ಆ:25ರಂದು ಗಣಜಲಖೇಡದಲ್ಲಿ ಮೌನೇಶ್ವರರ ಜಾತ್ರಾಮಹೋತ್ಸವ

ಆ:25ರಂದು ಗಣಜಲಖೇಡದಲ್ಲಿ ಮೌನೇಶ್ವರರ ಜಾತ್ರಾಮಹೋತ್ಸವ

ಆ:25ರಂದು ಗಣಜಲಖೇಡದಲ್ಲಿ ಮೌನೇಶ್ವರರ ಜಾತ್ರಾಮಹೋತ್ಸವ

ಕಲಬುರಗಿ: ತಾಲೂಕಿನ ಸುಕ್ಷೇತ್ರ ಗಣಜಲಖೇಡ ಗ್ರಾಮದಲ್ಲಿ ಶ್ರೀ ಜಗದ್ಗುರು ಮೌನೇಶ್ವರರ ಜಾತ್ರಾ ಮಹೋತ್ಸವವು ಆಗಸ್ಟ 25ರಂದು ಅದ್ದೂರಿಯಾಗಿ ಜರುಗಲಿದೆ ಎಂದು ಶ್ರೀ ಜಗದ್ಗುರು ಮೌನೇಶ್ವರರ ಸೇವಾ ಸಮಿತಿ ಪ್ರಕಟಣೆಯ ಮೂಲಕ ತಿಳಿಸಿದೆ.

ಶ್ರಾವಣ ಮಾಸದ ಮುಕ್ತಾಯ ಸಮಾರಂಭದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಆಗಸ್ಟ್ 24 ರಂದು ಬೆಳಿಗ್ಗೆ 6ಗಂಟೆಗೆ ಅಷ್ಟಗಿ ಗ್ರಾಮದಿಂದ ಶ್ರೀ ಜಗನ್ಮಾತೆ ಕಾಳಿಕಾ ದೇವಿಯ ಪಲ್ಲಕ್ಕಿ ಉತ್ಸವವು ಪುರವಂತರ, ನಂದಿಕೋಲು, ಬಾಜಾ - ಭಜಂತ್ರಿಗಳೊಂದಿಗೆ ಆರಂಭಗೊಂಡು ಜಂಬಗಾ , ಕುಮಸಿ ಮಾರ್ಗವಾಗಿ ಸಾಯಂಕಾಲ ಗಣಜಲಖೇಡದಲ್ಲಿನ ಮೌನೇಶ್ವರರ ದೇವಸ್ಥಾನ ತಲುಪಲಿದೆ.

ಆಗಸ್ಟ್ 25ರಂದು ಲಿಂಗೈಕ್ಯ ಮಾಣಿಕ ಶಿವಯೋಗಿಗಳ ಆಶೀರ್ವಾದದೊಂದಿಗೆ ಪರಮ ಪೂಜ್ಯಶ್ರೀ ನಾಗೇಶ ಮುತ್ಯಾ ಅವರ ನೇತೃತ್ವದಲ್ಲಿ ಗದ್ದುಗೆಗೆ ಮಹಾ ಅಭಿಷೇಕ, ಜಗನ್ಮಾತೆ ಕಾಳಿಕಾದೇವಿ ಹಾಗೂ ಜಗದ್ಗುರು ಮೌನೇಶ್ವರರ ಜೋಡ ಪಲ್ಲಕ್ಕಿ ಉತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆ ನಡೆಯಲಿದೆ.

ಸಾಯಂಕಾಲ 6 ಗಂಟೆಗೆ ಪೂಜ್ಯಶ್ರೀ ನಾಗೇಶ ಮುತ್ಯಾ ಅವರಿಗೆ ಮೌನೇಶ್ವರ ದೇವಸ್ಥಾನದ ಭಕ್ತಾಧಿಗಳಿಂದ ತುಲಾಭಾರ ಕಾರ್ಯಕ್ರಮ ನಡೆಲಿದೆ.

ನಂತರ ಮಹಾ ಪ್ರಸಾದ, ದಿವ್ಯ ದರ್ಶನ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಬುರಗಿ ಸುದ್ದಿ : ನಾಗರಾಜ್ ದಂಡಾವತಿ