ಕುಂಭಕರ್ಣ ನಿದ್ರೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ: ದೇವೇಂದ್ರ ದೇಸಾಯಿ ಟೀಕೆ
ಕುಂಭಕರ್ಣ ನಿದ್ರೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ: ದೇವೇಂದ್ರ ದೇಸಾಯಿ ಟೀಕೆ
ಕಲಬುರಗಿ: ನಗರದ ರಸ್ತೆಗಳನ್ನು ನೋಡಲು ಕಣ್ಣೇ ಇಲ್ಲವೇ? ಅಭಿವೃದ್ಧಿ ಕೆಲಸಗಳು ಎಲ್ಲಿಗೆ ಕಣ್ಮರೆಯಾಗಿವೆ?” ಎಂದು ಕಲಬುರಗಿ ನಗರ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ಅಜಯ್ ಸಿಂಗ್ ವಿರುದ್ಧ ತೀವ್ರ ಟೀಕೆ ಬಿರಿದರು.
ನಗರದ ಅಪ್ಪನ ಕೆರೆ, ಬಹಮನಿ ಸುಲ್ತಾನರ ಕೋಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಸೌಂದರ್ಯಕರಣದ ಅಭಿವೃದ್ಧಿ ಕಾರ್ಯ ನಡೆಯಬೇಕಿತ್ತು. ನೂರಾರು ಯುವಕರಿಗೆ ಉದ್ಯೋಗ ಸೃಷ್ಟಿಸಬಹುದಾಗಿತ್ತು. ಆದರೆ ಯಾವುದೇ ಕೆಲಸವೂ ನಡೆಯದೇ ಇದ್ದು, ೩೭೧(ಜೆ) ಅನುಷ್ಠಾನವಾದರೂ ಅಭಿವೃದ್ಧಿ ಶೂನ್ಯವಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
“ಡಾ. ಅಜಯ್ ಸಿಂಗ್ ಕೇವಲ ನಾಮಕವಾಸ್ತೆಯ ಅಧ್ಯಕ್ಷರು. ಸದಾ ಬೆಂಗಳೂರಲ್ಲೇ ಇರುತ್ತಾರೆ. ಕಲಬುರಗಿ ನಗರದ ಸಮಸ್ಯೆಗಳನ್ನು ನೋಡುವ, ಕೇಳುವ, ಪರಿಹರಿಸುವ ಮನಸ್ಸೇ ಇಲ್ಲ. ಸಭೆ-ಸಮಾರಂಭಗಳಲ್ಲೇ ಸೀಮಿತರಾದ ಅಧ್ಯಕ್ಷರು ಜನ ಸಮಸ್ಯೆಗಳಿಂದ ದೂರವಾಗಿದ್ದಾರೆ” ಎಂದು ವ್ಯಂಗ್ಯವಾಡಿದರು.
ರಸ್ತೆಯ ದುಸ್ಥಿತಿ ಕಡೆ ಯಾರ ದೃಷ್ಠಿ? ಕೇಂದ್ರ ಬಸ್ ನಿಲ್ದಾಣ ಎದುರಿನ ಮುಖ್ಯ ರಸ್ತೆ ಸಂಪೂರ್ಣ ಕೆಟ್ಟು ಕೆರಹಿಡಿದಿದೆ.
ಪಿಡಬ್ಲ್ಯುಡಿ ಹಾಗೂ ಮಹಾನಗರ ಪಾಲಿಕೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರಸ್ತಿ ಕೆಲಸವೂ ಆಗಿಲ್ಲ. ನಾಮಕವಾಸ್ತೆ ಎಂಬAತೆ ಅಲ್ಲಲ್ಲಿ ಒಂದೀಷ್ಟು ಜಲ್ಲಿಕಲ್ಲುಗಳನ್ನು ಹಾಕಿ ಅದರ ಮೇಲೆ ಮಣ್ಣು ಸುರಿದ್ದಾರೆ. “ಇಂಜಿನಿಯರ್‌ಗಳಿಗೆ ರಸ್ತೆಯ ಕುರಿತು ಚಿಂತನೆಯೇ ಇಲ್ಲದಿರುವುದು ದುರಂತ” ಕೇಳಲು ಹೋದರೆ ಬಜೇಟ್ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
“ಸಭೆ-ಸಮಾರಂಭಗಳ ಅಧ್ಯಕ್ಷರಾಗಬೇಡಿ”ತಿಂಗಳಿಗೊಮ್ಮೆ ಕಲಬುರಗಿಗೆ ಬರುವ ಅಧ್ಯಕ್ಷರು ಇಲ್ಲಿನ ಸಮಸ್ಯೆಗಳನ್ನು ಬಿಟ್ಟು ನೇರವಾಗಿ ಜೇವರ್ಗಿಗೆ ತೆರಳಿ, ಮತ್ತೆ ಅಲ್ಲಿಂದ ಬೆಂಗಳೂರಿನಲ್ಲಿ ಕಂಡುಬರುತ್ತಾರೆ ಎಂದು ಆರೋಪಿಸಿದರು.
“ಪತ್ರಿಕೆಗಳಲ್ಲಿ ಸುದ್ದಿ ಬರಿದಾಗ ಮಾತ್ರ ಜನರಿಗೆ ಅವರಿರುವುದು ಗೊತ್ತಾಗುತ್ತದೆ” ಎಂದು ಕಿಡಿಕಾರಿದರು. ಜನಜೀವನಕ್ಕೆ ತೊಂದರೆ -ನೀರು, ಸಂಚಾರ, ಕಸ ರಾಶಿ ಎಲ್ಲೆಡೆ ಅಲ್ಲದೇ ಹಿಂದೆ ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು; ಈಗ ವಾರಕ್ಕೊಮ್ಮೆ ಅಥವಾ ೧೦ ದಿನಕ್ಕೊಮ್ಮೆ ಬರುತ್ತಿರುವುದು ಮತ್ತು ಅಶುದ್ಧ ನೀರು ಪುರೈಕೆಯಾಗುತ್ತಿದೆ. ಇನ್ನೂ ಎಲ್ ಆಂಡ್ ಟಿ ಕಂಪನಿಯವರಿಗೆ ನಿರಂತರ ನೀರು ಸರಬರಾಜು ಯೋಜೆನೆ ಆಮೆ ಗತಿಯಲ್ಲಿ ನಡೆದಿದೆ ಎಂದು ಕಿಡಿಕಾರಿದರು.
ಬೇಸಿಗೆ ಆರಂಭವಾಗುತ್ತಿದ್ದAತೆ ನೀರಿನ ಸಮಸ್ಯೆ ಹೆಚ್ಚಳ ಖಾಸಗಿ ವಾಟರ್ ಫಿಲ್ಟರ್ ಸರಬರಾಜುದಾರರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬ ಶಂಕೆ ಜನರಲ್ಲಿ ಗಾಢವಾಗಿದೆ” ಶಂಕ್ಯ ವ್ಯಕ್ತವಾಗುತ್ತಿದೆ. ನಗರದ ಹಲವೆಡೆ ಕಸದ ರಾಶಿ, ಖಾಲಿ ನಿವೇಶನಗಳಲ್ಲಿ ಕಸ ತುಂಬಿರುವುದು, ಕಸದ ನಿರ್ವಹಣೆಯಲ್ಲಿ ನಗರದ ನೀರು-ಮಲಿನ ನಿರ್ವಹಣಾ ಮಂಡಳಿ ಸಂಪೂರ್ಣ ವಿಫಲವಾಗಿರುವುದು ಟೀಕೆಗೆ ಕಾರಣವಾಗಿದೆ. ಒಂದು ತಿಂಗಳ ಗಡುವು - ಇಲ್ಲವಾದರೆ ಬೃಹತ್ ಪ್ರತಿಭಟನೆಗೆ ಸಜ್ಜು “ಅಧ್ಯಕ್ಷರು ಮತ್ತು ಅಧಿಕಾರಿಗಳು ತಮ್ಮ ಮನಸ್ಸೊಚ್ಚಾ ಕೆಲಸ ಮಾಡುತ್ತಿದ್ದಾರೆ. ಸಾರ್ವಜನಿಕರ ಪ್ರತಿನಿಧಿಗಳಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಒಂದು ತಿಂಗಳ ಗಡುವು; ಬಳಿಕ ಬೃಹತ್ ಪ್ರತಿಭಟನೆ ಅನಿವಾರ್ಯ” ಎಂದು ದೇವೇಂದ್ರ ದೇಸಾಯಿ ಎಚ್ಚರಿಕೆ ನೀಡಿದರು.
