ ಕೇಫೆ ಮೂಲಕ ಮೇ. 28ರ ಒಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಹಾಬಾದ (ತರನಳ್ಳಿ) ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಹಾಗೂ ಪ್ರಾಚಾರ್ಯರ ಮೊ : 9591844283, 9481536115 ನಂಬರಗೆ ಸಂಪರ್ಕಿಸಬಹುದು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಹಾಬಾದ್ ವರದಿ ನಾಗರಾಜ್ ದಂಡಾವತಿ