17 ರಂದು ಬಿಹಾರ ರಾಜ್ಯದ ಪಟ್ನಾದಲ್ಲಿ || ಬೌದ್ಧರ ಶಾಂತಿರ್ಯಾಲಿ ಮತ್ತು ಬಹಿರಂಗ ಸಭೆ

17 ರಂದು ಬಿಹಾರ ರಾಜ್ಯದ ಪಟ್ನಾದಲ್ಲಿ ||  ಬೌದ್ಧರ ಶಾಂತಿರ್ಯಾಲಿ  ಮತ್ತು ಬಹಿರಂಗ ಸಭೆ

17 ರಂದು ಬಿಹಾರ ರಾಜ್ಯದ ಪಟ್ನಾದಲ್ಲಿ || ಬೌದ್ಧರ ಶಾಂತಿರ್ಯಾಲಿ ಮತ್ತು ಬಹಿರಂಗ ಸಭೆ

ಕಲಬುರಗಿ : ಬೋದಗಯ BT Act 1949 (BTMC) ವಿರುದ್ಧ, ಬಿಹಾರ ರಾಜ್ಯದ ರಾಜಧಾನಿ ಪಾಟ್ನಾದಲ್ಲಿ ದಿನಾಂಕ: 17.09.2024 ರಂದು 5 ಲಕ್ಷ ಬೌದ್ಧರ ಶಾಂತಿರ್ಯಾಲಿ ಮತ್ತು ಬಹಿರಂಗ ಸಭೆ ಆಯೋಜಿಸಲಾಗಿದೆ.ಎಂದರು ದೇವಿಂದ್ರ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಂವಿಧಾನದ ಪ್ರಕಾರ ದೇಶದ ಎಲ್ಲಾ ಹಿಂದು ದೇವಾಲಯಗಳು, ಹಿಂದುಗಳ ಆಡಳಿತದಲ್ಲಿ, ಮಸೀದಿ-ಮದರಸಾಗಳು ಮುಸ್ಲಿಂರ ಆಡಳಿತದಲ್ಲಿ, ಚರ್ಚಗಳು ಕ್ರೈಸ್ತರ ಆಡಳಿತದಲ್ಲಿ, ಗುರುದ್ವಾರಗಳು ಶಿಬ್ಬರ ಆಡಳಿತದಲ್ಲಿ ಜೈನ ಮಂದಿರಗಳು ಜೈನರ ಆಡಳಿತದಲ್ಲಿ ಇವೆ. ಆದರೆ ಬೌದ್ಧರ ಪವಿತ್ರ ಧಾರ್ಮಿಕ ಕ್ಷೇತ್ರ ಬುದ್ದಗಯ ಮಾತ್ರ ಬೌದ್ಧರ ಕೈಯಲ್ಲಿ ಇರದೇ ಹಿಂದುಗಳ ಆಡಳಿತದಲ್ಲಿದೆ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ. ಎಂದರು.

ಭಗವಾನ ಬುದ್ಧ ವಿಷ್ಣುವಿನ ಅವತಾರವೆಂದು ಬೌದ್ಧ ಧರ್ಮವು, ಹಿಂದು ಧರ್ಮದ ಭಾಗವೆಂದು ದಿಕ್ಕು ತಪ್ಪಿಸುತ್ತಿದ್ದಾರೆ.

ಈ ಅನ್ಯಾಯ ಕೂಡಲೇ ಕೇಂದ್ರ ಸರ್ಕಾರ ಮತ್ತು ಬಿಹಾರ ರಾಜ್ಯ ಸರ್ಕಾರ ಸರಿಪಡಿಸಿ ಈ ವಿಹಾರವನ್ನು ಸಂಪೂರ್ಣವಾಗಿ ಬೌದ್ಧರಿಗೆ ಹಸ್ತಾಂತರ ಮಾಡಬೇಕೆಂದು 1991 ರಿಂದ ನಾಗಪೂರದ ಡಾ| ಬಾಬಾ ಸಾಹೇಬ ಅಂಬೇಡ್ಕರ ರವರ ದೀಕ್ಷಭೂಮಿಯ ಅಧ್ಯಕ್ಷರಾಗಿರುವ ಜಪಾನ ಮೂಲದ ಬಂದಂತ ಆರ್ಯ ನಾಗಾರ್ಜುನ ಸುರೈ ಸಸಾಯಿ ಬಂತೇಜಿಯವರು ಹೋರಾಟ ಮಾಡುತ್ತ ಬಂದರು ಯಾವುದೇ ಆದೇಶವಾಗಿಲ್ಲ ಎಂದರು.

ನಿರಂತರವಾಗಿ ಅಖಿಲ ಭಾರತ ಬೌದ್ಧ ವೇದಿಕೆ ಮತ್ತು ಭಾರತದ ಎಲ್ಲಾ ಬೌದ್ಧಿ ಸಂಘಟನೆಗಳ ಬ್ಯಾನರ ಅಡಿಯಲ್ಲಿ ಬೋಧಿಸತ್ವ ಅನಾಗರಿಕ ದಮ್ಮಪಾಲರವರ 160ನೇ ಜನ್ಮದಿನ ಈ ಸಂದರ್ಭದಲ್ಲಿ ಆಚರಿಸಲಾಗುತ್ತಿದೆ ಎಂದರು.

ಈ ಹೋರಾಟಕ್ಕೆ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಜನ ಬೌದ್ಧ ಉಪಾಸಕರು, ಅಂಬೇಡ್ಕರ ಅನುಯಾಯಿಗಳು ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಹೋರಾಟಕ್ಕೆ ಕಲಬುರಗಿ ಜಿಲ್ಲೆಯ ದಲಿತ ಸಂಘಟನೆಗಳು, ಬೌದ್ಧ ಸಂಘ-ಸಂಸ್ಥೆಗಳು ಬೌದ್ಧ ಉಪಾಸಕರು ಮತ್ತು ಅಂಬೇಡ್ಕರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸಿ ಭಾಗವಹಿಸಬೇಕೆಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಎ.ಬಿ.ಹೋಸಮನಿ, ಅರ್ಜುನ್ ಭದ್ರೆ, ಸೂರ್ಯಕಾಂತ್ ನಿಂಬಾಳ, ಎಸ್.ಕೆ. ಕೊಲ್ಲೂರ್, ಸುರೇಶ್ ಹಾದಿಮನಿ, ಮಲ್ಲಪ್ಪ ಹೊಸಮನಿ, ಇದ್ದರು.