ಸೇ.17.ರಂದು ನಡೆಯುತಿರುವ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೆರಿಸುವಂತೆ ಸರಕಾರಕ್ಕೆ ಸಚೀನ್ ಫರತಾಬಾದ ಮನವಿ

ಸೇ.17.ರಂದು ನಡೆಯುತಿರುವ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಬೇಡಿಕೆ ಈಡೆರಿಸುವಂತೆ ಸರಕಾರಕ್ಕೆ ಸಚೀನ್ ಫರತಾಬಾದ ಮನವಿ
ಕಲಬುರಗಿ: ಸೇಪ್ಟೆಂಬರ್ 17 ರಂದು ಕಲಬುರಗಿ ಜಿಲ್ಲೆಯಲ್ಲಿ ನಡೆಯುತಿರುವ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ನಮ್ಮ ಬೇಡಿಕೆಗಳನ್ನು ಚರ್ಚೆ ಮಾಡಿ, ಕಾರ್ಯರೂಪಕ್ಕೆ ತರಬೆಕೇಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಚೀನ್ ಎಸ್. ಫರತಾಬಾದ ಅವರು ಹೇಳಿದರು.
ಕಲ್ಯಾಣ ಕರ್ನಾಟಕದ ಕೇಂದ್ರ ಬಿಂದು ಕಲಬುರಗಿ ನಗರದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ರವರು ನಮ್ಮ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಸುಮಾರು ವರ್ಷಗಳ ನಂತರ ಸಚಿವ ಸಂಪುಟ ಸಭೆಯು ಕಲಬುರಗಿ ನಗರದಲ್ಲಿ ನಡೆಯುವಂತೆ ಮಾಡಿದಕ್ಕೆ ಅಭಿನಂದನೆಗಳು, ಸೇಪ್ಟೆಂಬರ್ 17 ರಂದು ಕಲಬುರಗಿ ಜಿಲ್ಲೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಬೇಡಿಕೆಗಳು ಈಡೆರಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದಾರೆ.
17ನೇ ಸೆಪ್ಟಂಬರ್ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆ ದಂದು ಈ ಭಾಗಕ್ಕೆ ಸರಕಾರಿ ರಜೆ ಘೋಷಣೆ ಮಾಡಬೇಕು, ನಮ್ಮ ಈ ಭಾಗದ ಇತಿಹಾಸವನ್ನು ಪಠ್ಯಪುಸ್ತದಲ್ಲಿ ಅಳವಡಿಸಿ ಕಲ್ಯಾಣ ಕರ್ನಾಟಕ ಬಗ್ಗೆ ಮಕ್ಕಳಿಗೆ ತಿಳಿಯುವಂತೆ ಮಾಡಬೇಕು, ಕಲಬುರಗಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಯಿಂದ ರೈತರ ಜಮೀನಿನಲ್ಲಿ ಮಳೆ ನೀರು ನಿಂತು ಬೆಳೆಗಳು ಹಾಳಾಗಿದ್ದು, ಸದರಿ ರೈತರ ಜಮೀನುಗಳಿಗೆ ಭೇಟಿ ನೀಡಿ ಜಮೀನಿನಲ್ಲಿ ಹಾನಿಯಾದ ಬೆಳೆಯ ಸೂಕ್ತ ಪರಿಹಾರ ನೀಡಬೇಕು, ಕಲಬುರಗಿ ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಿದ್ದು, ನಗರದಲ್ಲಿನ ಎಲ್ಲಾ ರಸ್ತೆಗಳನ್ನು ಇನ್ನೊಮ್ಮೆ ರಸ್ತೆ ಅಗಲಿಕರಣ ಮಾಡಬೇಕು, ಈ ಭಾಗದ ನೀರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡುವದು, ಕಲಬುರಗಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯನ್ನು ನಿಗಿಸುವದು, ಕಲಬುರಗಿ ನಗರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಹೊಸದಾಗಿ ಪೊಲೀಸ್ ವಸತಿ ಗೃಹ ಕಟ್ಟಡ ನಿರ್ಮಾಣ ಮಾಡುವದು, ಕಲಬುರಗಿ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದ್ದು, ಸದರಿ ರಸ್ತೆಯ ಅಗಲಿಕರಣ ಮಾಡಿ ವಾಹನ ಸವಾರರಿಗೆ ಮತ್ತು ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪ್ರಕಟಣೆಯಲ್ಲಿ ತಿಲಿಸಿದ್ದಾರೆ.