ಕೆಸರು ಗದ್ದೆಯಾದ ಹತ್ತಿಗೂಡುರ ಶಾಲಾ ಮೈದಾನ.

ಕೆಸರು ಗದ್ದೆಯಾದ ಹತ್ತಿಗೂಡುರ ಶಾಲಾ ಮೈದಾನ.

ಕೆಸರು ಗದ್ದೆಯಾದ ಹತ್ತಿಗೂಡುರ ಶಾಲಾ ಮೈದಾನ.

ಶಹಾಪುರ : ತಾಲೂಕಿನ ಹತ್ತಿಗುಡೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಳಚೆ ನೀರು ಹಾಗೂ ಮಳೆಯ ನೀರು ಸಂಗ್ರಹವಾಗಿ ಕೆಸರು ಗದ್ದೆಯಾಗಿ ಮಾರ್ಪಟ್ಟು ಮಕ್ಕಳಿಗೆ ಆಟ ಆಡುವುದಕ್ಕೆ ಮೈದಾನ ಇಲ್ಲದಂತಾಗಿದೆ.

ಶಾಲಾ ಆವರಣದಲ್ಲಿ ನೀರು ಹರಿದು ಪಾಚಿಗಟ್ಟಿ ಹಚ್ಚ ಹಸಿರಿನಿಂದ ಕೆಸರು ಗದ್ದೆಯಂತೆ ಕಾಣುತ್ತಿದೆ,ಬಹಳ ವರ್ಷಗಳಿಂದ ಈ ಸಮಸ್ಯೆ ಇದ್ದು ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗಿದೆ. ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಶಾಲಾ ಆವರಣ,ಸುಂದರ ಮತ್ತು ಸ್ವಚ್ಛವಾಗಿರಬೇಕು ಆದರೆ ಶಾಲಾ ಆವರಣ ಮಾತ್ರ ಅದೋಗತಿಗೆ ತಲುಪಿದೆ.

ಕಳೆದ ವರ್ಷಕ್ಕಿಂತ ಈ ಬಾರಿ ಸಮಸ್ಯೆ ತೀವ್ರವಾಗಿ ಉಂಟಾಗಿದ್ದು, ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಮತ್ತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯವರ ನಿರ್ವಹಣೆ ಕೊರತೆಯ ಇದಕ್ಕೆ ಮುಖ್ಯ ಕಾರಣ ಎಂದು ಯುವ ಮುಖಂಡ ಚಂದ್ರಶೇಖರ ನಾಟೇಕರ್ ಅಸಮಾಧಾನ ವ್ಯಕ್ತಪಡಿಸಿದರು.

ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೂ ತಂದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು,ಮುಂದಿನ ದಿನಗಳಲ್ಲಿ ಇದೇ ರೀತಿ, ಸಂಬಂಧಪಟ್ಟ ಅಧಿಕಾರಿಗಳು ನಡೆದುಕೊಂಡರೆ ಶಾಲೆಗೆ ಬೀಗ ಜಡೆದು,ರಾಜ್ಯ ಹೆದ್ದಾರಿ ಬಂದ್ ಮಾಡಲಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದರು.

ವರದಿ ಶಹಾಪುರ ಗ್ರಾಮೀಣ,ಬಸವರಾಜ ಶಿನ್ನೂರ