ಕಲಬುರಗಿ ರಂಗಾಯಣ ನಿರ್ದೇಶಕರೊಂದಿಗೆ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳ ಸಂವಾದ

ಕಲಬುರಗಿ ರಂಗಾಯಣ ನಿರ್ದೇಶಕರೊಂದಿಗೆ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳ ಸಂವಾದ

ಕಲಬುರಗಿ ರಂಗಾಯಣ ನಿರ್ದೇಶಕರೊಂದಿಗೆ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳ ಸಂವಾದ 

ವೈವಿದ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಹೆಸರಾಗಿರುವ ರಾವೂರ ಶ್ರೀ ಸಚ್ಚಿದಾನಂದ ಪ್ರೌಢ ಶಾಲೆಯ ಮಕ್ಕಳು ಕ್ರಿಯಾಶೀಲ ಶಿಕ್ಷಕ ಸಿದ್ದಲಿಂಗ ಬಾಳಿ ಅವರ ನೇತೃತ್ವದಲ್ಲಿ ಕಲಬುರಗಿಯ ರಂಗಾಯಣಕ್ಕೆ ಭೇಟಿ ನೀಡಿ ರಂಗಾಯಣ ನಿರ್ದೇಶಕರೊಂದಿಗೆ ಸಂವಾದ ನಡೆಸಿ ಗಮನ ಸೆಳೆದರು. ಮಕ್ಕಳಿಗೆ ರಂಗಾಯಣದ ಕಾರ್ಯಗಳ ಪರಿಚಯ ಮಾಡಿ ಮಾತನಾಡಿದ ನೂತನವಾಗಿ ಆಯ್ಕೆಯಾದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಮಕ್ಕಳ ಸಂವಾದದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರ ನೀಡಿ ಬೆನ್ನು ತಟ್ಟಿದ್ದರು. 

ಕಾರ್ಯಕ್ರಮದಲ್ಲಿ ಮಾತನಾಡಿದ ರಂಗಾಯಣ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ಅಳಿದು ಹೋಗುತ್ತಿರುವ ರಂಗಭೂಮಿಗೆ ಕಾಯಕಲ್ಪ ನೀಡಿ. ರಂಗ ಚಟುವಟಿಕೆಗಳನ್ನು ವಲಯ ಹಾಗೂ ಗ್ರಾಮೀಣ ಮಟ್ಟಕ್ಕೆ ವಿಸ್ತರಿಸುವ ಯೋಜನೆ ಹೊಂದಲಾಗಿದೆ. ಕಾಲೇಜು ಮಕ್ಕಳಿಗಾಗಿ ವಿವಿಧ ಯೋಜನೆ ಹಮ್ಮಿಕೊಂಡಿದ್ದೇವೆ. ನನ್ನ ಮೂರು ವರ್ಷಗಳ ಅವಧಿಯಲ್ಲಿ ವೈವಿದ್ಯಮಯ ರಂಗ ಚಟುವಟಿಕೆ ಹಮ್ಮಿಕೊಳ್ಳುವುದು, ಪ್ರೋತ್ಸಾಹಿಸುವುದು ಮತ್ತು ಪ್ರಚಾರ ಮಾಡುವ ಕೆಲಸವನ್ನು ಮಾಡಲಾಗುವುದು. ಈ ಎಲ್ಲಾ ಕೆಲಸಕ್ಕೆ ನಿಮ್ಮೆಲ್ಲರ ಮತ್ತು ಸಾರ್ವಜನಿಕರ ಸಹಕಾರ ಬಹಳ ಮುಖ್ಯವೆಂದು ಹೇಳಿದರು. 

ಸಾಧನೆಗೆ ಮುಖ್ಯವಾದದ್ದು ಏನು ಎಂಬ ಮಕ್ಕಳ ಪ್ರಶ್ನೆಗೆ ಉತ್ತರಿಸಿ ಸಾಧನೆಗೆ ಅಸಾಧ್ಯವಾದದ್ದು ಏನೂ ಇಲ್ಲ. ಆದರೆ ಸಾಧಿಸುವ ಛಲ ಇರಬೇಕು. ಗುರಿ ಇರಬೇಕು,ಪ್ರಯತ್ನ, ಕಠಿಣ ಪರಿಶ್ರಮ, ಧನತ್ಮಕ ಚಿoತನೆ, ಸ್ಪರ್ಧೆಗಳಲ್ಲಿ ಮುನ್ನುಗ್ಗುವ ಮನೋಭಾವನೆ, ಉತ್ತಮ ಆರೋಗ್ಯ, ಸೃಜನಶೀಲತೆ ಇವೆಲ್ಲಾ ನಮ್ಮನ್ನು ಸಾಧನೆ ಮಾಡಲು ಪ್ರೆರೇಪಿಸುತ್ತವೆ ಎಂದು ಹೇಳಿದರು.ನಾನು ವಿದ್ಯಾರ್ಥಿಯಾಗಿದ್ದಾಗ ಎಲ್ಲದರಲ್ಲೂ ಭಾಗವಹಿಸಿ ಸೈ ಎನಿಸಿಕೊಳ್ಳುತ್ತಿದ್ದೆ ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ರಂಗಭೂಮಿಯ ಚಟುವಟಿಕೆಗಳಿಂದ ನನ್ನಂತ ಒಬ್ಬ ಮಹಿಳೆಗೆ ಇಂತಹ ಸ್ಥಾನ ಲಭಿಸಿದೆ ಎಂದು ಹೇಳಿದರು.

ವೇದಿಕೆಯ ಮೇಲೆ ರಂಗಾಯಣದ ಉಪನಿರ್ದೇಶಕಿ ಜಗದೀಶ್ವರಿ ನಾಸಿ,ಸಿದ್ದಲಿಂಗ ಬಾಳಿ,ಶಿಕ್ಷಕಿ ಭುವನೇಶ್ವರಿ ಎಂ. ಉಪಸ್ಥಿತರಿದ್ದರು.25 ಮಕ್ಕಳು ಸಂವಾದ ನಡೆಸಿದರು.