ಕಲಬುರಗಿ: ವಾರ್ಡ್ 47ರಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಪಾಟೀಲ ಗುದ್ದಲಿ ಪೂಜೆ

ಕಲಬುರಗಿ: ವಾರ್ಡ್ 47ರಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಪಾಟೀಲ ಗುದ್ದಲಿ ಪೂಜೆ

ಕಲಬುರಗಿ: ವಾರ್ಡ್ 47ರಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಪಾಟೀಲ ಗುದ್ದಲಿ ಪೂಜೆ

ಕಲಬುರಗಿ ನಗರದ ವಾರ್ಡ್ ನಂ.47ರ ರಾಜಾಪುರ ನಾಯ್ಡು ಲೇಔಟ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅನುದಾನದಲ್ಲಿ ರೂ.25 ಲಕ್ಷ ವೆಚ್ಚದಲ್ಲಿ ಕೈಗೆಳೆಯಲಿರುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಮಂಗಳವಾರ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಅವರು ಗುದ್ದಲಿ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಮಹಾಪೌರ ವರ್ಷಾ ರಾಜೀವ ಜಾನೆ, ಮಾಜಿ ಮಹಾಪೌರ ರವಿಂದ್ರನಾಥ ಹೋನ್ನಳ್ಳಿ, ಮಹಾನಗರ ಪಾಲಿಕೆಯ ಮಾಜಿ ಸದಸ್ಯ ರಾಹುಲ ಹೋನ್ನಳ್ಳಿ, ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಕುಮಾರ ಕೆ. ಯಾದವ್, ಎಇ ಶಾಂತಕುಮಾರ ನಂದೂರ ಸೇರಿದಂತೆ ಮುಖಂಡರಾದ ದಯಾನಂದ ಸುರವಾನೆ, ಕುಮಾರ ಒಂಟಿ, ರಾಜು ಗಾಯಕವಾಡ, ಸಂಘಪಾಲ ಕಾಂಬಳೆ, ಪ್ರಮೋದಕುಮಾರ, ಮಲ್ಲಿಕಾರ್ಜುನ ಕನವರಕರ್, ಶರಣು ಕನವರಕರ್, ನವಿನ್, ದೇವೇಂದ್ರ ನಡುವಿನಮನಿ ಹಾಗೂ ಗುತ್ತಿಗೆದಾರ ವಿಕ್ಕಿನ್ ಉಪಸ್ಥಿತರಿದ್ದರು.

ಹೊಸ ರಸ್ತೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದರಿಂದ ಸ್ಥಳೀಯರಿಗೆ ಸುಗಮ ಸಂಚಾರದ ಅನುಕೂಲ ಒದಗಲಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.