60 ವರ್ಷ ದೇಶದ ಜನರಿಗೆ ಮಾಡಿದ ಮೋಸವನ್ನು ಬಿಚ್ಚಿಟ್ಟ ಅಮಿತ ಶಾ- ಸಂವಿಧಾನ ಹೆಸರಲ್ಲಿ ಕಾಂಗ್ರೆಸ್ ನಿಂದ ಇನ್ನೇಷ್ಟು ಮೋಸ: ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ

60 ವರ್ಷ ದೇಶದ ಜನರಿಗೆ ಮಾಡಿದ ಮೋಸವನ್ನು ಬಿಚ್ಚಿಟ್ಟ ಅಮಿತ ಶಾ- ಸಂವಿಧಾನ ಹೆಸರಲ್ಲಿ ಕಾಂಗ್ರೆಸ್ ನಿಂದ ಇನ್ನೇಷ್ಟು ಮೋಸ: ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ

60 ವರ್ಷ ದೇಶದ ಜನರಿಗೆ ಮಾಡಿದ ಮೋಸವನ್ನು ಬಿಚ್ಚಿಟ್ಟ ಅಮಿತ ಶಾ- ಸಂವಿಧಾನ ಹೆಸರಲ್ಲಿ ಕಾಂಗ್ರೆಸ್ ನಿಂದ ಇನ್ನೇಷ್ಟು ಮೋಸ: ದೇವೇಂದ್ರ ದೇಸಾಯಿ ಕಲ್ಲೂರ ಕಿಡಿ

ಕಲಬುರಗಿ: ದೇಶದ ಸಾಮಾನ್ಯ ಜನರನ್ನು ರಾಜಕೀಯವಾಗಿ ಬಳಸಿಕೊಂಡು ಸುಮಾರು 60 ವರ್ಷಕ್ಕಿಂತ ಹೆಚ್ಚು ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದವರು ಸಂವಿಧಾನ ಹೆಸರಲ್ಲಿ ಮೋಸ ಮಾಡುತ್ತಾ ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಸಂಸತ್ತಿನಲ್ಲಿ ಕಾಂಗ್ರೆಸ್‌ನ ಮೋಸದಾಟವನು ಎಳೆಎಳೆಯಾಗಿ ದೇಶದ ಜನರ ಮುಂದೆ ಇಟ್ಟಿರುವುದು ಅಭಿನಂದನಾರ್ಹವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಓಬಿಸಿ ಮೊರ್ಚಾದ ಕಲಬುರಗಿ ನಗರಾಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಹರ್ಷ ವ್ಯಕ್ತ ಪಡಿಸಿದ್ದಾರೆ. 

ಸಂಸತ್ತ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷ ಸಾಧನೆಯ ಬಗ್ಗೆ ಮಾತನಾಡುತ್ತಾ ಸಂವಿಧಾನ ಹೆಸರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರವನ್ನು ದುರಪಯೋಗ ಮಾಡಿಕೊಂಡಿದೆ. ಪರಿಶಿಷ್ಟರ ಹೆಸರಲ್ಲಿ ಲೂಟಿ ಮಾಡುತ್ತಾ ಬಂದಿದೆ. ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ನ್ಯಾ. ಮಂಡಲ ಆಯೋಗವನ್ನು ರಚನೆ ಮಾಡಿ ಸಮಗ್ರ ವರದಿಯನ್ನು ಕೇಳಿತ್ತು. 1980ರಲ್ಲಿಯೇ ಮಂಡಲ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಲಾಗಿತ್ತು. ಆದರೆ ಅದನ್ನು ಸುಮಾರು 10 ವರ್ಷಗಳ ಕಾಲ ಮೂಲೆಯಲ್ಲಿ ಬಿಸಾಕಿದ ಅಂದಿನ ಕಾಂಗ್ರೆಸ್ ಸರ್ಕಾರವು ಹಿಂದಳಿದ ವರ್ಗಗಳಿಗೆ ಮೋಸ ಮಾಡಿಲ್ಲವೇ?, ಮಂಡಲ ಆಯೋಗವು ಜಾರಿಗೆ ಯಾಗಬೇಕಾದರೆ ಬಿಜೆಪಿ ಬೆಂಬಲಿತ ಸರ್ಕಾರ ರಚನೆಯಾದ ಮೇಲೆ ವಿ. ಪಿ. ಸಿಂಗ್ ಪ್ರಧಾನಿ ನೇತೃತ್ವದಲ್ಲಿ ಜಾರಿಗೆ ತರಲಾಯಿತು. ಆದರೂ ಸರಿಯಾಗಿ ಅನುಷ್ಠಾನ ಮಾಡುವಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಮೀನಾಮೇಷ ಏಣಿಸಿತು ಎಂದು ಕೀಡಿ ಕಾರಿದರು. 

ವಿಶ್ವಕರ್ಮ ಸಮಾಜದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂಳಿದ ಸಮಾಜಗಳಾಗಿವೆ. ಅವರಿಗಾಗಿ ಯಾವುದೇ ಯೋಜನೆಗಳನ್ನು ಅಂದಿನ ಕಾಂಗ್ರೆಸ್ ಸರ್ಕಾರಗಳು ಮಾಡಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ವಿಶ್ವಕರ್ಮ ಸಮಾಜದಲ್ಲಿ ಬರುವ ವಿವಿಧ ಪಂಡಗಳಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕವಾಗಿ ಅವರನ್ನು ಸದೃಢಗೊಳಿಸಲು ಮೋದಿ ನೇತೃತ್ವದ ಸರ್ಕಾರ ಕೆಲಸ ಮಾಡಿದೆ. 

ಇತ್ತೀಚಿಗೆ ಕಾಂಗ್ರೆಸ್ ಪಕ್ಷದ ನಾಯಕರು ಸಂವಿಧಾನ ಪ್ರತಿಯನ್ನು ಕೈಯಲ್ಲಿ ಹಿಡಿದು, ನಮಗೆ ಸಂವಿಧಾನವನ್ನು ರಕ್ಷಿಸಬೇಕಾಗಿದೆ ಎಂದು ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ. ಆದರೆ ಅದೇ ಸಂವಿಧಾನಕ್ಕೆ ಅಪಮಾನ ಮಾಡಿದ್ದು ಕಾಂಗ್ರೆಸ್ ಪಕ್ಷ ನಾಯಕರು ಎಂದು ಸಂಸತ್ತಿನಲ್ಲಿ ಎಳೆಎಳೆಯಾಗಿ ಅಮಿತ ಶಾ ಅವರು ಕಾಂಗ್ರೇಸ್ ಪಕ್ಷದ ಕುಕೃತ್ಯವನ್ನು ಬಿಚ್ಚಿಟ್ಟರು. 

ಅಮಿತ ಶಾ ಅವರ ಭಾಷಣವನ್ನು ಅರಗಿಸಿಕೊಳ್ಳದ ಕಾಂಗ್ರೆಸ್ ಪಕ್ಷದ ನಾಯಕರು ಮೌನಕ್ಕೆ ಶರಣಾದರು ಇದರ ಅರ್ಥ ಅವರು 60 ವರ್ಷ ಮಾಡಿದ್ದು ತಪ್ಪು ಎಂದು ಮನವರಿಕೆಯಾಗಿ. ಸಂವಿಧಾನಕ್ಕೆ ಗೌರವ ಕೊಡುವವರು ಸಂವಿಧಾನ ದಿವಸಕ್ಕೆ ಏಕೆ ವಿರೋಧ ಮಾಡಿದರು? ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ಮಂಡಲ ಆಯೋಗ ಜಾರಿಗೆ ಮಾಡದೇ ಏಕೆ ವಿಳಂಬ ಮಾಡಿದರು? ಎಂದು ದೇವೇಂದ್ರ ದೇಸಾಯಿ ಕಲ್ಲೂ ಪ್ರಶ್ನಿಸುತ್ತಾ ಜನರು ಎಚ್ಚತ್ತು ಕೊಂಡಿದ್ದಾರೆ. ದೇಶ ವಿರೋಧಿ ಶಕ್ತಿಗಳನ್ನು ದಮನ ಮಾಡಲು ಸಂಕಲ್ಪ ಮಾಡಬೇಕಾಗಿದೆ. ಸಾಮಾನ್ಯ ಜನರು ಇದನ್ನು ಅರಿಯುವ ಕಾಲ ಬಂದಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.