ನೀಲೂರ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ
ನೀಲೂರ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಆಗ್ರಹ
ಕಲಬುರಗಿ : ನೀಲೂರ ಗ್ರಾಮದ ಬಸ್ ತಗ್ಗುದಾಣ ಮತ್ತು ಗ್ರಾಮದಿಂದ ಮೇಳಕುಂದ ಕ್ರಾಸ್ ವರೆಗೆ ತಕ್ಷಣ ರಸ್ತೆ ಮಾಡಬೇಕೆಂದು ಅಲ್ಲಾಉದ್ದಿನ್ ಲದಾಫ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಫಜಲಪುರ ತಾಲೂಕಿನ ಸುಕ್ಷೇತ್ರ ನೀಲೂರ ಗ್ರಾಮದಲ್ಲಿ ಸೊಫಿ ಸಂತರಾದ ಸೈಯದ ಶಾ ಇಸ್ಮಾಯಿಲ ಖಾದ್ರಿ ದರ್ಗಾಕ್ಕೆ ದಿನ ಸಾವಿರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ಬಸ್ಸ ನಿಲ್ದಾಣದಲ್ಲಿ ಮಳೆ ಬಂದಾಗ ಕೆಸರಿನ ಗೂಡಾಗಿರುತ್ತದೆ. ಮತ್ತು ನೀಲೂರ ಕ್ರಾಸ್‌ನಿಂದ ಮೆಳಕುಂದಾ ಕ್ರಾಸ್‌ವರೆಗೆ ರಸ್ತೆ ಕೂಡಾ ಹದಗೆಟ್ಟಿದೆ. ಇದರಿಂದ ಸುಕ್ಷೇತ್ರ ನೀಲೂರಿಗೆ ಬರುವ ಭಕ್ತಾದಿಗಳಿಗೆ ಹಾಗೂ ನೀಲೂರು ಗ್ರಾಮಸ್ತರಿಗೆ ತುಂಬಾ ತೊಂದರೆಯಾಗುತ್ತಿದೆ. ಶಾಸಕರು ಇತ್ತ ಕಡೆ ಗಮನ ಹರಿಸಿ ರಸ್ತೆ ನಿರ್ಮಾಣ ಕಾರ್ಯ ಆದಷ್ಟು ಬೇಗ ಕೈಗೆತ್ತಿಕೊಳ್ಳಲು ಸಂಭಂದ ಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು, ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ನೀಲೂರ ಶಾಖೆಯ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ಪ್ರಕಾಶ್ ಬನ್ನಿಗಿಡ,ಕಲ್ಯಣಿ ಸಿಂಗೆ, ಮಹಾದೇವ ಸಿಂಗೆ ಇದ್ದರು