ದೊಡ್ಡಪ್ಪ ಅಪ್ಪ ಪ.ಪೂ ವಿಜ್ಞಾನ ಕಾಲೇಜಿನಲ್ಲಿ ದೊಡ್ಡಪ್ಪ ಅಪ್ಪ 41ನೇ ಪುಣ್ಯ ಸ್ಮರಣೋತ್ಸವ

ದೊಡ್ಡಪ್ಪ ಅಪ್ಪ ಪ.ಪೂ ವಿಜ್ಞಾನ ಕಾಲೇಜಿನಲ್ಲಿ  ದೊಡ್ಡಪ್ಪ ಅಪ್ಪ 41ನೇ ಪುಣ್ಯ ಸ್ಮರಣೋತ್ಸವ

ದೊಡ್ಡಪ್ಪ ಅಪ್ಪ ಪ.ಪೂ ವಿಜ್ಞಾನ ಕಾಲೇಜಿನಲ್ಲಿ ದೊಡ್ಡಪ್ಪ ಅಪ್ಪ 41ನೇ ಪುಣ್ಯ ಸ್ಮರಣೋತ್ಸವ 

ಕಲ್ಬುರ್ಗಿಯಲ್ಲಿ ಕನ್ನಡದ ಕಂಪು ಪಸರಿಸುವಲ್ಲಿ ದೊಡ್ಡಪ್ಪ ಅಪ್ಪನವರ ಪಾತ್ರ ಮಹತ್ವದ್ದಾಗಿದೆ 

ದೊಡ್ಡಪ್ಪ ಅಪ್ಪ ಪದವಿ ಪೂರ್ವ ವಸತಿ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ದೊಡ್ಡಪ್ಪ ಅಪ್ಪನವರ 41ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ನಿವೃತ ಪ್ರಾಧ್ಯಾಪಕರಾದ ಡಾ. ನಿಂಗಮ್ಮ ಪತಂಗೆ ಅವರು ಮಾತನಾಡಿ ಕಲ್ಬುರ್ಗಿಯಲ್ಲಿ ಉರ್ದು ಮತ್ತು ಮರಾಠಿಗಳ ಹಾವಳಿ ಹೆಚ್ಚಾಗಿರುವ ಸಂದರ್ಭದಲ್ಲಿ ಕನ್ನಡ ಮಣ್ಣಿನ ಭಾಷೆಯಾದ ಕನ್ನಡ ನಲುಗಿ ಹೋಗಿತ್ತು ಇದನ್ನು ಅರಿತ ದೊಡ್ಡಪ್ಪ ಅಪ್ಪನವರು ತಮ್ಮ ಮಗಳಾದ ಲಿಂಗೈಕ್ಯ ಮಹಾದೇವಿ ಅವರ ಹೆಸರಿಗೆ ಮಾದೇವಿ ಕನ್ಯಾ ಪ್ರೌಢಶಾಲೆಯನ್ನು ಆರಂಭಿಸಿದರು .ಇಲ್ಲಿ ಓದಲು ಹೆಣ್ಣು ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರಲು ಕುದುರೆ ಗಾಡಿ ಟಾಂಗಾ ವ್ಯವಸ್ಥೆ ಕೂಡ ಮಾಡಿದರು .ಅಷ್ಟೇ ಅಲ್ಲ ಶಿಕ್ಷಕರನ್ನು ಕೂಡ ಮನೆಯಿಂದ ಕರೆದುಕೊಂಡು ಬರಲಾಗುತ್ತಿತ್ತು . ಅಂದು ಅವರು ನೆಟ್ಟು ಬೆಳೆಸಿದ ಕನ್ನಡ ಶಾಲೆಯ ಗಿಡ ಇವತ್ತು ಹೆಮ್ಮರವಾಗಿ ಬೆಳೆದು ನಿಂತು ವಿಶ್ವವಿದ್ಯಾಲಯವಾಗಿದೆ .ಕಲ್ಯಾಣ ಕರ್ನಾಟಕದಲ್ಲಿ ಕನ್ನಡದ ವಾತಾವರಣ ಬೆಳೆಸುವಲ್ಲಿ ದೊಡ್ಡಪ್ಪನವರ ಪಾತ್ರ ಮಹತ್ವದ್ದಾಗಿದೆ . ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಸ್ಥಾಪಿಸುವುದರ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಾ ವಿಜ್ಞಾನ ವಾಣಿಜ್ಯ ಪದವಿ ಮಹಾ ವಿದ್ಯಾಲಯಗಳನ್ನು ಆರಂಭಿಸಿ ಸಾವಿರಾರು ವಿದ್ಯಾರ್ಥಿಗಳು ಪದವೀಧರರಾಗಲು ಕಾರಣಭೂತರಾದರು . ದೊಡ್ಡಪ್ಪನವರು ಅತ್ಯಂತ ಕರುಣಾಮಯಿ ಹೃದಯ ಹೊಂದಿದವರಾಗಿದ್ದರು .ಅವರ ನಡೆ ಪಾವನ ನುಡಿ ಪಾವನವಾಗಿತ್ತು . ರಜಾಕಾರ ಹಾವಳಿ ಸಂದರ್ಭದಲ್ಲಿ ಕೆಲವೊಬ್ಬರು ಧಾರ್ಮಿಕ ಸಾಮರಸ್ಯ ಕೆಡಿಸಲು ಪ್ರಯತ್ನಿಸಿದರು ಕೂಡ ,ಹಿಂದೂ ಮುಸ್ಲಿಮರು ಸಹೋದರರಾಗಿದ್ದೇವೆ .ಸಾಮರಸ್ಯದಿಂದ ಬದುಕೋಣ ಎಂಬ ಶಾಂತಿಮಂತ್ರ ಹೇಳಿದರು .ಅವರಿಗಾದ ಅವಮಾನ ತೊಂದರೆಗಳನ್ನು ಬಹಿರಂಗವಾಗಿ ಹೇಳಿ ಸಾಮರಸ್ಯ ಕೆಡಿಸುತ್ತಿರಲಿಲ್ಲ .ಅವರ ಆದರ್ಶ ತತ್ವಗಳನ್ನು ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿನೋದ ಪತಂಗೆಯವರು ವಹಿಸಿದ್ದರು . ಡಾ. ಆನಂದ ಸಿದ್ಧಾಮಣಿ ಅವರು ಕಾರ್ಯಕ್ರಮ ನಿರೂಪಿಸಿದರು .