ಭೀಕರ ಮಳೆಯ ಪ್ರಯುಕ್ತ ರೈತರು - ಸಾರ್ವಜನಿಕರು ಎಚ್ಚರಿಕೆ ವಹಿಸಲು : ಡಾ ಅಂಬಾರಾಯ ಅಷ್ಠಗಿ ಮನವಿ

ಭೀಕರ ಮಳೆಯ ಪ್ರಯುಕ್ತ ರೈತರು - ಸಾರ್ವಜನಿಕರು  ಎಚ್ಚರಿಕೆ ವಹಿಸಲು : ಡಾ ಅಂಬಾರಾಯ ಅಷ್ಠಗಿ ಮನವಿ

ಭೀಕರ ಮಳೆಯ ಪ್ರಯುಕ್ತ ರೈತರು - ಸಾರ್ವಜನಿಕರು ಎಚ್ಚರಿಕೆ ವಹಿಸಲು : ಡಾ ಅಂಬಾರಾಯ ಅಷ್ಠಗಿ ಮನವಿ 

ಕಲಬುರಗಿ : ಜಿಲ್ಲೆಯಲ್ಲಿ ಮತ್ತೆ ಕೆಲವು ದಿನಗಳಿಂದ ಕಂಡರಿಯದ ಮಳೆ ನಿರಂತರವಾಗಿ ಸುರಿಯುತ್ತಿರುವ (ಅತಿವೃಷ್ಟಿ) ಪ್ರಯುಕ್ತ ಸಾರ್ವಜನಿಕರು, ರೈತ ಬಾಂಧವರು ಹಾಗೂ ಶಾಲಾ ಮಕ್ಕಳು ಭೀಕರ ಮಳೆ ಹಾಗೂ ಪ್ರವಾಹದ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಡಾ ಅಂಬಾರಾಯ ಅಷ್ಠಗಿ ಮನವಿ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮಕ್ಕಳ ರಕ್ಷಣೆಯ ಹಿತದೃಷ್ಟಿಯಿಂದ ಪಾಲಕರು,ಪೋಷಕರು, ಶಾಲೆ ಮುಖ್ಯಸ್ಥರು ಹಾಗೂ ಶಾಲಾ ಆಡಳಿತ ಮಂಡಳಿಯವರು ಅತ್ಯಧಿಕ ಮಳೆಯಾಗುತ್ತಿರುವ ಪ್ರಯುಕ್ತ ಶಾಲಾ ಕಟ್ಟಡಗಳಿಂದ ಮತ್ತು ಇತರೆ ಮೂಲಗಳಿಂದ ಸಂಭವಿಸಬಹುದಾದ ಪ್ರವಾಹ ಪರಿಸ್ಥಿತಿಯ ಅನಾಹುತಗಳಿಂದ ಎಚ್ಚರಿಕೆ ವಹಿಸಬೇಕು. ಈಗಾಗಲೇ ಜಿಲ್ಲಾಡಳಿತವು ೨ ದಿನಗಳ ಶಾಲೆಗಳಿಗೆ ರಜೆ ಘೋಷಿಸಿರುವುದರಿಂದ ಕಲಬುರಗಿ ಜಿಲ್ಲೆಯ ಎಲ್ಲಾ ಮಕ್ಕಳು ಸೇರಿದಂತೆ ರೈತ ಬಾಂಧವರು, ಸಾರ್ವಜನಿಕರು ನದಿ ಪಾತ್ರದ ಜನರು ವಿಶೇಷವಾಗಿ ರೈತರು,ಸಾರ್ವಜನಿಕರು ಮಕ್ಕಳು ನದಿ, ಹಳ್ಳ, ಕೊಳ್ಳ, ಕೆರೆಗಳನ್ನು ದಾಟದಂತೆ ಹಾಗೂ ಜಾನುವಾರುಗಳನ್ನು ನದಿ ದಂಡೆಗೆ ಅಥವಾ ಹಳ್ಳದ ತಟಕ್ಕೆ ಬಿಡದಂತೆ ಮುಂಜಾಗ್ರತೆ ವಹಿಸಬೇಕೆಂದು ಡಾ ಅಂಬಾರಾಯ ಅಷ್ಠಗಿ ಮನವಿ ಮಾಡಿದ್ದಾರೆ.